Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

4 ಸಾವಿರವೂ ದಾಟದ ಕಡಿಮೆ ವಿದ್ಯಾರ್ಥಿಗಳ ಶಾಲೆಗಳು!

Friday, 13.07.2018, 3:03 AM       No Comments

| ದೇವರಾಜ್ ಎಲ್. ಬೆಂಗಳೂರು

ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಬಗ್ಗೆ ಚರ್ಚೆ ಏನೋ ಜೋರಾಗಿ ನಡೆಯುತ್ತಿದೆ. ಆದರೆ, ಸರ್ಕಾರ ಬಜೆಟ್​ನಲ್ಲಿ ಪ್ರಸ್ತಾಪಿಸಿರುವ 28 ಸಾವಿರ ಶಾಲೆಗಳು ಎಲ್ಲಿವೆ ಎಂಬುದೇ ಈಗಿರುವ ಪ್ರಶ್ನೆಯಾಗಿದೆ.

ಬಜೆಟ್​ನಲ್ಲಿ 1 ಕಿ.ಮೀ. ವ್ಯಾಪ್ತಿಯಲ್ಲಿರುವ ಮತ್ತು ದಾಖಲಾತಿ ಕಡಿಮೆ ಇರುವ 28,847 ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಹತ್ತಿರದ 8530 ಶಾಲೆಗಳಿಗೆ ವಿಲೀನಗೊಳಿಸುವಂತೆ ಘೋಷಣೆ ಮಾಡಿದೆ. ಆದರೆ, ಈ ಅಂಕಿ-ಅಂಶ ಹೊಸದೊಂದು ಸಮಸ್ಯೆಯನ್ನು ಸೃಷ್ಟಿಸಿದೆ.

ಅಸಲಿ ವಿಷಯವೆಂದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಳಿ 28,847 ಶಾಲೆಗಳ ಜಿಲ್ಲಾವಾರು ಪಟ್ಟಿಯೇ ಸಿಗುತ್ತಿಲ್ಲ. ಇದರಿಂದ ನಿಜಕ್ಕೂ ಕಡಿಮೆ ಹಾಜರಾತಿ ಹೊಂದಿರುವ 28 ಸಾವಿರ ಶಾಲೆಗಳು ಎಲ್ಲಿವೆ? ಎಂದು ಅಧಿಕಾರಿಗಳು ಹುಡುಕಾಟ ಪ್ರಾರಂಭಿಸಿದ್ದಾರೆ.

ಜೂನ್​ನಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ರಾಜ್ಯದ ಎಲ್ಲ ಜಿಲ್ಲಾ ಉಪನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಶೂನ್ಯ ಪ್ರವೇಶ ಹೊಂದಿರುವ 318 ಸರ್ಕಾರಿ ಶಾಲೆಗಳಿವೆ ಎಂದು ನಮೂದಿಸಿದ್ದಾರೆ. ಈ ಶಾಲೆಗಳಲ್ಲಿ 366 ಶಿಕ್ಷಕರು ಕೆಲಸವಿಲ್ಲದಿದ್ದರೂ ಮಾಸಿಕ ವೇತನ ಪಡೆಯುತ್ತಿದ್ದು, ಮರುಹಂಚಿಕೆ ಮಾಡುವಂತೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ 43,712 ಸರ್ಕಾರಿ ಶಾಲೆಗಳಿವೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚಿನ ಶಾಲೆಗಳು ವಿಲೀನ ಎಂದರೆ ಸಾಮಾನ್ಯವೇ ಎಂಬುದು ಇದೀಗ ಇಲಾಖೆಗೆ ಗಮನಕ್ಕೆ ಬಂದಿದೆ. ಅಧಿಕಾರಿಗಳು ಸಹ ಜಿಲ್ಲಾವಾರು ಪಟ್ಟಿ ನೀಡಲು ನಿರಾಕರಿಸುತ್ತಿದ್ದಾರೆ.

ಬಜೆಟ್​ಗೆ ಮಾಹಿತಿ ನೀಡಿದ್ಯಾರು?: ಬಜೆಟ್​ನಲ್ಲಿ ಘೋಷಣೆ ಮಾಡಲು 28 ಸಾವಿರ ಶಾಲೆಗಳ ಮಾಹಿತಿ ನೀಡಿದವರು ಯಾರು? ಎಂಬ ಬಗ್ಗೆ ಹುಡುಕಾಟ ನಡೆಯುತ್ತಿದೆ. ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಇಲಾಖೆಯ ಕೆಳಹಂತದ ಅಧಿಕಾರಿಗಳನ್ನು ಪ್ರಶ್ನಿಸಿದಾಗಲೂ ಪಟ್ಟಿ ಲಭ್ಯವಿಲ್ಲ ಎಂದು ತಿಳಿಸಿರುವುದನ್ನು ಸರ್ಕಾರಿ ಹಂತದ ಉನ್ನತ ಮಟ್ಟದ ಮೂಲಗಳು ‘ವಿಜಯವಾಣಿ’ಗೆ ಸ್ಪಷ್ಟಪಡಿಸಿವೆ.

ಅಂಕಿ-ಅಂಶಗಳ ತುಲನೆ: ರಾಜ್ಯದಲ್ಲಿ ಶೂನ್ಯ ಪ್ರವೇಶ ಹೊಂದಿರುವ 54 ಸರ್ಕಾರಿ ಪಿಯು ಕಾಲೇಜುಗಳಿರುವುದನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ 1200 ಸರ್ಕಾರಿ ಪಿಯು ಕಾಲೇಜುಗಳಿವೆ. ಇದೇ ರೀತಿ ಅಂದಾಜು ಲೆಕ್ಕ ಹಾಕಿದರೂ 1 ರಿಂದ 10 ಮಕ್ಕಳಿರುವ 3594 ಶಾಲೆಗಳಿವೆ. ಇದಕ್ಕೆ ಶೂನ್ಯ ಪ್ರವೇಶವಿರುವ 318 ಶಾಲೆ ಸೇರಿಸಿದಾಗ 3,912 ಶಾಲೆಗಳಾಗಲಿವೆ. ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳ ಸಂಖ್ಯೆ 4,000 ದಾಟುವುದೇ ಹೆಚ್ಚು. ಹೀಗಾಗಿ ಅನವಶ್ಯಕವಾಗಿ 28 ಸಾವಿರ ಶಾಲೆ ಎಂದು ಘೋಷಿಸಿ ಗೊಂದಲ ಸೃಷ್ಟಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳೇ ಪರಿತಪಿಸುತ್ತಿದ್ದಾರೆ.

ಯಾವುದೇ ಸಮೀಕ್ಷೆ ಇಲ್ಲ

ಸರ್ಕಾರದ ಬಳಿ ಶೂನ್ಯ ಮತ್ತು 10ಕ್ಕಿಂತ ಕಡಿಮೆ – ಮೇಲ್ಪಟ್ಟು ವಿದ್ಯಾರ್ಥಿಗಳಿರುವ ಶಾಲೆಗಳ ಪಟ್ಟಿ ಇದೆ. ಆದರೆ, 28 ಸಾವಿರ ಶಾಲೆಗಳ ಮಾಹಿತಿ ಕಲೆ ಹಾಕಲು ಯಾವುದೇ ಸಮೀಕ್ಷೆ ನಡೆಸಿಲ್ಲ. ಡೈಸ್ ವರದಿಯಲ್ಲೂ ಈ ಬಗ್ಗೆ ಉಲ್ಲೇಖವಿಲ್ಲ.

ಮಕ್ಕಳ ಕೊರತೆ ಇರುವ ಶಾಲೆಗಳ ಬಗ್ಗೆ ಹೇಳಲಾದ ಅಂಕಿ-ಅಂಶಗಳ ಮಾಹಿತಿ ತಪ್ಪಿದೆ. ನಾವು ಯಾವ ಶಾಲೆಗಳನ್ನೂ ಮುಚ್ಚುತ್ತಿಲ್ಲ.

| ಶಾಲಿನಿ ರಜನೀಶ್ ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ

ಶೂನ್ಯ ಮತ್ತು 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇರುವ ಶಾಲೆಗಳನ್ನು ಕೂಡಿಸಿದರೂ ಸಂಖ್ಯೆ 4 ಸಾವಿರ ದಾಟುವುದಿಲ್ಲ. ಅಂಕಿ-ಅಂಶಗಳನ್ನು ಕ್ರೋಡೀಕರಿಸುವಲ್ಲಿ ಶಿಕ್ಷಣ ಇಲಾಖೆ ಎಡವಟ್ಟು ಮಾಡಿರುವುದು ಸ್ಪಷ್ಟವಾಗುತ್ತದೆ.

| ನಿರಂಜನಾರಾಧ್ಯ ಶಿಕ್ಷಣ ತಜ್ಞ

Leave a Reply

Your email address will not be published. Required fields are marked *

Back To Top