ಅಥಣಿ ಗ್ರಾಮೀಣ: ಪುಣ್ಯದ ಕೆಲಸದೊಟ್ಟಿಗೆ ತನುಮನದಿಂದ ಸಾಧು-ಸಂತರ ಸೇವೆ ಮಾಡುವವರು ಮಾತ್ರ ಗುರು ಕೃಪೆಗೆ ಪಾತ್ರರಾಗುತ್ತಾರೆ ಎಂದು ಇಂಚಲ ಸಾಧು ಸಂಸ್ಥಾನಮಠ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಜನವಾಡ ಗ್ರಾಮದ ಸಿದ್ಧಾರೂಢ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವೇದಾಂತ ಪರಿಷತ್ 2ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ದಾನ, ಧರ್ಮ ಮಾಡಬೇಕು. ಸುಖ ಬಂದಾಗ ಹಿಗ್ಗದೆ, ದುಖಃ ಬಂದಾಗ ಕುಗ್ಗದೆ ಸ್ಥಿರವಾಗಿ ಜೀವನ ಸಾಗಿಸಬೇಕು. ನಿತ್ಯ ದೇವರ ನಾಮಸ್ಮರಣೆ ಮಾಡಬೇಕು. ಎಲ್ಲರೂ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು ಎಂದರು.
ಹುಬ್ಬಳ್ಳಿ ಜಡಿಸಿದ್ಧೇಶ್ವರಮಠದ ರಾಮಾನಂದ ಸ್ವಾಮೀಜಿ ಮಾತನಾಡಿ, ಸಜ್ಜನರ ಸಂಘ ಮಾಡುವುದರಿಂದ ಒಳ್ಳೆಯ ನಡೆ-ನುಡಿಯೊಂದಿಗೆ ಭಗವಂತ ಪ್ರೀತಿಗೆ ಪಾತ್ರರಾಗಲು ಸಾಧ್ಯ. ನಾಳೆ ಬಗ್ಗೆ ಚಿಂತಿಸದೆ ಇಂದು ಬಂದದ್ದನ್ನು ಆನಂದಿಸಬೇಕು ಎಂದು ಹೇಳಿದರು.
ಜನವಾಡ ಸಿದ್ಧಾರೂಢಮಠದ ಪರಮಾನಂದ ಸ್ವಾಮೀಜಿ ಮಾತನಾಡಿದರು. ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರಿಗೆ ತುಲಾಭಾರ ಹಾಗೂ ತೊಟ್ಟಿಲೋತ್ಸವ ನೆರವೇರಿಸಲಾಯಿತು.
ಹನುಮಂತ ಗೂಗವಾಡ, ಮಹಮ್ಮದ ಕಮಾಲನವರ, ಬಸಪ್ಪ ಯಲಶೆಟ್ಟಿ, ಗುರುಪಾದ ಪಾಟೀಲ, ಮಹಾದೇವ ಧರಿಗೌಡ, ಶಂಕರ ನೇಮಗೌಡ, ಸತ್ಯಪ್ಪ ಜಾಮಗೌಡ, ರಾಜು ಸವದಿ, ಕುಮಾರ ಗುರವ, ಮಲ್ಲಪ್ಪ ಜಂಬಗಿ, ಬಾಜಿರಾವ್ ಪಾಟೀಲ, ಪ್ರವೀಣ ಬಾಡಗಿ, ಬಸಪ್ಪ ದೊಡಮನಿ, ಆನಂದ ಬಡೂರ ಇತರರಿದ್ದರು. ಮುಖ್ಯಶಿಕ್ಷಕ ಎಸ್.ಎಲ್.ಬಾಡಗಿ ನಿರೂಪಿಸಿದರು.