ಸಸಿನೆಡಲು ಪ್ರತಿಯೊಬ್ಬರೂ ಸಂಕಲ್ಪ ತೊಡಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ

3 Min Read
ಸಸಿನೆಡಲು ಪ್ರತಿಯೊಬ್ಬರೂ ಸಂಕಲ್ಪ ತೊಡಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ

ಮೈಸೂರು: ಪರಿಸರ ಸಮತೋಲನದಿಂದ ಕೂಡಿರಬೇಕಾದರೆ ರಾಜ್ಯದ ಪ್ರತಿಯೊಬ್ಬರೂ ಎರಡು ಗಿಡಗಳನ್ನು ನೆಡಲು ಸಂಕಲ್ಪ ತೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ರಾಜೀವ್ ಸ್ನೇಹ ಬಳಗ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನಿಂದ ಶನಿವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದ ಲಕ್ಷ ವೃಕ್ಷ ಯೋಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪರಿಸರ ಆರೋಗ್ಯಕರವಾಗಿ ಇರಬೇಕಾದರೆ ಶೇ.33ರಷ್ಟು ಅರಣ್ಯವಿರಬೇಕು ಎಂದು ವಿಶ್ವಸಂಸ್ಥೆ ವರದಿ ಹೇಳುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ಶೇ.30ರಷ್ಟು ಅರಣ್ಯ ಪ್ರದೇಶ ಇದೆ ಎಂದು ಅಂಕಿ-ಅಂಶ ಹೇಳಿದರೂ ಶೇ.19ರಿಂದ 20ರಷ್ಟು ಮಾತ್ರ ಅರಣ್ಯಪ್ರದೇಶ ಇದೆ ಎನ್ನುವ ಅಂದಾಜಿದೆ. ಆದ್ದರಿಂದ ರಾಜ್ಯದಲ್ಲಿರುವ ಏಳು ಕೋಟಿ ಜನರು ತಲಾ ಎರಡೆರಡು ಸಸಿಗಳನ್ನು ನೆಟ್ಟರೆ ಅರಣ್ಯ ಪ್ರದೇಶವನ್ನು ವಿಸ್ತರಣೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಪರಿಸರ ಸಂರಕ್ಷಣೆಗೆ ಮುಂದಾಗುವ ಜನರು ಮಾಡುವ ಒಳ್ಳೆೆಯ ಕೆಲಸಗಳನ್ನು ನೋಡುತ್ತ್ತಾ ನಿಂತುಕೊಳ್ಳದೆ, ಅವರು ಮಾಡುವ ಕೆಲಸಕ್ಕೆೆ ಅಸೂಯೇ ಪಡದೆ ಕೈ ಜೋಡಿಸಬೇಕು. ಕಾಡು ಉಳಿದರೆ ನಾಡು ಉಳಿಯುತ್ತದೆ. ಕಾಡು ಬೆಳೆದರೆ ನಾಡು ಬೆಳೆಯುತ್ತದೆ. ನಾಡು ಬೆಳೆದರೆ ಜನರು ಅಭಿವೃದ್ಧಿ ಹೊಂದುತ್ತಾರೆ. ಆದ್ದರಿಂದ ಹಸಿರು ಬೆಳೆಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರದ ಜತೆ ಸಾರ್ವಜನಿಕರು ಕೈ ಜೋಡಿಸಬೇಕು. ಸಸಿಗಳನ್ನು ಬೆಳೆಸುವುದು, ಕಾಪಾಡುವುದು ಒಳ್ಳೆೆಯ ಕೆಲಸ. ಪ್ರಕೃತಿ ನಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ ಹೊರತು ದುರಾಸೆಗಳನ್ನಲ್ಲ ಎಂದು ಮಹಾತ್ಮಗಾಂಧಿ ಅವರು ಹೇಳಿದ್ದಾರೆ. ಅದರಂತೆ ದುರಾಸೆಗಾಗಿ ಬಲಿಯಾಗುತ್ತಿರುವ ಪರಿಸರ ಕಾಪಾಡಲು ಪ್ರತಿಯೊಬ್ಬರೂ ತಲಾ ಎರಡು ಗಿಡ ನೆಡಬೇಕು ಎಂದು ಹೇಳಿದರು.
ಮಾನವನ ದುರಾಸೆಯಿಂದ ಕಾಡು ನಸಿಸಿ ಹೋಗುತ್ತಿದೆ. ಕಾಡು ಕಡಿಮೆಯಾದರೆ ತಾಪಮಾನ ಹೆಚ್ಚಾಗುತ್ತಿರುವುದು ಈ ಬೇಸಿಗೆಯಲ್ಲಿಯೇ ಜನರ ಅನುಭವಕ್ಕೆ ಬಂದಿದೆ. ಮಳೆ ಕಡಿಮೆಯಾಗಿ, ಉಷ್ಣತೆ ಹೆಚ್ಚಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಆದ್ದರಿಂದ ಗಾಳಿ, ನೀರು, ಭೂಮಿ, ಆಕಾಶ ಸ್ವಚ್ಛವಾಗಿ ಇದ್ದು, ಮಳೆ-ಬೆಳೆ ಚನ್ನಾಗಿ ಆಗಬೇಕಾದರೆ ಅರಣ್ಯವನ್ನು ವೃದ್ಧಿ ಮಾಡಬೇಕು ಎಂದರು.
ಮೈಸೂರನ್ನು ನಿವೃತ್ತರ ಸ್ವರ್ಗ ಎನ್ನುತ್ತಿದ್ದರು. ಬೆಂಗಳೂರನ್ನು ಉದ್ಯಾನ ನಗರಿ ಆಗಿತ್ತು. ಆದರೆ ತಾಪಮಾನ ಏರಿಕೆಯಿಂದ ಅದೆಲ್ಲ ಹೋಗಿಬಿಟ್ಟಿದೆ. ದೆಹಲಿಯಲ್ಲಿ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದ್ದರಿಂದ ತೀವ್ರ ತೊಂದರೆ ಅಗಿತ್ತು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮನುಕುಲ, ಜೀವ ಸಂಕುಲಕ್ಕೆ ತೊಂದರೆ ಅಗಲಿ ಎಂದು ಎಚ್ಚರಿಸಿದರು.
ಸಸ್ಯ ಸಂಭ್ರಮ ಕಿರು ಹೊತ್ತಿಗೆ ಲೋಕಾರ್ಪಣೆಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ನಮಗೆ ಸ್ವಾತಂತ್ರ್ಯ ಬಂದಾಗ ದೇಶದ ಜನಸಂಖ್ಯೆ 35 ಕೋಟಿಯಷ್ಟಿತ್ತು. ಆದರೆ ಈಗ 140 ಕೋಟಿ ದಾಟಿದ್ದು, ಪರಿಸರ ಕಾಪಾಡಬೇಕಿದೆ. ಹಿಂದೆ ಇದ್ದಷ್ಟೇ ಭೂಮಿ ಇದೆ. ಆದ್ದರಿಂದ ಜನಸಂಖ್ಯೆೆ ನಿಯಂತ್ರಣ ಮಾಡದೆ ಹೋದರೆ ಪರಿಸರ ರಕ್ಷಣೆ ಮಾಡುವುದು ಕಷ್ಟವಾಗುತ್ತದೆ. ಒಂದು ಮಗು ಸಾಕು ಎನ್ನುವ ಧೋರಣೆ ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಮೈಸೂರು ಜಿಲ್ಲೆೆಯಲ್ಲಿ ಸುಮಾರು 140 ಕಿ.ಮೀ. ವ್ಯಾಪ್ತಿಯಲ್ಲಿ ಗಿಡಗಳನ್ನು ನೆಡಲು ವಿಫುಲ ಅವಕಾಶವಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಸಸಿಗಳನ್ನು ಬೆಳೆಸಿದರೆ ಅರಣ್ಯ ವೃದ್ಧಿಸುತ್ತದೆ. ಗಿಡಗಳನ್ನು ನೆಡಲು ಎಚ್.ವಿ.ರಾಜೀವ್ ಸ್ನೇಹ ಬಳಗ ಮಾಡುತ್ತಿರುವ ಪ್ರಯತ್ನ ಎಲ್ಲರೂ ಮೆಚ್ಚುವಂತದ್ದು. ಸುಮಾರು ಒಂದು, ಎರಡು ವರ್ಷ ಗಿಡಗಳನ್ನು ಬೆಳೆಸಿ ನೀಡುತ್ತಿರುವುದರಿಂದ ಗಿಡಗಳು ಉಳಿದು ಬೆಳೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಸ್ವಚ್ಛತಾ ಅಭಿಯಾನ ಮಾಡಿಕೊಂಡು ಬರುತ್ತಿದ್ದ ಸ್ನೇಹ ಬಳಗದ ಸದಸ್ಯರು, 2019ರಿಂದ ನಿರಂತರವಾಗಿ ಗಿಡಗಳನ್ನು ಬೆಳೆಸಿ ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ. ಸಾರ್ವಜನಿಕರಿಂದ ಇನ್ನಷ್ಟು ಪ್ರೋತ್ಸಾಹ, ಸಹಕಾರ ಬೇಕಿದೆ. ಕೆರೆಕಕಟ್ಟೆಗಳನ್ನು ಸಂರಕ್ಷಿಸುವ ಕಾರ್ಯ ಮಾಡಬೇಕು ಎಂದು ಕೋರಿದರು.
ಬಿಳಿಗಿರಿರಂಗನ ಬೆಟ್ಟದ ಸಸ್ಯ ಸಂರಕ್ಷಕ ರಾಮೇಗೌಡ, ಬೆಂಗಳೂರಿನ ಸಸ್ಯ ಸಂವರ್ಧಕ ವಿ.ಶ್ರೀನಿವಾಸರಾಜು ಅವರಿಗೆ ಸಿರಿ ಸಂವರ್ಧನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.

See also  ಅಯ್ಯೋ ದುರ್ವಿಧಿಯೇ! ಅಯೋಧ್ಯೆಯಲ್ಲಿ ಬೈಕ್​ಗೆ ನೀಲಗಾಯ್​ ಡಿಕ್ಕಿ, ಸವಾರನ ಎದೆ ಸೀಳಿದ ಕೊಂಬು, ದುರಂತ ಸಾವು

ಕುಂದೂರು ಮಠದ ಡಾ. ಶರತ್ ಚಂದ್ರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಶಾಸಕ ತನ್ವಿರ್‌ಸೇಠ್, ಕರಾಮುವಿ ಕುಲಪತಿ ಶರಣಪ್ಪ ವಿ.ಹಲಸೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ.ಮಾಲತಿ ಪ್ರಿಯಾ ಇತರರು ಇದ್ದರು.

ಎಲ್ಲರಿಂದಲೂ ಸಹಕಾರ ದೊರೆಯಬೇಕು
ಐಷಾರಾಮಿ ಬಂಗಲೆಗಳಲ್ಲಿ ಎಸಿ, ಫ್ಯಾನ್‌ಗಳ ಮೂಲಕ ಗಾಳಿ ಬರುತ್ತದೆ. ಇದಕ್ಕೆೆ ಹಣವನ್ನು ಕೊಡಬೇಕು. ಆದರೆ ಹೊರಗೆ ಇರುವ ಮರದಡಿ ಕುಳಿತರೆ ಅಲ್ಲಿ ಉತ್ತಮ ಗಾಳಿ ಸಿಗುತ್ತದೆ. ಅದಕ್ಕೆೆ ಹಣ ಕೊಡಬೇಕಾಗಿಲ್ಲ. ಆದ್ದರಿಂದ ಗಿಡಗಳನ್ನು ನೆಟ್ಟು , ಅವುಗಳನ್ನು ಸಂರಕ್ಷಿಸುವ ಕೆಲಸ ಎಲ್ಲರಿಂದಲೂ ಆಗಬೇಕು.

ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ರೈತರೇ ಗಿಡಗಳನ್ನು ನೆಡುತ್ತಿಲ್ಲ
ರೈತರೇ ಜಮೀನುಗಳಲ್ಲಿ ಗಿಡಗಳನ್ನು ನೆಡುತ್ತಿಲ್ಲ. ಭೂಮಿ ಬೆಲೆ ಎರಿಕೆ ಒಂದೆಡೆಯಾದರೆ ಕೃಷಿ ಭೂಮಿ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಾ ಬರುತ್ತಿದೆ. ಇದು ಹೀಗೆಯೇ ಮುಂದುವರಿದರೆ ಭೂಮಿಯ ಮೇಲಿರುವ ಜೀವಿಗಳು ತಮ್ಮ ಅಸ್ಥಿತ್ವ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ನಗರಗಳ ಬೆಳವಣಿಗೆಗೆ ಕಡಿವಾಣ ಹಾಕಬೇಕಿದೆ.
ಕೆ.ವೆಂಕಟೇಶ, ಸಚಿವ

Share This Article