21 C
Bengaluru
Wednesday, January 22, 2020

ಬಾಲ್ಯ ಬದುಕಲು ಬಿಡಿ

Latest News

ಅರಸೀಕೆರೆ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ಆರೋಪ ತನಿಖೆ ನಡೆಸಿ ವಾರದೊಳಗೆ ವರದಿ‌ ಸಲ್ಲಿಸಿ ಎಂದು ಸೂಚಿಸಿದ ಸಚಿವ ಕೆ.ಎಸ್.ಈಶ್ವರಪ್ಪ

ಹಾಸನ: ಅರಸೀಕೆರೆ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ನಡೆದ ಆರೋಪವಿದ್ದು ತನಿಖೆ ನಡೆಸಿ ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಸಚಿವ...

ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಹೊತ್ತು 6 ಕಿ.ಮೀ ಸಾಗಿ ಆಸ್ಪತ್ರೆಗೆ ದಾಖಲಿಸಿದ ಯೋಧರ ತಂಡ

ಬಿಜಾಪುರ್​: ಸಿಆರ್​ಪಿಎಫ್​ ಯೋಧರ ತಂಡವೊಂದು ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಮಂಚದ ಮೇಲೆ ಹಾಕಿಕೊಂಡು ಸುಮಾರು 6 ಕಿ.ಮೀ ದೂರದ ಆಸ್ಪ್ರತೆಗೆ ನೆಡದುಕೊಂಡೇ...

ನೇಪಾಳ ದುರಂತ| ಮೂವರು ಮಕ್ಕಳ ಹುಟ್ಟುಹಬ್ಬಕ್ಕೆ ತೆರಳಿದ್ದ ಕೇರಳ ಕುಟುಂಬ ಮರಳಿದ್ದು ಶವವಾಗಿ

ಕೊಚ್ಚಿ: ನೇಪಾಳ ಪ್ರವಾಸಕ್ಕೆಂದು ತೆರಳಿ ಹೋಟೆಲ್​ವೊಂದರಲ್ಲಿ ದುರಂತ ಸಾವಿಗೀಡಾದ ಕೇರಳ ಮೂಲ ಕುಟುಂಬದ ಕರುಣಾಜನಕ ಕತೆಯಿದು. ಮೃತ ತಿರುವನಂತಪುರ ನಿವಾಸಿ ಪ್ರವೀಣ್​ ಮತ್ತು ಸರಣ್ಯ...

ಸರ್ಕಾರಿ ಆಸ್ಪತ್ರೆಗಳಲ್ಲಿರುವ ಉಪಕರಣಗಳಿಗೆ ಉಸಿರು ತುಂಬಿ!

ದಾವಣಗೆರೆ: ರಾಜ್ಯದಲ್ಲಿ ಸರಿಸುಮಾರು 3 ಸಾವಿರ ಸರ್ಕಾರಿ ಆಸ್ಪತ್ರೆಗಳಿದ್ದು, ನಿರ್ವಹಣೆ ಕೊರತೆ ಕಾರಣ ಬಹುತೇಕ ಆಸ್ಪತ್ರೆಗಳಲ್ಲಿನ ಉಪಕರಣಗಳು ಜೀವ ಕಳೆದುಕೊಂಡಿವೆ. ಹೀಗಾಗಿ ಸಾವಿರಾರು ರೋಗಿಗಳು...

ಕುಮಾರಸ್ವಾಮಿ ದುಷ್ಕರ್ಮಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತಿದೆ: ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ

ಹಾಸನ: ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿರುವ ಅನುಮಾನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮೀಣಾಭಿವೃದ್ಧಿ ಸಚಿವ...

ನಗುವಿನ ಸಂತೃಪ್ತಿ ಇರಬೇಕಾದ ಮುಗ್ಧಮುಖಗಳಲ್ಲಿ ವಿಷಾದದ ನೋವು. ಆಡುತ್ತ, ನಲಿಯುತ್ತ ಉಲ್ಲಾಸದ ಕ್ಷಣಗಳಲ್ಲಿ ಬದುಕು ಸಾಗಿಸಬೇಕಾದ ಮಕ್ಕಳಿಗೆ ದುಡಿಮೆಯ ಹೊರೆ. ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ದುಡಿಮೆಗೆ ತಳ್ಳುವುದು ಅಪರಾಧವಾಗಿದ್ದರೂ, ಈ ಪಿಡುಗು ಇನ್ನೂ ನಿವಾರಣೆಯಾಗಿಲ್ಲ. ಇಂಥ ಮಕ್ಕಳಿಗೆ ಬಾಲ್ಯ ಮರಳಿಸಲು ಅನೇಕ ಯುವಕ-ಯುವತಿಯರು ತಪಸ್ಸಿನಂತೆ ಕೆಲಸ ಮಾಡುತ್ತಿದ್ದು, ಆ ಹೈಜೋಶ್ ಪ್ರಯತ್ನದ ಸ್ಪೂರ್ತಿಕಥನ ಇಲ್ಲಿದೆ.

| ರವೀಂದ್ರ ಎಸ್. ದೇಶಮುಖ್

ಅದು ರಾಜಧಾನಿ ದೆಹಲಿಗೆ ಹೊಂದಿ ಕೊಂಡಿರುವ ಉತ್ತರಪ್ರದೇಶದ ಬಾಗಪತ್ ಜಿಲ್ಲೆ. ಗೋಧಿ ಕಟಾವು ಬಂದರೆ, ಭತ್ತದ ಸುಗ್ಗಿ ಸಮೀಪಿಸಿದರೆ ಮಕ್ಕಳು ತಿಂಗಳುಗಟ್ಟಲೇ ಶಾಲೆಗೇ ಬರೋದಿಲ್ಲ. ಹೀಗೆ ಗದ್ದೆ ಕಡೆ ಹೊರಟ ಮಕ್ಕಳ ಪೈಕಿ ಅದೆಷ್ಟೋ ಜನ ಮರಳಿ ಶಾಲೆ ಕಡೆ ಮುಖ ಮಾಡುವುದೇ ಇಲ್ಲ. ಜತೆಗೆ, ಇಟ್ಟಿಗೆ ಫ್ಯಾಕ್ಟರಿಗಳಲ್ಲಿ ದೊರೆಯುವ ದಿನಗೂಲಿ ಇವರನ್ನು ಆಕರ್ಷಿಸುತ್ತದೆ. 12-13 ವರ್ಷದ ಮಕ್ಕಳು ಭಾರವಾದ ವಸ್ತುಗಳನ್ನು ಹೊತ್ತು, ಬಿಸಿಲಲ್ಲಿ ಬೇಯುತ್ತ ದಿನವಿಡೀ ದುಡಿದರೆ ದೊರೆಯುವುದು ಬಿಡಿಗಾಸು. ಅದೂ ಇವರ ಕೈಯಲ್ಲಿ ಉಳಿಯೋದಿಲ್ಲ. ಕುಡಿತದ ಚಟ ಹೊಂದಿದ ಅಪ್ಪನೋ, ಚಿಕ್ಕಪ್ಪನೋ ಆ ಹಣ ಕಿತ್ತುಕೊಂಡು ಹೋಗುತ್ತಾನೆ. ಈ ಅವಧಿಯಲ್ಲಿ ಮಗುವಿನ ವರ್ತಮಾನ ಅಕ್ಷರದ ಬೆಳಕಿನಿಂದ ದೂರವಾಗುತ್ತ, ಭವಿಷ್ಯ ಕತ್ತಲೆಯತ್ತ ಸಾಗುತ್ತದೆ! ಉತ್ತಮ ಪದವಿ ಪಡೆದರೂ ಉದ್ಯೋಗ ಗಿಟ್ಟಿಸಿಕೊಳ್ಳಲು ಹರಸಾಹಸ ಪಡುವ ಇಂದಿನ ಸ್ಥಿತಿಯಲ್ಲಿ ಏನೂ ಕಲಿಯದಿರುವ ಯುವಕ-ಯುವತಿಯರ ಕಥೆಯೇನು?

ಈ ಸ್ಥಿತಿ ಬದಲಾಗಲೇಬೇಕು ಎಂದು ಸಂಕಲ್ಪಿಸಿ ಬಾಗಪತ್ ಜಿಲ್ಲೆಯ ಗ್ರಾಮ- ಗ್ರಾಮಗಳಿಗೂ ಹೊಕ್ಕು, ಇಂಥ ಮಕ್ಕಳಲ್ಲಿ ಅರಿವು ಮೂಡಿಸಿ ಅವರನ್ನು ಮತ್ತೆ ಕರೆತರುವ ಕೈಂಕರ್ಯ ಕನ್ನಡದ ಹುಡುಗನೊಬ್ಬನಿಂದ ನಡೆಯುತ್ತಿದೆ ಮತ್ತು ಅದಕ್ಕವರ ತಂಡ ಬೆಂಬಲವಾಗಿ ನಿಂತಿದೆ ಎಂಬುದು ವಿಶೇಷ. ಮೂಲತಃ ಉಡುಪಿಯವರಾದ, ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದ ಜೈದೀಪ್ ರಾವ್ ಹೀಗೊಂದು ಅರಿವು ಬಿತ್ತುವ ಮತ್ತು ದುಡಿಮೆಗೆ ಬಿದ್ದ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ಕೆಲಸದಲ್ಲಿ ಮಹತ್ವದ್ದನ್ನು ಸಾಧಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಇವರ ‘ನೋ ಯೂವರ್ ಸ್ಟಾರ್’ ಕಾರ್ಯಕ್ರಮ ಮಕ್ಕಳಲ್ಲಿ ಕಲಿಕಾ ಆಸಕ್ತಿಯನ್ನು ದ್ವಿಗುಣಗೊಳಿಸಿ, ಶಿಕ್ಷಕರ ಮನೋಲವನ್ನೂ ಕೂಡ ಹೆಚ್ಚಿಸಿದೆ. ರ್ತಬೆ ಫೌಂಡೇಷನ್ (ಜಠಿಠಿಟ://ಡಿಡಿಡಿ.ಠಿಚ್ಟkಛಿಢಚಿಛಿಜ್ಞಿ.ಟ್ಟಜ) ಈ ನಿಟ್ಟಿನಲ್ಲಿ ಎಂಟು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಾಲ್ಕು ಸಾವಿರಕ್ಕಿಂತ ಅಧಿಕ ಶಾಲೆಗಳ ಡ್ರಾಪ್​ಔಟ್ ಮಕ್ಕಳನ್ನು ಮರಳಿ ಶಾಲೆಗೆ ತರುವ ಮತ್ತು ಆ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿದೆ. ಈ ಫೌಂಡೇಷನ್ನಿನ ಭಾಗವಾಗಿರುವ ಜೈದೀಪ್ ರಾವ್- ‘5ರಿಂದ 8ನೇ ತರಗತಿಯ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಡ್ರಾಪ್​ಔಟ್ ಆಗುತ್ತಿದ್ದಾರೆ.

ನಿಜಕ್ಕೂ, ಈ ಸಂಖ್ಯೆ ಗಾಬರಿ ಹುಟ್ಟಿಸುವಂಥದ್ದು. ದುಡಿಮೆ ಹೆಸರಲ್ಲಿ ಮಕ್ಕಳು ಅಡ್ಡದಾರಿ ಹಿಡಿಯುವ ನಿದರ್ಶನಗಳೂ ಉಂಟು.

ಅವರಿಗೆ ಸರಿಯಾದ ಸಮಯದಲ್ಲಿ ಮನವೊಲಿಸಿದರೆ, ಶಿಕ್ಷಣದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರೆ ಕಸದ ಮಸಿ ಅಂಟಿಸಿಕೊಂಡಿರುವ ಕೈಗಳಲ್ಲಿ ಬಳಪ, ಪೆನ್ನು ಹಿಡಿಸಬಹುದು. ಈ ದಿಶೆಯಲ್ಲಿ ನಡೆಯುತ್ತಿರುವ ಪ್ರಯತ್ನಕ್ಕೆ ಉತ್ತಮ ಫಲಿತಾಂಶ ದೊರೆತಿದೆ. ಯಾವುದೇ ಕಾರಣಕ್ಕೂ 14 ವರ್ಷದೊಳಗಿನವರನ್ನು ದುಡಿಮೆಗೆ ಒಡ್ಡಬೇಡಿ. ಅದರಿಂದ ಅವರ ಬಾಲ್ಯವೇ ಸತ್ತು ಹೋಗುತ್ತದೆ’ ಎಂದು ಕಳಕಳಿಯಿಂದ ವಿನಂತಿಸುವ ಅವರು, ನೂರಾರು ಗ್ರಾಮೀಣ ಮಕ್ಕಳ ಮೊಗದಲ್ಲಿ ನಗು, ಆತ್ಮವಿಶ್ವಾಸ ಮರಳಿಸಿದ್ದಾರೆ.

ಮಕ್ಕಳ ಕೈಗೆ ಪೆನ್ನು…

ಕಾಲೇಜಿನ ಕ್ಯಾಂಟಿನ್ ನಲ್ಲಿ ಹುಡುಗರೆಲ್ಲ ‘ಛೋಟು ತಿಂಡಿ ತಗೊಂಡು ಬಾ, ಛೋಟು ಚಹಾ ತಗೊಂಡು ಬಾ’ ಅಂತೆಲ್ಲ ಹೇಳುತ್ತಿದ್ದರೆ ಈತ ಮಾತ್ರ ಇಂಥ ಅದೆಷ್ಟೋ ಛೋಟುಗಳು ಶಿಕ್ಷಣ, ಶಾಲೆ ಕಾಣದೆ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರಲ್ಲ ಎಂದು ಯೋಚಿಸುತ್ತಿದ್ದ. ಸಮಾಜದ ಬೇರೆ ಬೇರೆ ವಲಯಗಳಲ್ಲಿ ಇಂಥ ಬಾಲಕಾರ್ವಿುಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇರೋದನ್ನು ಕಂಡು ಇದಕ್ಕೆ ಪರಿಹಾರ ಕಂಡು ಹಿಡಿಯಬೇಕು, ದುಡಿಮೆಯ ಜಗತ್ತಿನಿಂದ ಹೊರ ತಂದು, ಉತ್ತಮ ಭವಿಷ್ಯ ಕಲ್ಪಿಸಬೇಕು ಎಂದು ಸಂಕಲ್ಪಿಸಿದ. ಹರ್ಷ ಕೋಠಾರಿ ಮೂಲತಃ ಗುಜರಾತಿನವರು. ಕಾಲೇಜ್ ಶಿಕ್ಷಣದ ಬಳಿಕವೂ ಈ ಬಾಲಕಾರ್ವಿುಕರ ವ್ಯಥೆ ಅವರನ್ನು ಕಾಡತೊಡಗಿತು. ಮನೆಯಲ್ಲಿ ತಂದೆ ಕೂಡ ಸೇವಾಭಾವದ ವ್ಯಕ್ತಿತ್ವದವರು. ಗುಜರಾತ ಭೂಕಂಪ ಪೀಡಿತರ ನೆರವಿಗೆ ಸಾಕಷ್ಟು ಶ್ರಮಿಸಿದರು. ತಂದೆಯಿಂದ ಪ್ರೇರಣೆ ಪಡೆದ ಹರ್ಷ’ ಹರ್ ಹಾತ್ ಕಲಂ’ (ಪ್ರತೀ ಕೈಗೂ ಲೇಖನಿ) ಅಭಿಯಾನ ಆರಂಭಿಸಿದರು. ಆದರೆ, ಬಾಲಕಾರ್ವಿುಕ ರನ್ನು ಮುಖ್ಯವಾಹಿನಿಗೆ ಕರೆತರುವುದು ಸುಲಭದ ಕೆಲಸವಾಗಿರಲಿಲ್ಲ. ಮಹಾನಗರಗಳಲ್ಲಿ ಅದೆಷ್ಟೋ ಜಾಲಗಳು ಮಕ್ಕಳನ್ನು ಭಿಕ್ಷಾಟನೆಗೆ ನೂಕಿ, ಶೋಷಣೆಗೈಯ್ಯುತ್ತಿದ್ದವು. ಈ ಎಲ್ಲ ಆಯಾಮಗಳ ಕುರಿತಂತೆ ಸಾಮಾಜಿಕ ಅಧ್ಯಯನ ನಡೆಸಿದ ಹರ್ಷ ಅಂಥ ಮಕ್ಕಳಿಗೆ ಮೊದಲು ಆಟೋಟ, ಸಾಂಸ್ಕೃತಿಕ ಚಟುವಟಿಕೆಗಳನ್ನು ವಾರಾಂತ್ಯದಲ್ಲಿ ಏರ್ಪಡಿಸುತ್ತ, ಅವರ ಆಸಕ್ತಿ, ಶಕ್ತಿಗಳನ್ನು ಅರಿತರು. ಕ್ರಮೇಣ ಅವರನ್ನು ಅಕ್ಷರಲೋಕದತ್ತ ಸೆಳೆಯುವ ಪ್ರಯತ್ನ ಆರಂಭವಾಯಿತು. ಕಾರ್ಖಾನೆಗಳಲ್ಲಿ, ಅಂಗಡಿಗಳಲ್ಲಿ ಬಿಡಿಗಾಸಿಗೆ ದುಡಿಯುತ್ತಿದ್ದ ಮಕ್ಕಳು ಆರೋಗ್ಯದ ಸಮಸ್ಯೆಯನ್ನೂ ಎದುರಿಸುತ್ತಿದ್ದರು. ಈ ಮಕ್ಕಳು ಮತ್ತು ಅವರ ಪಾಲಕರಲ್ಲೂ ಅರಿವು ಮೂಡಿಸುವ ಕೆಲಸವಾಯಿತು. ಡಾಬಾ, ಹೋಟೆಲ್​ಗಳ ಮಾಲೀಕರನ್ನು ಭೇಟಿ ಮಾಡಿ, ಬಾಲಕಾರ್ವಿುಕರನ್ನು ದುಡಿಸಿಕೊಳ್ಳದಂತೆ ತಿಳಿಹೇಳಿದರು. ಈ ಎಲ್ಲ ಯತ್ನಗಳು ಕ್ರಮೇಣ ಫಲ ನೀಡಿದ ಬಳಿಕ ಬಾಲಕಾರ್ವಿುಕರನ್ನು ಆ ಕೂಪದಿಂದ ಆಚೆ ತಂದು ಸಮೀಪದ ಶಾಲೆಗಳಿಗೆ ಸೇರಿಸಲಾಯಿತು. 3-4 ಜಿಲ್ಲೆಗಳಲ್ಲಿ ಪ್ರಾರಂಭವಾದ ಈ ಕಾರ್ಯ ಹಲವು ಪ್ರದೇಶಗಳಿಗೆ ವಿಸ್ತಾರವಾಯಿತು. ಇಂಥ ಮಕ್ಕಳ ಕೈಗೆ ಬಂದ ಲೇಖನಿ ಪವಾಡವನ್ನೇ ಮಾಡಿತು. ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಆಮೂಲಾಗ್ರ ಸುಧಾರಣೆ ಆಗತೊಡಗಿತು. ಮೊದಲಿಗೆ ಹರ್ಷ ಅವರ ಕೆಲಸ ಮತ್ತು ಪ್ರಯತ್ನಗಳನ್ನು ಕಂಡ್ ನಗಾಡುತ್ತಿದ್ದ ಅವರ ಸ್ನೇಹಿತರು ಮತ್ತು ಆತ್ಮೀಯರು ಸಕಾರಾತ್ಮಕ ಪರಿವರ್ತನೆ ಕಂಡು ಹರ್ಷ ಕೈಜೋಡಿಸಿದರು. ಪ್ರಸಕ್ತ ಅದೆಷ್ಟೋ ಛೋಟುಗಳು ಶಿಕ್ಷಣದ ಬಲದಿಂದ ಹೊಸ ಬದುಕು ಕಟ್ಟಿಕೊಳ್ಳುತ್ತ, ದೊಡ್ಡ ಕನಸುಗಳನ್ನು ಬೆಂಬತ್ತಿ ಸಾರ್ಥಕ ಹಾದಿಯಲ್ಲಿ ಸಾಗುತ್ತಿವೆ’. ಈ ಮಕ್ಕಳ ನಗು ಮತ್ತು ಆತ್ಮವಿಶ್ವಾಸದ ಮುಂದೆ ಯಾವ ಸಂತೋಷವು ಸರಿಸಾಟಿಯಲ್ಲ’ ಎಂದು ಭಾವುಕರಾಗಿ ನುಡಿಯುವ ಹರ್ಷ ಈ ಮಕ್ಕಳಲ್ಲೇ ದೇವರನ್ನು, ಸೇವೆಯ ಸೊಬಗನ್ನು ಕಂಡುಕೊಂಡಿದ್ದಾರೆ.

ಕೆಲಸ ಗಿಟ್ಟಿಸಿ ಕರಾಳಮುಖ ಬಹಿರಂಗ

2016. ಬಿಬಿಎ ಓದುತ್ತಿದ್ದ ಗುಜರಾತ್ ಅಹಮದಾಬಾದ್​ನ ಝುರ್ನಾ ಜೋಶಿ ರಜೆ ಕಳೆಯಲೆಂದು ಸಂಬಂಧಿಯ ಮನೆಗೆ ಹೋಗಿದ್ದಳು. ಅದೊಂದು ದಿನ ಅವಳು ಒಂದು ಬಸ್​ನಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗುವುದನ್ನು ನೋಡಿದಳು. ಬಹುತೇಕ ಮಕ್ಕಳೆಲ್ಲ 11-12 ವರ್ಷದವರು. ಅದು ಶಾಲಾಬಸ್ ಆಗಿರಲಿಲ್ಲ. ಆದ್ದರಿಂದ ಝುರ್ನಾಗೆ ಅನುಮಾನ ಬಂದು ಬಸ್ ಅನ್ನು ಹಿಂಬಾಲಿಸಿದಳು. ಅದು ರಾಜ್​ಕೋಟ್ ಬಳಿಯ ಫ್ಯಾಕ್ಟರಿ ಎದುರು ನಿಂತಿತು, ಅಲ್ಲೊಬ್ಬ ವ್ಯಕ್ತಿ ಮಕ್ಕಳನ್ನು ಒಳಗೆ ಕರೆದುಕೊಂಡು ಹೋದ. ಆಗ ಇವಳಿಗೆ ಇದು ಬಾಲಕಾರ್ವಿುಕರನ್ನು ದುಡಿಸಿಕೊಳ್ಳುವ ಕರಾಳಜಾಲ ಎಂದು ಖಾತ್ರಿಯಾಯಿತು. ಆದರೆ ಏಕಾಏಕಿ ದೂರು ನೀಡಲು ಸಾಕ್ಷ್ಯ ಇರಲಿಲ್ಲ. ಅದಕ್ಕೆ, ಮರುದಿನ ಅದೇ ಫ್ಯಾಕ್ಟರಿಗೆ ಹೋಗಿ ‘ನನಗೆ ನೌಕರಿಯ ಅಗತ್ಯವಿದೆ. ಯಾವ ಕೆಲಸ ಕೊಟ್ಟರೂ ಮಾಡ್ತೇನೆ’ ಅಂತ ಗೋಗರೆದು ಕೆಲಸ ಗಿಟ್ಟಿಸಿಕೊಂಡಳು. ಫ್ಯಾಕ್ಟರಿಯ ಡಿಸೈನಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಲೇ 15 ದಿನಗಳಲ್ಲಿ ಮಹತ್ವದ ವಿವರಗಳನ್ನು ಸಂಗ್ರಹಿಸಿದಳು.

14 ವರ್ಷದೊಳಗಿನ ನೂರಾರು ಮಕ್ಕಳು ಅತಿ ಹೆಚ್ಚು ಉಷ್ಣಾಂಶದ ಜಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಒತ್ತಾಯಪೂರ್ವಕವಾಗಿ ದುಡಿಸಿಕೊಳ್ಳಲಾಗುತ್ತಿತ್ತು. ಆ ಅವಧಿಯಲ್ಲಿ ಅವರನ್ನು ಗೇಟಾಚೆ ಹೋಗಲೂ ಬಿಡುತ್ತಿರಲಿಲ್ಲ. ಅತ್ಯಂತ ಅನಾರೋಗ್ಯಕರ ವಾತಾವರಣದಲ್ಲಿ ಆ ಮಕ್ಕಳು ಕಾರ್ಯನಿರ್ವಹಿಸುತ್ತಿದ್ದರು. ಪ್ರಬಲ ಸಾಕ್ಷ್ಯಗಳನ್ನೆಲ್ಲ ಸಂಗ್ರಹಿಸಿದ ಬಳಿಕ ಗಾಂಧಿನಗರಕ್ಕೆ ಬಂದು, ಸಂಬಂಧಿತ ಇಲಾಖೆಗೆ ದೂರು ನೀಡಿದಳು. ಬಳಿಕ, ಅಧಿಕಾರಿಗಳು ಫ್ಯಾಕ್ಟರಿ ಮೇಲೆ ದಾಳಿ ನಡೆಸಿ 111 ಮಕ್ಕಳನ್ನು ರಕ್ಷಿಸಿದರು. ಈ ಪೈಕಿ ಬಾಲಕಿಯರ ಸಂಖ್ಯೆಯೇ 100 ದಾಟಿತ್ತು.

ಝುರ್ನಾಳ ಅಸಾಧಾರಣ ಧೈರ್ಯ, ರಹಸ್ಯ ಕಾರ್ಯಾಚರಣೆಯ ಫಲವಾಗಿ 111 ಮಕ್ಕಳು ಹೊಸ ಜೀವನ ಕಾಣುವಂತಾಯಿತು. ಆದರೆ, ಸ್ವಲ್ಪ ದಿನಗಳ ಬಳಿಕ ದುಷ್ಕರ್ವಿುಗಳು ಝುರ್ನಾ ಮೇಲೆ ದಾಳಿ ನಡೆಸಿದರು. ತೀವ್ರ ಗಾಯಗಳೊಂದಿಗೆ ಹಲವು ದಿನಗಳ ಕಾಲ ಆಸ್ಪತ್ರೆ ವಾಸ ಅನುಭವಿಸಿದ ಝುರ್ನಾ- ‘ನನ್ನ ಈ ಹೋರಾಟ ಮುಂದುವರಿಯಲಿದೆ. ಮುಗ್ಧ ಮಕ್ಕಳ ಬಾಳು ಹಾಳಾಗಲು ಬಿಡುವುದಿಲ್ಲ’ ಎಂದು ಸಂಕಲ್ಪಿಸಿ, ಅದರಂತೆ ಸಾಮಾಜಿಕ ಕಾರ್ಯಕರ್ತೆಯಾಗಿ, ಬಾಲಕಾರ್ವಿುಕ ಮಕ್ಕಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಆಗಬೇಕಾದ್ದು

  • ಶಿಕ್ಷಣದಿಂದಲೇ ಬದುಕಿಗೆ ಭವಿಷ್ಯ ಎಂಬ ಅರಿವು ವಿಸ್ತರಿಸಬೇಕಿದೆ.
  • ವಿದ್ಯೆಯ ಶಕ್ತಿಯನ್ನು ಪರಿಚಯಿಸಿ ಕೊಟ್ಟು, ಅಕ್ಷರಲೋಕಕ್ಕೆ ಸೆಳೆಯಬೇಕಿದೆ.
  • ಕೆಲ ಸ್ವಾರ್ಥಶಕ್ತಿಗಳು ಮಕ್ಕಳ ಬಾಲ್ಯ ಹಾಳು ಮಾಡುತ್ತಿದ್ದರೆ ಕಾನೂನಿನ ಕ್ರಮ ಅವಶ್ಯ.
  • ಈ ಪಿಡುಗು ನಿವಾರಣೆ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಸಂಘಸಂಸ್ಥೆಗಳು, ಸಾಮಾನ್ಯ ಜನರ ಸಹಕಾರ ಅತ್ಯಗತ್ಯ.

ಹೀಗಿದೆ ಸ್ಥಿತಿ

2011ರ ಜನಸಂಖ್ಯಾ ವರದಿ ಪ್ರಕಾರ

  • ದೇಶದಲ್ಲಿರುವ ಬಾಲಕಾರ್ವಿುಕರ ಸಂಖ್ಯೆ ಸುಮಾರು 1.02 ಕೋಟಿ
  • 56 ಲಕ್ಷ ಬಾಲಕರು ಮತ್ತು 45 ಲಕ್ಷ ಬಾಲಕಿಯರು.
  • ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲಕಾರ್ವಿುಕರು 80 ಲಕ್ಷ
  • ನಗರಪ್ರದೇಶದಲ್ಲಿರುವ ಬಾಲಕಾರ್ವಿುಕರ ಸಂಖ್ಯೆ 20 ಲಕ್ಷ

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...