ಮುನವಳ್ಳಿ: ಬೆಳಗಾವಿಯ ಸುವರ್ಣವಿಧಾನಸೌಧ ಎದುರು ಪಂಚಮಸಾಲಿಗರು 2ಎ ಮೀಸಲಾತಿಗೆ ಒತ್ತಾಯಿಸಿ ಕೂಡಲಸಂಗಮ ಬಸವಜಯ ಮತ್ಯುಂಜಯ ಸ್ವಾಮೀಜಿ ನೇತತ್ವದಲ್ಲಿ ಹಮ್ಮಿಕೊಂಡಿದ್ದ ಬಹತ್ ಪ್ರತಿಭಟನೆ ಸಂದರ್ಭದಲ್ಲಿ ಗುಂಪು ಚದುರಿಸಲು ಲಾಠಿಚಾರ್ಜ್ ಮಾಡಿದ ಘಟನೆ ಖಂಡಿಸಿ ಗುರುವಾರ ಪಟ್ಟಣದ ಪಂಚಲಿಂಗೇಶ್ವರ ಕ್ರಾಸ್ ಬಳಿ ರಾಜ್ಯ ಹೆದ್ದಾರಿ ಸಂಚಾರ ತಡೆದು ಸಮುದಾಯದವರು ಪ್ರತಿಭಟನೆ ನಡೆಸಿದರು.
ಸಮುದಾಯದ ಮುಖಂಡ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಪಂಚಮಸಾಲಿ ಸಮುದಾಯದ ಮೇಲೆ ಸರ್ಕಾರ ಲಾಠಿಚಾರ್ಜ್ ಮಾಡಿರುವುದು ತೀವ್ರ ಖಂಡನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀಗಳ ಕ್ಷಮೆ ಕೋರಿ ರಾಜೀನಾಮೆ ನೀಡಬೇಕು. ಮತ್ತು ಎಡಿಜಿಪಿ ಅಧಿಕಾರಿಯನ್ನು ಕೆಲಸದಿಂದ ವಜಾಗೊಳಿಸಬೇಕು. ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಸುರೇಶ ಜಾವೂರ, ಡಾ.ರವಿ ಹನಸಿ, ಶಿವಾನಂದ ಮೇಟಿ, ಸುಭಾಸ ಗೀದಿಗೌಡರ, ಕಲ್ಲಪ್ಪ ನಲವಡೆ, ಪ್ರಕಾಶ ನಲವಡೆ, ಗುರು ಚಂದರಗಿ, ಶ್ರೀಕಾಂತ ಮಲಗೌಡ್ರ, ಅರುಣಗೌಡ ಪಾಟೀಲ, ಮಲ್ಲಣ್ಣ ಹನಸಿ, ಪಂಚಪ್ಪ ಹನಸಿ, ಗಂಗಪ್ಪ ಕುರಬಗಟ್ಟಿ, ಎ.ಐ. ಶಿರಸಂಗಿ, ಎ.ವಿ. ನರಗುಂದ, ಅಪ್ಪು ನುಗ್ಗಾನಟ್ಟಿ, ಮಾರುತಿ ನಲವಡೆ, ವೀರಣ್ಣ ಹನಸಿ ಇತರರಿದ್ದರು.