ದೋಸ್ತಿ ನಂಟಿಗೆ ನಿಂಬೆ ಹಣ್ಣಿನ ಮಂತ್ರ, ವೇದಿಕೆಯಲ್ಲೂ ಕೈತುಂಬ ನಿಂಬೆಹಣ್ಣು ಹಿಡಿದ ರೇವಣ್ಣ

ಹಾಸನ: ಸಚಿವನಾಗಿ ಪ್ರಮಾಣ ವಚನ ಸ್ವೀಕಾರದಿಂದ ಹಿಡಿದು ಕಚೇರಿಗೂ ವಾಸ್ತು ಪ್ರಕಾರವೇ ಕೆಲಸ ಮಾಡುವ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಇದೀಗ ಮತ್ತೆ ನಿಂಬೆಹಣ್ಣಿನ ವಿಷಯಕ್ಕೆ ಸುದ್ದಿಯಾಗಿದ್ದಾರೆ.

ಹೌದು, ಹಾಸನದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಸಚಿವ ರೇವಣ್ಣನಿಗೆ ಕೈ ನಾಯಕರು ನಿಂಬೆಹಣ್ಣು ನೀಡಿದ್ದಾರೆ.

ಕಾಂಗ್ರೆಸ್ ಜೆಡಿಎಸ್‌ ದೋಸ್ತಿ ಸರ್ಕಾರವನ್ನು ಭದ್ರಗೊಳಿಸಲು ರೇವಣ್ಣಗೆ ನಿಂಬೆಹಣ್ಣು ನೀಡಲಾಗಿದ್ದು, ವೇದಿಕೆ ಮೇಲೇರುತ್ತಲೇ ರೇವಣ್ಣ ಕೈತುಂಬ ನಿಂಬೆಹಣ್ಣುಗಳನ್ನು ಹಿಡಿದು ನಿಂತಿದ್ದಾರೆ.

ಕೈ ಕಾರ್ಯಕರ್ತರ ಸಭೆಯಲ್ಲಿ ನಿಂಬೆಹಣ್ಣು ಗಮನ ಸೆಳೆದಿದ್ದು, ಕೈ ತುಂಬ ನಿಂಬೆಹಣ್ಣು ಹಿಡಿದುಕೊಂಡೇ ಸಚಿವ ರೇವಣ್ಣ, ಶಿವಲಿಂಗೇಗೌಡ ಸಭೆಗೆ ಆಗಮಿಸಿದರು. ಇದಲ್ಲದೆ ಕೆಲವರ ಕೈಗೆ ನಿಂಬೆ ಹಣ್ಣು ನೀಡಿದ ಬಳಿಕ ತಮ್ಮ ಸಹಾಯಕನ ಕೈಗೆ ನಿಂಬೆಹಣ್ಣು ಕೊಟ್ಟು ಕಳುಹಿಸಿದ್ದಾರೆ. (ದಿಗ್ವಿಜಯ ನ್ಯೂಸ್)