More

    ಮೈಸೂರಿನ ಫೆರಿಫೆರಲ್ ರಸ್ತೆಗೆ ಕೇಂದ್ರ ಅನುದಾನ ನೀಡಲಿ: ಪ್ರತಾಪಸಿಂಹ ಮನವಿ

    ಮೈಸೂರು: ಬೆಳೆಯುತ್ತಿರುವ ಮೈಸೂರಿಗೆ ಫೆರಿಫೆರಲ್ ರಸ್ತೆಯ ಅಗತ್ಯವಿದ್ದು, ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ನಿರ್ಮಿಸಿಕೊಡಬೇಕು ಎಂದು ಸಂಸದ ಪ್ರತಾಪ್‌ಸಿಂಹ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿದರು.
    ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರಿಗೆ ಬೆಂಗಳೂರಿನಿಂದ ಹತ್ತು ಪಥದ ರಸ್ತೆ ನಿರ್ಮಾಣಗೊಂಡ ಬಳಿಕ ಅಭಿವೃದ್ಧಿ ವೇಗ ಹೆಚ್ಚಾಗಿದೆ. ಇದರಿಂದ ನಗರದ ಹೃದಯಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ಇದರ ನಿವಾರಣೆಗೆ ಈಗ ಇರುವ ರಿಂಗ್‌ರೋಡ್ ಜೊತೆಗೆ ಫೆರಿಫೆರಲ್ ರಸ್ತೆಯೂ ಅಗತ್ಯವಿದೆ ಎಂದರು.
    ಫೆರಿಫೆರಲ್ ರಸ್ತೆ ನಿರ್ವಾಣಕ್ಕೆ ಡಿಪಿಆರ್ ತಯಾರಿಸಲು ಹತ್ತು ಕೋಟಿ ರೂ. ಮಂಜೂರು ಮಾಡಲಾಗಿದೆ. ಡಿಪಿಆರ್ ತಯಾರಾದ ಬಳಿಕ ಮಹತ್ವದ ಯೋಜನೆಗೆ ಅನುಮೋದನೆ ನೀಡಬೇಕು. ಅಲ್ಲದೇ ಪೂರ್ಣ ಪ್ರಮಾಣದಲ್ಲಿ ನಿರ್ಮಿಸಿಕೊಡಬೇಕು. ಮೆಟ್ರೋಪೋಲ್ ಸರ್ಕಲ್‌ನಿಂದ ಹಿನಕಲ್ ತನಕ ಫ್ಲೈಓವರ್ ನಿರ್ಮಿಸಬೇಕು, ಮೈಸೂರು ಮತ್ತು ನಂಜನಗೂಡು ರಸ್ತೆಯಲ್ಲಿ ಸವಿರ್ರ್ಸ್ ರಸ್ತೆ ಸೇರಿದಂತೆ ಆರು ಪಥದ ರಸ್ತೆ ನಿರ್ವಾಣಕ್ಕೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು.
    ಮೈಸೂರು ಮತ್ತು ಬೆಂಗಳೂರು ನಡುವಿನ ರಸ್ತೆ ಅಭಿವೃದ್ಧಿ ಬಗ್ಗೆ ಶ್ರೇಯಸ್ಸನ್ನು ನನಗೆ ಕೊಡುತ್ತಿದ್ದರೂ ನಿಜವಾಗಿ ಸಲ್ಲಬೇಕಾಗಿರುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ನಿತಿನ್‌ಗಡ್ಕರಿ ಅವರಿಗೆ ಎಂದು ಹೇಳಿದರು.
    ನಗರದ ರಿಂಗ್ ರಸ್ತೆ, ರಾಷ್ಟ್ರೀಯ ಹೆದ್ದಾರಿ ಸೇರಲು ಮತ್ತು ಮರು ಡಾಂಬರೀಕರಣ, ಮೈಸೂರು- ನರಸೀಪುರ ರಸ್ತೆ ವಿಸ್ತರಣೆ, ದೊಡ್ಡ ಆಲದ ಮರದ ತನಕ ನಾಲ್ಕು ಪಥದ ರಸ್ತೆಯನ್ನಾಗಿಸಲು ನಿತಿನ್‌ಗಡ್ಕರಿ ಅವರೇ ಕಾರಣ. ಅಲ್ಲದೇ ರಿಂಗ್ ರಸ್ತೆಯ ಏಳು ಕಡೆಗಳಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣಕ್ಕೆ, ವಿಶ್ವ ವಿದ್ಯಾನಿಲಯದ ಕ್ರಾಫರ್ಡ್ ಭವನದ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡಿದ್ದು, ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು.
    ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವುದರ ಜತೆಗೆ ಕರ್ನಾಟಕಕ್ಕೆ ಅತಿ ಹೆಚ್ಚಿನ ಅನುದಾನ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ರಾಜ್ಯದ ಜನರು ನಿಲ್ಲಬೇಕು ಎಂದು ಕೋರಿದರು.
    ಹಾಸನ ಜಿಲ್ಲೆಗೆ 10,500 ಕೋಟಿ ರೂ. ಅನುದಾನವನ್ನು ರಸ್ತೆ ಅಭಿವೃದ್ಧಿಗೆ ನೀಡಿದ್ದಾರೆ. ಎಚ್.ಡಿ.ದೇವೇಗೌಡರು ಸಾರ್ವಜನಿಕ ಕೆಲಸಗಳಿಗಾಗಿ ಯಾವಾಗ ಹೋದರೂ, ತಕ್ಷಣ ಮಂಜೂರು ಮಾಡಿಕೊಡಲಾಗುತ್ತಿದೆ. ದೇಶದಲ್ಲಿ ಯಾರೇ ವಿರೋಧಿಗಳು ಇದ್ದರೂ ನಿತಿನ್‌ಗಡ್ಕರಿ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಮುಂದೆ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಪರವಾಗಿ ನಿಲ್ಲಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts