ಕುಣಿಕೆಗೆ ಸಿಲುಕಿ ಚಿರತೆ ಸಾವು

ಕಾಸರಗೋಡು: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಂಪಾರೆಯ ವ್ಯಕ್ತಿಯೊಬ್ಬರ ಹಿತ್ತಿಲಲ್ಲಿ ಹಂದಿಗೆ ಇರಿಸಿದ್ದ ಉರುಳಿಗೆ ಸಿಲುಕಿ ಚಿರತೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಅರಣ್ಯ ಇಲಾಖೆ ಬಂದಡ್ಕ ಸೆಕ್ಷನ್ ಕಚೇರಿ ಅಧಿಕಾರಿಗಳು ವನ್ಯಜೀವಿ ಸಂರಕ್ಷಣೆ ಕಾಯ್ದೆಯನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ಆದೂರು ಮಲ್ಲಂಪಾರೆಯ ನಿವಾಸಿ ಅಣ್ಣಪ್ಪ ನಾಯ್ಕ್ ಎಂಬುವರ ರಬ್ಬರ್ ತೋಟದಲ್ಲಿ ಹಂದಿ ಬೇಟೆಗಾಗಿ ಇರಿಸಿದ್ದ ಉರುಳಿಗೆ ಸಿಲುಕಿ ಚಿರತೆಯೊಂದು ಪ್ರಾಣ ಬಿಟ್ಟಿತ್ತು. ಹೊಟ್ಟೆಯ ಭಾಗಕ್ಕೆ ಕುಣಿಕೆ ಬಿಗಿದು ಚಿರತೆ ಸಾವಿಗೀಡಾಗಿತ್ತು.