ಸವಣೂರ: ಇಂದಿನ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವುದು ಅವಶ್ಯವಾಗಿದೆ ಎಂದು ಕೂಡಲ ಗುರುನಂಜೇಶ್ವರ ಮಠದ ಶ್ರೀ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದಲ್ಲಿ ಗಜಾನನ ಮಿತ್ರ ಮಂಡಳಿಯ ಪದಾಧಿಕಾರಿಗಳು ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಹಾಗೂ ದ್ವೀತಿಯ ಪಿಯು ವಿದ್ಯಾಥಿರ್ಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಎಂಬಿಬಿಎಸ್ ಶಿಕ್ಷಣಕ್ಕೆ ಆಯ್ಕೆಗೊಂಡ ಗ್ರಾಮದ ಯುವಕ ಪ್ರಜ್ವಲ ದೊಡ್ಡಗೌಡ್ರ ಅವರನ್ನು ಸನ್ಮಾನಿಸಲಾಯಿತು. ವಿರೂಪಾಕ್ಷಯ್ಯ ಹಿರೇಮಠ, ಬಿ.ಎಲ್. ಪೂಜಾರಿ, ರುದ್ರಪ್ಪ ಹಲಸೂರು, ಚನ್ನಬಸವನಗೌಡ ಸಣ್ಣಗೌಡ್ರ, ಯಲ್ಲಪ್ಪ ನಾಯಕನೂರ, ಬಸವಣ್ಣಪ್ಪ ಹಲಸೂರು, ಗದಿಗೆಪ್ಪ ಹಲಸೂರು, ಮಂಜುನಾಥ ದೇಸಾಯಿ, ಸಿದ್ದಪ್ಪ ದೊಡ್ಡಮನಿ, ಸುರೇಶ ಹಲಸೂರು, ಉಳವಪ್ಪ ಹಲಸೂರು ಇತರರಿದ್ದರು. ಮಂಡಳಿಯ ರಾಜಶೇಖರ ಹುಲಸೂರ ಹಾಗೂ ಪ್ರದಿಪ ಹಲಸೂರು ಕಾರ್ಯಕ್ರಮ ನಿರ್ವಹಿಸಿದರು.