ಮೈಸೂರು: ತಾಲೂಕಿನ ವರುಣ ಹೋಬಳಿಯ ಭುಗತಗಳ್ಳಿ ಗ್ರಾಮದ ಬಡಾವಣೆಯೊಂದರಲ್ಲಿ ಒಂದು ವಾರದ ಅವಧಿಯಲ್ಲಿ ಮೂರು ಚಿರತೆ ಮರಿ ಹಾಗೂ ಅವುಗಳ ತಾಯಿಯನ್ನು ರಕ್ಷಿಸಲಾಗಿದೆ.
ಭುಗತಗಳ್ಳಿಯ ಖಾಸಗಿ ಬಡಾವಣೆಯಲ್ಲಿ ಚಿರತೆ ಮರಿ ಇರುವ ಮಾಹಿತಿಯ ಮೇರೆಗೆ ಫೆ.7 ರಂದು ಸ್ಥಳಕ್ಕೆ ಭೇಟಿ ನೀಡಿದ ಚಿರತೆ ಕಾರ್ಯಪಡೆ ತಂಡ 2 ಚಿರತೆ ಮರಿಗಳನ್ನು ರಕ್ಷಿಸಿದರು. ನಂತರ ಫೆ.9 ರಂದು ಮತ್ತೊಂದು ಮರಿಯನ್ನು ರಕ್ಷಿಸಲಾಯಿತು. ತಾಯಿ ಚಿರತೆಗೋಸ್ಕರ ಚಿರತೆ ಕಾರ್ಯಪಡೆ ನಿರಂತರ ಕಾರ್ಯಾಚರಣೆ ನಡೆಸಿತು.
6 ದಿನಗಳ ನಿರಂತರ ಕಾರ್ಯಾಚರಣೆಯ ಬಳಿಕ ಗುರುವಾರ ತಾಯಿ ಚಿರತೆಯು ಸೆರೆ ಸಿಕ್ಕಿದೆ. ಒಂದು ವಾರದ ಕಾರ್ಯಾಚರಣೆ ಬಳಿಕ ಮೂರು ಮರಿಗಳು ಹಾಗೂ ತಾಯಿ ಚಿರತೆಯನ್ನು ಒಂದು ಸೇರಿಸುವಲ್ಲಿ ಮಹತ್ವದ ಹೆಜ್ಜೆ ಇರಿಸಲಾಗಿದ್ದು, ತಾಯಿ ಮರಿಗಳ ಆರೋಗ್ಯ ತಪಾಸಣೆ ಹಾಗೂ ಪುನರ್ಮಿಲನ ಪ್ರಕ್ರಿಯೆ ಪ್ರಗತಿಯಲ್ಲಿದೆ.