ಬೇಳೂರು ಸುಳ್ಳು ಹೇಳುವುದನ್ನು ನಿಲ್ಲಿಸಲಿ

blank

ತ್ಯಾಗರ್ತಿ: ನೀವೂ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿ. ನಾವು ಮಂಜೂರು ಮಾಡಿಸಿದ ಕೆಲಸವನ್ನೂ ಮುಂದುವರಿಸಿ. ಈ ಬಗ್ಗೆ ನಮ್ಮಿಂದ ಯಾವ ತಕಕಾರೂ ಇಲ್ಲ. ಆದರೆ ಈ ಹಿಂದೆ ನನ್ನ ಅವಧಿಯಲ್ಲಿ ಮಂಜೂರಾಗಿರುವ ಎಲ್ಲ ಕಾಮಗಾರಿಗಳನ್ನು ನಾನೇ ತಂದಿದ್ದು, ಮಾಡಿದ್ದು ಎಂದು ಪದೇಪದೆ ಸುಳ್ಳು ಹೇಳುವುದನ್ನು ಶಾಸಕ ಗೋಪಾಲಕೃಷ್ಣ ಬೇಳೂರು ನಿಲ್ಲಿಸಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಆಗ್ರಹಿಸಿದರು.
ತ್ಯಾಗರ್ತಿ ಮಾರಿಕಾಂಬಾ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2022ರ ನವೆಂಬರ್‌ನಲ್ಲಿ ಮಂಜೂರಾದ ಹಲವು ಕಾಮಗಾರಿಗಳ ಮಂಜೂರಾತಿ, ಟೆಂಡರ್ ಪ್ರಕ್ರಿಯೆಯಾಗಿರುವ ಪತ್ರ ಬಿಡುಗಡೆಗೊಳಿಸಿದರು. ನನ್ನ ಅವಧಿಯಲ್ಲಿ ಮಂಜೂರಾಗಿ, ಆಗಲೇ ಟೆಂಡರ್ ಆದ ಕಾಮಗಾರಿಗಳನ್ನು ಈಗ ತಾವು ಅನುದಾನ ತಂದಿದ್ದು, ಕೆಲಸ ಮಾಡಿದ್ದು ಎಂದು ದೇವಸ್ಥಾನದ ಸಭೆ, ಶಾಲಾ ವಾರ್ಷಿಕೋತ್ಸವದಲ್ಲಿ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ನಾನು ಸಾಗರ ಕ್ಷೇತ್ರಕ್ಕೆ ಒಮ್ಮೆ ಮಾತ್ರ ಶಾಸಕನಾಗಿದ್ದೆ. ಆಗ 888 ರಸ್ತೆಗಳನ್ನು ಮಂಜೂರು ಮಾಡಿಸಿ ಬಹುತೇಕ ಕಾಮಗಾರಿ ಪೂರೈಸಲಾಗಿತ್ತು. 2022ರ ಕೊನೆಯಲ್ಲಿ ಹಾಗೂ 2023ರ ಆರಂಭದಲ್ಲಿ ಮಂಜೂರು ಮಾಡಿಸಿದ ಕಾಮಗಾರಿಗಳು ಈಗ ನಡೆಯುತ್ತಿವೆ. ಇದೆಲ್ಲದಕ್ಕೂ ಅಂದು ನಾನು ಮಂಜೂರು ಮಾಡಿಸಿರುವ ದಾಖಲೆಗಳನ್ನು ಜನರ ಮುಂದಿಡುತ್ತೇನೆ. ನೀವು ಮಂಜೂರು ಮಾಡಿಸಿದ್ದು ಹೌದಾದರೆ ದಾಖಲೆ ಕೊಡಿ. ಸುಮ್ಮನೆ ಸುಳ್ಳು ಹೇಳಿ ನಗೆಪಾಟಲಿಗೆ ಗುರಿಯಾಗಬೇಡಿ ಎಂದು ಲೇವಡಿ ಮಾಡಿದರು.
ನಾನು ಮಂಜೂರು ಮಾಡಿಸಿದ್ದು ಸುಳ್ಳಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಪದೇಪದೆ ಸುಳ್ಳು ಹೇಳುವ ನಿಮ್ಮ ನಿಲುವೇನು? ದಾಖಲೆ ಎಲ್ಲಿದೆ? ಮಂಜೂರಾತಿ ವಿವರದ ಪತ್ರವನ್ನು ಮನೆಮನೆಗೂ ತಲುಪಿಸಿ ಸಾರ್ವಜನಿಕವಾಗಿ ಬಹಿರಂಗ ಮಾಡಲಾಗುವುದು ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ತ್ಯಾಗರ್ತಿಯಲ್ಲಿ ಈಡಿಗರ ಸಮುದಾಯ ಭವನಕ್ಕೆ 1.5 ಕೋಟಿ ರೂ. ಮಂಜೂರು ಮಾಡಿಸಲಾಗಿದೆ. ಮುಖ್ಯ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ನೀಡಲಾಗಿದೆ ವಿದ್ಯುತ್ ಗ್ರಿಡ್ ಸೇರಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಲ್ಲದಕ್ಕೂ ದಾಖಲೆ ಇದೆ. ಕರೊನಾ ಸಂದರ್ಭದಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಹೊನಗೋಡು ರತ್ನಾಕರ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ದೇವೇಂದ್ರಪ್ಪ, ಗ್ರಾಪಂ ಸದಸ್ಯರಾದ ಇಸಾಕ್, ಗೀತಾ ಪರಶುರಾಮ, ಹನುಮಂತ, ಎಚ್.ಶಿವಪ್ಪ, ಪ್ರಮುಖರಾದ ಕೃಷ್ಣಮೂರ್ತಿ, ಕೆ.ಬಿ.ಗಣಪತಿ, ಪಾಂಡುರಂಗ, ಧನರಾಜ್, ಯೋಗೀಶ್‌ಕುಮಾರ್ ಇತರರಿದ್ದರು.

Share This Article

ಕೂಡಲೇ ಇವುಗಳನ್ನು ತಿನ್ನುವುದನ್ನು ನಿಲ್ಲಿಸದಿದ್ರೆ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗೋದು ಗ್ಯಾರಂಟಿ! Sperm Count

Sperm Count : ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು…

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…