ಇನ್ನೂ ಪರಿಸ್ಥಿತಿ ಕೈಮೀರಿಲ್ಲ… ಬಿಜೆಪಿ ಆಪರೇಷನ್​ ಫೇಲ್ಯೂರ್​ ಮಾಡೋಣ… ಕಾಂಗ್ರೆಸ್​ ನಾಯಕರಿಗೆ ಎಚ್​ಡಿಡಿ ಸಮಾಧಾನ

Latest News

ಸಂಸದ, ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಕಾಣೆಯಾಗಿದ್ದಾರೆ ಹುಡುಕಿಕೊಡಿ: ದೆಹಲಿಯಲ್ಲಿ ಪತ್ತೆಯಾದ ನಾಪತ್ತೆ ಪೋಸ್ಟರ್​!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಲ್ಬಣಿಸಿರುವ ವಾಯುಮಾಲಿನ್ಯ ಪರಿಸ್ಥಿತಿಯನ್ನು ಕುರಿತು ಚರ್ಚಿಸಲು ಸಂಸದೀಯ ಸಮಿತಿ ಕರೆದಿದ್ದ ಸಭೆಗೆ ಗೈರುಹಾಜರಾದ ಪೂರ್ವ ದೆಹಲಿಯ ಬಿಜೆಪಿ...

ಮೂಡಬಿದರೆಯ ತೋಡಾರು ಗ್ರಾಮದ ಅಯ್ಯಪ್ಪ ಭಕ್ತರೊಂದಿಗೆ ಹೆಜ್ಜೆ ಹಾಕುತ್ತಿರುವ ಶ್ವಾನ

ಚಿಕ್ಕಮಗಳೂರು: ತಿರುಪತಿಯಿಂದ ಶಬರಿಮಲೆಗೆ ಪಾದಯಾತ್ರೆ ಮೂಲಕ ಹೊರಟಿರುವ ಭಕ್ತರ ತಂಡದ ಜತೆ ಶ್ವಾನವೊಂದು ತೆರಳಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ...

ವಿಆರ್​ಎಲ್​ ಪ್ರಾಯೋಜಕತ್ವದ ಹಾಫ್​ ಮ್ಯಾರಥಾನ್​ಗೆ ನಟಿ ಸುಮನ್ ನಗರ್‍ಕರ್ ಚಾಲನೆ: ಗಿನ್ನೆಸ್​ ದಾಖಲೆ ಬರೆದ ಓಜಲ್ ನಲವಡಿಗೆ ಸನ್ಮಾನ

ಹುಬ್ಬಳ್ಳಿ: ವಿಆರ್​ಎಲ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಹಾಫ್ ಮ್ಯಾರಥಾನ್​ಗೆ ಖ್ಯಾತ ನಟಿ ಸುಮನ್ ನಗರ್‍ಕರ್ ಅವರು ಫ್ಲ್ಯಾಗ್ ಆಫ್ ಮಾಡುವ ಮೂಲಕ ಭಾನುವಾರ ಚಾಲನೆ...

16 ವರ್ಷದ ಬಾಲಕನಿಂದ ಸೋದರಸಂಬಂಧಿ ಬಾಲಕಿ ಮೇಲೆ ಅತ್ಯಾಚಾರ

ಗುರುಗ್ರಾಮ: ಹದಿನಾರು ವರ್ಷದ ಬಾಲಕನೊಬ್ಬ ಸೋದರಸಂಬಂಧಿಯ 15 ವರ್ಷದ ಬಾಲಕಿಯನ್ನು ಮಂಚಕ್ಕೆ ಕಟ್ಟಿಹಾಕಿ ಅತ್ಯಾಚಾರ ಎಸಗಿರುವ ಆರೋಪ ಹರಿಯಾಣದ ಗುರುಗ್ರಾಮ 51ನೇ ವಲಯದಲ್ಲಿ...

ಜೀಪಿಗೆ ಅಡ್ಡ ಬಂದ ಕಾಡುಕೋಣವನ್ನು ಹಿಮ್ಮೆಟ್ಟಿಸಿದ ಶ್ವಾನ: ವಿಡಿಯೋ ವೈರಲ್​

ಚಿಕ್ಕಮಗಳೂರು: ವಾಹನಕ್ಕೆ ಅಡ್ಡ ಬಂದ ಕಾಡುಕೋಣವನ್ನು ಶ್ವಾನ ಹಿಮ್ಮೆಟ್ಟಿಸಿದ ಘಟನೆಯ ವಿಡಿಯೋ ಚಿತ್ರೀಕರಣ ವೈರಲ್​ ಆಗಿದೆ. ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದ ಕಾಫಿ ತೋಟದಲ್ಲಿ...

ಬೆಂಗಳೂರು: ಏನೊಂದು ಮುಗಿದಿಲ್ಲ…ಎಲ್ಲವೂ ಇನ್ನೂ ನಮ್ಮ ಕೈಯಲ್ಲಿದೆ… ಬಿಜೆಪಿ ಆಪರೇಷನ್​ ಫೇಲ್ಯೂರ್​ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳೋಣ…ಎಂದು ಕಾಂಗ್ರೆಸ್ ನಾಯಕರಿಗೆ ಎಚ್​.ಡಿ. ದೇವೇಗೌಡ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮುನ್ನ ಕಾಂಗ್ರೆಸ್​ನ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಎಲ್ಲವೂ ಮುಗಿದು ಹೋಯಿತು. ಮೈತ್ರಿ ಮುರಿದುಕೊಂಡು ಬಿಡೋಣ. ಬಿಜೆಪಿಯವರು ಬೇಕಾದರೆ ಸರ್ಕಾರ ರಚಿಸಿಕೊಳ್ಳಲಿ… ನಾವು ಪ್ರತಿಪಕ್ಷ ಸಾಲಿನಲ್ಲಿ ಕೂರೋಣ…ಎಂದು ಹೇಳಿದ್ದಕ್ಕೆ ದೇವೇಗೌಡರ ಪ್ರತಿಕ್ರಿಯೆ ಹೀಗಿದೆ.

ತಮ್ಮನ್ನು ಗುರುವಾರ ಭೇಟಿಯಾಗಿದ್ದ ಕಾಂಗ್ರೆಸ್​ನ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ಜತೆ ಎಚ್​.ಡಿ. ದೇವೇಗೌಡ ಮಾತುಕತೆ ನಡೆಸಿದರು. ಪ್ರಸ್ತುತ ಇರುವ ರಾಜಕೀಯ ಅನಿಶ್ಚಿತತೆ ಕೊನೆಯಾಗಿರುವ ಪರಿಹಾರ ಸೂತ್ರ ನಮ್ಮ ಬಳಿ ಇದೆ. ಹಳೆಯ ದೂರು ಆಧರಿಸಿ ರಮೇಶ್​ ಜಾರಕಿಹೊಳಿ, ಮಹೇಶ್​ ಕಮಟಹಳ್ಳಿ ಮತ್ತು ಆನಂದ್​ ಸಿಂಗ್​ ಅವರ ಶಾಸಕ ಸ್ಥಾನವನ್ನು ವಿಧಾನಸಭಾಧ್ಯಕ್ಷ ಕೆ.ಆರ್​. ರಮೇಶ್​ಕುಮಾರ್​ ರದ್ದುಗೊಳಿಸಲಿ ಎಂದು ಸಲಹೆ ನೀಡಿದರು.

ಜೆಡಿಎಸ್​ ಶಾಸಕರನ್ನು ನಾವು ವಾಪಸು ಕರೆಸಿಕೊಳ್ಳುತ್ತೇವೆ. ಮುಂಬೈನಲ್ಲಿರುವ ಶಾಸಕರನ್ನು ಕರೆತಂದು ತಮಗೆ ಒಪ್ಪಿಸುವಂತೆ ಮುಂಬೈ ಪೊಲೀಸರಿಗೆ ವಿಧಾನಸಭಾಧ್ಯಕ್ಷರು ಸೂಚಿಸಲಿ. ಆಗ ಮುಂಬೈ ಪೊಲೀಸರು ಅನಿವಾರ್ಯವಾಗಿ ಅವರನ್ನು ಕರೆತಂದು ಕರ್ನಾಟಕ ಪೊಲೀಸರಿಗೆ ಒಪ್ಪಿಸುತ್ತಾರೆ. ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್ ಬಳಿ ಇಟ್ಟುಕೊಂಡು, ಉಪಮುಖ್ಯಮಂತ್ರಿ ಸ್ಥಾನಕ್ಕೆ ಎಚ್​.ಡಿ. ರೇವಣ್ಣ ಅವರನ್ನು ನೇಮಿಸಿ, ಹೊಸ ಸರ್ಕಾರ ರಚಿಸಿ. ಮುಂಬೈನಲ್ಲಿ ಕುಳಿತು ಕಾಂಗ್ರೆಸ್​ನವರು ಸಿಎಂ ಆಗಬೇಕು ಎನ್ನುತ್ತಿರುವವರು ಈ ಸೂತ್ರಕ್ಕೆ ಯಸ್​ ಎನ್ನುತ್ತಾರೆ ಎಂದು ವೇಣುಗೋಪಾಲ್​ ಅವರಿಗೆ ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ.

ಈ ರೀತಿ ಬಿಜೆಪಿಯ ಆಪರೇಷನ್​ ಕಮಲವನ್ನು ವಿಫಲಗೊಳಿಸಬಹುದು. ಒಂದು ವೇಳೆ ಆಪರೇಷನ್​ ಕಮಲಕ್ಕೆ ಪ್ರಯತ್ನಿಸುವವರು ಪ್ರಯತ್ನಿಸಲಿ. ಆದರೆ ಕೊನೇವರೆಗೂ ನಾವು ಸರ್ಕಾರವನ್ನು ಉಳಿಸಿಕೊಳ್ಳುವ ನಮ್ಮ ಪ್ರಯತ್ನವನ್ನು ಮುಂದುವರಿಸೋಣ ಎಂದರು ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

- Advertisement -

Stay connected

278,507FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....