More

  ಗಡುವಿನೊಳಗೆ ಎಚ್‌ಎಸ್‌ಆರ್‌ಪಿ ಅಳವಡಿಕೆಯಾಗಲಿ

  • ಹಾಸನ: ವಾಹನಗಳ ಮಾಲೀಕರು ಅಂತಿಮ ಗಡುವಿನೊಳಗೆ ತಮ್ಮ ವಾಹನಗಳಿಗೆ ಐ-ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳನ್ನು (ಎಚ್‌ಎಸ್‌ಆರ್‌ಪಿ) ಅಳವಡಿಸಿ ಕೊಳ್ಳಬೇಕು ಎಂದು ಸಕಲೇಶಪುರ ಪ್ರಾದೇಶಿಕ ಸಹಾಯಕ ಸಾರಿಗೆ ಅಧಿಕಾರಿ ಮಧುರಾ ಹೇಳಿದರು.
  • ಬೇಲೂರು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ಸಕಲೇಶಪುರ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷಾ ಜಾಗೃತಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

  • ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುರಕ್ಷಿತ ಚಾಲನೆಗೆ ಹೆಚ್ಚಿನ ಪ್ರಾಮುಖ್ಯ ನೀಡಬೇಕು. 1966 ರಿಂದಲೂ ಇಂದಿನವರೆಗೆ ಸಾರಿಗೆ ಇಲಾಖೆಯಲ್ಲಿ ನಿತ್ಯ ಕಾನೂನು ತಿದ್ದುಪಡಿ ಮಾಡುತ್ತಿದ್ದು, ವಾಹನಗಳ ಸಂಪೂರ್ಣ ಮಾಹಿತಿಯುಳ್ಳ ಎಚ್‌ಎಸ್‌ಆರ್‌ಪಿ ಯೋಜನೆಯನ್ನು ಜಾರಿಗೆ ತರಲಾಗಿದೆ. 2019 ರಿಂದ ಆರಂಭವಾಗುವ ನೋಂದಣಿ ವಾಹನಗಳಿಗೆ ಕಡ್ಡಾಯವಾಗಿ ಐ ಸೆಕ್ಯೂರಿಟಿ ಪ್ಲೇಟ್ ಅಳವಡಿಸಲು ತಿಳಿಸಲಾಗಿದ್ದು, ಪ್ರತಿಯೊಬ್ಬ ವಾಹನ ಮಾಲೀಕರು ಫೆ.17ರ ಒಳಗೆ ಅನ್‌ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿಕೊಂಡು ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು. ಜತೆಗೆ ದೇಶದಲ್ಲಿ ರಸ್ತೆ ಅಪಘಾತಗಳಿಂದ ವಾರ್ಷಿಕವಾಗಿ 8 ಸಾವಿರ ಜನರು ಮರಣ ಹೊಂದುತ್ತಿದ್ದು, ಇದನ್ನು ತಗ್ಗಿಸಬೇಕಾದರೆ ವಾಹನ ಚಾಲಕರು ಸಾರಿಗೆ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

  • ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಪಟ್ಟಣದಲ್ಲಿ ವಾಹನಗಳ ದಟ್ಟಣೆಯಿಂದ ನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಬೇಲೂರಿಗೆ ಬರುವ ಪ್ರವಾಸಿಗರು ಹಾಗೂ ಸ್ಥಳೀಯರು ಮತ್ತು ಪಾದಚಾರಿಗಳು ಓಡಾಡಲು ತೊಂದರೆಯಾಗುತ್ತಿದೆ. ಅಲ್ಲದೆ ವಾಹನಗಳನ್ನು ರಸ್ತೆ ಪಕ್ಕದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಕೆಲ ಸಮಯ ವಾಹನಗಳು ಗಂಟೇಗಟ್ಟಲೆ ರಸ್ತೆಯಲ್ಲಿ ನಿಲ್ಲುವಂತಾಗಿದೆ. ಆದ್ದರಿಂದ ಸುಗಮ ಸಂಚಾರಕ್ಕಾಗಿ ಶೀಘ್ರದಲ್ಲೆ ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಸಿ ಅಲ್ಪ ಮಟ್ಟಿಗಾದರೂ ಟ್ರಾಫಿಕ್ ಸಮಸ್ಯೆ ನೀಗಿಸಲು ಪುರಸಭೆಯಿಂದ ಕ್ರಮ ಕೈಗೊಳ್ಳಲಾಗುವುದು. ವಾಹನಗಳ ಸವಾರರು ಸಹ ರಸ್ತೆ ಸುರಕ್ಷತೆಯ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಪ್ಪಿಸಬೇಕು ಎಂದರು.

  • ಸಾಹಿತಿ ನವಾಬ್ ಮಾತನಾಡಿ, ಜವಾಬ್ದಾರಿಯುತ ನಾಗರಿಕ ಸಮಾಜದಲ್ಲಿ ಸಾರಿಗೆ ನೀತಿಗಳಿಗೆ ಗೌರವ ನೀಡುವ ಮೂಲಕ ಸುಗಮ ಸಂಚಾರ ಮತ್ತು ತಮ್ಮ ಪ್ರಾಣಕ್ಕೆ ಮಹತ್ವ ನೀಡಬೇಕು ಎಂದರು. ತಹಸೀಲ್ದಾರ್ ಎಂ.ಮಮತಾ, ಸಾರಿಗೆ ಇನ್ಸ್‌ಪೆಕ್ಟರ್ ಆಶಾ, ಅಗ್ನಿಶಾಮಕ ಧಳದ ಇನ್ಸ್‌ಪ್ಟೇಕ್ಟರ್ ಜವರಯ್ಯ, ಎಎಸ್‌ಐ ವೀರೂಪಾಕ್ಷ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts