Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಮೇಲ್ಮನೆ ಮೂರು ಸ್ಥಾನಗಳಿಗೆ ಮುಹೂರ್ತ ನಿಗದಿ

Wednesday, 12.09.2018, 2:05 AM       No Comments

ಬೆಂಗಳೂರು: ವಿಧಾನಪರಿಷತ್​ನ ಮೂವರು ಸದಸ್ಯರು ವಿಧಾನ ಸಭೆಗೆ ಆಯ್ಕೆಯಾದ್ದರಿಂದ ತೆರವಾದ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆ ನಡೆಸಲು ಮುಹೂರ್ತ ನಿಗದಿ ಮಾಡಿದೆ. ಮೂರು ಸ್ಥಾನಗಳಿಗೂ ಪ್ರತ್ಯೇಕ ಅಧಿಸೂಚನೆ ಪ್ರಕಟವಾಗಿದ್ದರಿಂದ ಪ್ರತ್ಯೇಕ ಮತಪತ್ರಗಳಿರಲಿದ್ದು, ಬಿಜೆಪಿಗೆ ಅವಕಾಶ ಸಿಗುವುದೆ? ಎಂಬುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಎಂಎಲ್​ಸಿ ಆಗಿದ್ದ ಬಿಜೆಪಿಯ ಕೆ.ಎಸ್.ಈಶ್ವರಪ್ಪ, ವಿ.ಸೋಮಣ್ಣ ಮತ್ತು ಕಾಂಗ್ರೆಸ್​ನ ಡಾ.ಜಿ.ಪರಮೇಶ್ವರ್ ಎಂಎಲ್​ಎ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಈ ತೆರವಾದ ಸ್ಥಾನಗಳಿಗೆ ಅ.3ರಂದು ಉಪ ಚುನಾವಣೆ ನಡೆಯಲಿದೆ. ಈಶ್ವರಪ್ಪ, ಪರಮೇಶ್ವರ್ ಅವಧಿ ಜೂ.30,2020 ರವರೆಗಿತ್ತು. ಸೋಮಣ್ಣ ಅವಧಿ ಜೂ.14,2022ರವರೆಗೆ ಇತ್ತು. ಹಾಗಾಗಿ ಈಶ್ವರಪ್ಪ ಹಾಗೂ ಪರಮೇಶ್ವರ್ ಸ್ಥಾನಗಳಿಗೆ ಚುನಾಯಿತರಾಗುವವರಿಗೆ 2 ವರ್ಷ ದೊರೆತರೆ, ಸೋಮಣ್ಣ ಸ್ಥಾನಕ್ಕೆ ಗೆಲ್ಲುವವರು 4 ವರ್ಷ ಪರಿಷತ್ ಸದಸ್ಯರಾಗಿರಲಿದ್ದಾರೆ.

ವೇಳಾಪಟ್ಟಿ: ಚುನಾವಣೆಗೆ ಸೆ.14ರಂದು ಅಧಿಸೂಚನೆ ಪ್ರಕಟವಾಗಲಿದೆ. ಸೆ.22 ನಾಮಪತ್ರ ಸಲ್ಲಿಸಲು ಕೊನೇ ದಿನ. ಸೆ.24 ನಾಮಪತ್ರ ಪರಿಶೀಲನೆ, ಸೆ.26 ನಾಮಪತ್ರ ಹಿಂಪಡೆಯಲು ಕಡೇ ದಿನ. ಅ.3ರಂದು ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದ್ದು, ಅಂದೇ ಸಂಜೆ 5 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.

ಮತದಾನ ಹೇಗೆ?: ರಾಜ್ಯ ವಿಧಾನಸಭೆ 222 ಸಂಖ್ಯಾಬಲ ಹೊಂದಿದ್ದು, ಮೇಲ್ಮನೆಯ ಒಂದು ಸ್ಥಾನ ಗೆಲ್ಲಲು 112 ಮತ ಪಡೆಯಬೇಕು. 3 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವುದರಿಂದ ಪ್ರತಿಯೊಬ್ಬ ಶಾಸಕರಿಗೂ ಮೂರು ಬ್ಯಾಲೆಟ್ ಪೇಪರ್ ನೀಡಲಾಗುತ್ತದೆ, 3 ಮತ ಚಲಾಯಿಸಬೇಕು. ಮೈತ್ರಿ ಸರ್ಕಾರದ ಮಿತ್ರ ಪಕ್ಷಗಳ ಸಂಖ್ಯಾ ಬಲ 117 ಇದ್ದು, ಬಿಜೆಪಿ ಸಂಖ್ಯೆ 104 ಇದೆ. ಹಾಗಾಗಿ ಬಿಜೆಪಿ ಸ್ಪರ್ಧಿಸಿದರೂ ಗೆಲ್ಲುವ ಅವಕಾಶಗಳಿಲ್ಲ. 3 ಅಭ್ಯರ್ಥಿಗಳಿಗೆ ಪ್ರತ್ಯೇಕ ಬ್ಯಾಲೆಟ್ ಪೇಪರ್ ನೀಡುವುದರಿಂದ ಪ್ರಾಶಸ್ತ್ಯ ಮತ ಚಲಾಯಿಸುವ ಪ್ರಶ್ನೆಯೇ ಉದ್ಭವಿಸಲ್ಲ. ಕಾರಣ 3 ಸ್ಥಾನಗಳನ್ನು ಮೈತ್ರಿ ಪಕ್ಷಗಳು ಪಡೆಯುವ ಸಾಧ್ಯತೆಗಳಿವೆ.

ಸುನೀಲಗೌಡ ಪಾಟೀಲ ಆಯ್ಕೆ

ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ಪರಿಷತ್​ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸುನೀಲಗೌಡ ಪಾಟೀಲ ಗೆಲುವು ಸಾಧಿಸಿದ್ದಾರೆ. ಸುನೀಲ ಗೌಡ 4,819 ಪ್ರಥಮ ಪ್ರಾಶಸ್ಱ ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ಗೂಳಪ್ಪ ಶಟಗಾರ 2,779 ಮತ ಗಳಿಸಿದ್ದಾರೆ. ಐವರು ಪಕ್ಷೇತರರು ಒಟ್ಟು 59 ಮತ ಪಡೆಸಿದ್ದಾರೆ.

ರಹಸ್ಯ ಚುನಾವಣೆ

ಇದು ರಹಸ್ಯ ಚುನಾವಣೆ ಆಗಿರುವುದರಿಂದ ಬಿಜೆಪಿ ಬೇರೆ ಪಕ್ಷಗಳ ಬುಟ್ಟಿಗೆ ಕೈ ಹಾಕಿದರೆ ಮಾತ್ರ ಗೆಲ್ಲಲು ಅವಕಾಶ ಇದೆ. ಆದರೆ ಸ್ಪರ್ಧೆ ಮಾಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಮಾತ್ರ ಇನ್ನೂ ಪಕ್ಷದಲ್ಲಿ ಚರ್ಚೆಯಾಗಿಲ್ಲ ಎನ್ನಲಾಗಿದೆ.

ಚುನಾವಣೆ ಅಧಿಸೂಚನೆಯೇ ಅಸಾಂವಿಧಾನಿಕ. ಈ ಬಗ್ಗೆ ಕಾನೂನು ತಜ್ಞರ ಜತೆ ರ್ಚಚಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. ಚುನಾವಣೆ ನಡೆದರೆ ಬಿಜೆಪಿ ಸ್ಪರ್ಧಿಸಲಿದೆ.

| ಶೋಭಾ ಕರಂದ್ಲಾಜೆ ಸಂಸದೆ

ಜೆಡಿಎಸ್, ಕಾಂಗ್ರೆಸ್​ನಲ್ಲಿ ಪೈಪೋಟಿ ಶುರು

ಮೇಲ್ಮನೆಯ 3 ಸ್ಥಾನಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್​ನಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿದ್ದು, ಹೈಕಮಾಂಡ್ ಮಟ್ಟದಲ್ಲಿ ಲಾಬಿ ಕೂಡ ಆರಂಭವಾಗಿದೆ. ಕಾಂಗ್ರೆಸ್ 2, ಜೆಡಿಎಸ್ 1 ಸ್ಥಾನ ಪಡೆಯುವ ಸಾಧ್ಯತೆಗಳಿದ್ದು, ಕಾಂಗ್ರೆಸ್​ನಲ್ಲಿ ನಿವೇದಿತಾ ಆಳ್ವ, ಎಂ.ರಾಮಚಂದ್ರಪ್ಪ, ಪ್ರೊ.ಕೆ.ಇ.ರಾಧಾಕೃಷ್ಣ, ಬಿ.ಎಸ್.ಶಿವಣ್ಣ, ಚಲುವರಾಯಸ್ವಾಮಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್​ನಲ್ಲಿ ವೈ.ಎಸ್.ವಿ.ದತ್ತ, ಮಧು ಬಂಗಾರಪ್ಪ, ಸುರೇಶ್​ಬಾಬು, ಮಾಜಿ ಎಂಎಲ್​ಸಿ ರಮೇಶ್​ಬಾಬು ಆಕಾಂಕ್ಷಿಗಳಾಗಿದ್ದಾರೆ. ಎಚ್.ಡಿ.ದೇವೇಗೌಡರು ರಮೇಶ್​ಬಾಬು ಅವರನ್ನು ಕಣಕ್ಕಿಳಿಸುವ ಆಲೋಚನೆಯಲ್ಲಿದ್ದರೆ, ಸಿಎಂ ಕುಮಾರಸ್ವಾಮಿ ಮಧು ಬಂಗಾರಪ್ಪ ಇಲ್ಲವೆ ಸುರೇಶ್​ಬಾಬು ಆಯ್ಕೆಗೆ ಇಚ್ಛೆ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಣ್ಣಂದಿರು ಕೆಳಮನೆ ತಮ್ಮಂದಿರು ಮೇಲ್ಮನೆ

ಬೆಂಗಳೂರು: ಹಿರಿಯರ ಮನೆ ಎಂದೇ ಹೆಸರಾಗಿದ್ದ ವಿಧಾನಪರಿಷತ್ ಈಗ ಕಿರಿಯರ ಮನೆಯಾಗುತ್ತಿದೆಯೇ? ಇಂತಹದೊಂದು ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಅಣ್ಣಂದಿರು ವಿಧಾನಸಭೆಗೆ ಆಯ್ಕೆಗೊಂಡು, ತಮ್ಮಂದಿರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿದ ಸಂಖ್ಯೆ ಹೆಚ್ಚಾಗುತ್ತಿದೆ. ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮಾಜಿ ಸಚಿವ ಎಂ.ಬಿ.ಪಾಟೀಲ್, ಸಹೋದರ ಸುನಿಲ್ ಪಾಟೀಲ್​ರನ್ನು ಗೆಲ್ಲಿಸಿಕೊಂಡು ಬರುವ ಮೂಲಕ ಅಣ್ತಮ್ಮ ಆಡಳಿತ ಪರಂಪರೆ ಮುಂದುವರಿಸಿದ್ದಾರೆ. ಅಣ್ಣ ಕೆಳಮನೆಯಲ್ಲಿ ತಮ್ಮ ಮೇಲ್ಮನೆ ಸದಸ್ಯರಾಗಿರುವವರ ಸಾಲಿನಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ- ಹನುಮಂತ ನಿರಾಣಿ, ಮಾಜಿ ಸಿಎಂ ಜಗದೀಶ ಶೆಟ್ಟರ್-ಪ್ರದೀಪ್ ಶೆಟ್ಟರ್, ಮಾಜಿ ಸಿಎಂ ಧರ್ಮಸಿಂಗ್ ಪುತ್ರ ಅಜಯ್ ಸಿಂಗ್-ವಿಜಯಸಿಂಗ್ ಇದ್ದಾರೆ. ಎಂಎಲ್ಸಿ ರವಿ, ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಸಂಬಂಧಿಯಾಗಿದ್ದಾರೆ.

Leave a Reply

Your email address will not be published. Required fields are marked *

Back To Top