ಇಂದಿನಿಂದ ವರ್ಲ್ಡ್ ಸಿರೀಸ್ ಕ್ರಿಕೆಟ್, ಕರೊನಾ ಕಾಲದಲ್ಲಿ ದಿಗ್ಗಜರ ಟಿ20 ಫೈಟ್

blank

ಬೆಂಗಳೂರು: ‘ಸಚಿನ್… ಸಚಿನ್…’ ಎಂಬ ಉದ್ಘೋಷ ಸ್ಟೇಡಿಯಂನಲ್ಲಿ ಮತ್ತೆ ಕೇಳಿಸಲಿದೆ, ವೀರೇಂದ್ರ ಸೆಹ್ವಾಗ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತೆ ನೋಡಲು ಸಿಗಲಿದೆ, ಯುವರಾಜ್ ಸಿಂಗ್ ಅವರ ಮ್ಯಾಚ್ ವಿನ್ನಿಂಗ್ ಆಟವನ್ನು ಮತ್ತೆ ನೋಡಬಹುದು, ಬ್ರಿಯಾನ್ ಲಾರಾ ಅವರ ಆಕರ್ಷಕ ಎಡಗೈ ಬ್ಯಾಟಿಂಗ್‌ಅನ್ನು ಮತ್ತೆ ಸವಿಯಬಹುದು, ಸನತ್ ಜಯಸೂರ್ಯ ಅವರ ಮುಗಿಲೆತ್ತರದ ಸಿಕ್ಸರ್‌ಗಳು ಮತ್ತೆ ಬೌಲರ್‌ಗಳ ನಿದ್ದೆಗೆಡಿಸಲಿವೆ, ಜಾಂಟಿ ರೋಡ್ಸ್ ಅವರ ಚುರುಕಿನ ಫೀಲ್ಡಿಂಗ್ ಮತ್ತೆ ಕಾಣಸಿಗಲಿದೆ, ಕೆವಿನ್ ಪೀಟರ್ಸೆನ್ ಅವರ ಸ್ವಿಚ್ ಹಿಟ್ ಹೊಡೆತಗಳು ಮತ್ತೊಮ್ಮೆ ಬೌಲರ್‌ಗಳನ್ನು ಬೆಚ್ಚಿಬೀಳಿಸಲಿವೆ. ಯಾಕೆಂದರೆ ಈ ಎಲ್ಲ ಕ್ರಿಕೆಟ್ ದಿಗ್ಗಜರು ಕರೊನಾ ಕಾಲದಲ್ಲಿ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಮಾರ್ಚ್ 5ರಿಂದ 21ರವರೆಗೆ ಛತ್ತೀಸ್‌ಗಢದ ರಾಯ್‌ಪುರದ ಶಹೀದ್ ವೀರನಾರಾಯಣ್ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ‘ರಸ್ತೆ ಸುರಕ್ಷಾ ವಿಶ್ವ ಸರಣಿ’ ಟಿ20 ಟೂರ್ನಿಯಲ್ಲಿ 6 ದೇಶಗಳ ದಿಗ್ಗಜ ಕ್ರಿಕೆಟಿಗರು ಆಡಲಿದ್ದಾರೆ.

ಕರೊನಾದಿಂದಾಗಿ ಸ್ಥಗಿತಗೊಂಡಿದ್ದ ಟೂರ್ನಿ
2020ರಲ್ಲಿ ಮಾರ್ಚ್‌ನಲ್ಲಿ ಈ ಟೂರ್ನಿ ನಡೆಯುತ್ತಿದ್ದ ಸಮಯದಲ್ಲೇ ಭಾರತದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿತ್ತು. ಇದರಿಂದಾಗಿ 4 ಪಂದ್ಯಗಳ ಬಳಿಕ ಟೂರ್ನಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಟೂರ್ನಿ ಅದೇ ಹಂತದಿಂದ ಪುನರಾರಂಭ ಕಾಣುತ್ತಿದೆ. ಭಾರತ ತಂಡ ಆಗ ವಿಂಡೀಸ್, ಶ್ರೀಲಂಕಾ ವಿರುದ್ಧ ಆಡಿದ ಪಂದ್ಯಗಳನ್ನು ಜಯಿಸಿತ್ತು. ದಕ್ಷಿಣ ಆಫ್ರಿಕಾ ತಂಡ ವಿಂಡೀಸ್ ವಿರುದ್ಧ ಜಯಿಸಿತ್ತು. ಅದೂ ಈ ಬಾರಿ ಅಂಕಪಟ್ಟಿಯಲ್ಲಿ ಪರಿಗಣನೆಗೆ ಬರಲಿವೆ.

ಇದನ್ನೂ ಓದಿ: ಪಾಕಿಸ್ತಾನ ಸೂಪರ್ ಲೀಗ್‌ಗೆ ಕರೊನಾ ಕಾಟ, ಟಿ20 ಟೂರ್ನಿ ಅರ್ಧದಲ್ಲೇ ಸ್ಥಗಿತ

ಆಸೀಸ್ ಔಟ್, ಇಂಗ್ಲೆಂಡ್-ಬಾಂಗ್ಲಾ ಇನ್
ಕರೊನಾ ಹಾವಳಿಯಿಂದಾಗಿ ಆಸ್ಟ್ರೇಲಿಯಾದ ದಿಗ್ಗಜರ ತಂಡ ಈ ಬಾರಿ ಟೂರ್ನಿಯಿಂದ ಹಿಂದೆ ಸರಿದಿದೆ. ಆ ಜಾಗಕ್ಕೆ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ದಿಗ್ಗಜರ ತಂಡಗಳು ಸೇರ್ಪಡೆಗೊಂಡಿವೆ. ಆಸ್ಟ್ರೇಲಿಯಾದಲ್ಲಿನ ಕೋವಿಡ್-19 ನಿರ್ಬಂಧಗಳಿಂದಾಗಿ ಆಸೀಸ್ ಕ್ರಿಕೆಟಿಗರಿಗೆ ಭಾರತಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ.

ಇತ್ತೀಚೆಗೆ ನಿವೃತ್ತರಾದವರು ಮರಳಿ ಕಣಕ್ಕೆ
ಟೀಮ್ ಇಂಡಿಯಾದಿಂದ ಹೊರಬಿದ್ದ ಬಳಿಕ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದ ಕರ್ನಾಟಕದ ವೇಗಿ ವಿನಯ್‌ಕುಮಾರ್, ಬರೋಡದ ಆಲ್ರೌಂಡರ್ ಯೂಸ್ು ಪಠಾಣ್ ಮತ್ತು ಮಧ್ಯಪ್ರದೇಶದ ವಿಕೆಟ್ ಕೀಪರ್ ನಮನ್ ಓಜಾ ಇತ್ತೀಚೆಗೆ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಅದರ ಬೆನ್ನಲ್ಲೇ ಇದೀಗ ವಿಶ್ವ ಸರಣಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಟೂರ್ನಿಯಲ್ಲಿ ನಿವೃತ್ತಿ ಹೊಂದಿದ ಕ್ರಿಕೆಟಿಗರಿಗೆ ಮಾತ್ರ ಆಡಲು ಅವಕಾಶವಿರುವುದು ಇದಕ್ಕೆ ಕಾರಣವಾಗಿದೆ.

ಪ್ರೇಕ್ಷಕರಿಗೆ ಪ್ರವೇಶ
ಛತ್ತೀಸ್‌ಗಢ ಕ್ರಿಕೆಟ್ ಸಂಸ್ಥೆಯ 65 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ನೂತನ ಕ್ರೀಡಾಂಗಣದಲ್ಲಿ ಶೇ. 50 ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ತಂಡಗಳು:

ಭಾರತ ಲೆಜೆಂಡ್ಸ್: ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮೊಹಮದ್ ಕೈಫ್​, ಪ್ರಜ್ಞಾನ್ ಓಜಾ, ನೋಯೆಲ್ ಡೇವಿಡ್, ಮುನಾಫ್​ ಪಟೇಲ್, ಇರ್ಫಾನ್ ಪಠಾಣ್, ಯೂಸುಫ್​ ಪಠಾಣ್, ಮನ್‌ಪ್ರೀತ್ ಗೋನಿ, ನಮನ್ ಓಜಾ, ಎಸ್. ಬದ್ರಿನಾಥ್, ವಿನಯ್‌ಕುಮಾರ್.

https://twitter.com/RSWorldSeries/status/1367140632603418624

ಶ್ರೀಲಂಕಾ ಲೆಜೆಂಡ್ಸ್: ತಿಲಕರತ್ನೆ ದಿಲ್ಶಾನ್, ಸನತ್ ಜಯಸೂರ್ಯ, ಪರ್ವೇಜ್ ಮಹಾರೂಫ್​, ರಂಗನಾ ಹೆರಾತ್, ತಿಲನ್ ತುಷಾರ, ಅಜಂತ ಮೆಂಡಿಸ್, ಚಾಮರ ಕಪುಗೆಡೆರ, ಉಪುಲ್ ತರಂಗ, ಚಾಮರ ಸಿಲ್ವ, ಚಿಂತಕ ಜಯಸಿಂಘೆ, ಧಮ್ಮಿಕಾ ಪ್ರಸಾದ್, ನುವಾನ್ ಕುಲಶೇಖರ, ರಸೆಲ್ ಅರ್ನಾಲ್ಡ್, ದುಲಂಜನ ವಿಜೆಸಿಂಘೆ, ಮಲಿಂಡ ವರ್ಣಪುರ.

ವೆಸ್ಟ್ ಇಂಡೀಸ್ ಲೆಜೆಂಡ್ಸ್: ಬ್ರಿಯಾನ್ ಲಾರಾ, ಟಿನೋ ಬೆಸ್ಟ್, ರಿಡ್ಲೆ ಜೇಕಬ್ಸ್, ನರಸಿಂಗ್ ದೇವನಾರಾಯಣ್, ಸುಲೇಮನ್ ಬೆನ್, ದೀನನಾಥ್ ರಾಮ್‌ನಾರಾಯಣ್, ಆಡಂ ಸ್ಯಾನ್‌ೆರ್ಡ್, ಕಾರ್ಲ್ ಹೂಪರ್, ಡ್ವೇನ್ ಸ್ಮಿತ್, ರ‌್ಯಾನ್ ಆಸ್ಟಿನ್, ವಿಲಿಯಮ್ ಪೆರ್ಕಿನ್ಸ್, ಮಹೇಂದ್ರ ನಾಗಮುತ್ತು.

ದಕ್ಷಿಣ ಆಫ್ರಿಕಾ ಲೆಜೆಂಡ್ಸ್: ಜಾಂಟಿ ರೋಡ್ಸ್, ಮಾರ್ನ್ ವಾನ್ ವಿಕ್, ಗಾರ್ನೆಟ್ ಕ್ರುಗರ್, ರೋಜರ್ ಡೆಲೆಮಚುಸ್, ಜಸ್ಟಿನ್ ಕೆಂಪ್, ಅಲ್ವಿರೊ ಪೀಟರ್ಸೆನ್, ನಾಂಟಿ ಹೇವರ್ಡ್, ಆಂಡ್ರೋ ಪುಟಿಕ್, ಲೂಟ್ಸ್ ಬೋಸ್ಮನ್, ಜಂಡರ್ ಡಿ ಬ್ರೂನ್, ಥಂಡಿ ಶಬಲಾಲ, ಮೊಂಡ್ ರೊಂಡೆಕಿ, ಮಖಾಯ ಎನ್‌ಟಿನಿ, ಲಾಯ್ಡ ನೋರಿಸ್.

ಇಂಗ್ಲೆಂಡ್ ಲೆಜೆಂಡ್ಸ್: ಕೆವಿನ್ ಪೀಟರ್ಸೆನ್, ಓವೈಸ್ ಷಾ, ಫಿಲಿಪ್ ಮಸ್ಟರ್ಡ್, ಮಾಂಟಿ ಪನೇಸರ್, ನಿಕ್ ಕ್ರಾಂಪ್ಟನ್, ಕಬೀರ್ ಅಲಿ, ಸಾಜಿದ್ ಮೊಹಮೂದ್, ಜೇಮ್ಸ್ ಟ್ರೆಡ್‌ವೆಲ್, ಕ್ರಿಸ್ ಸ್ಕಾಫೀಲ್ಡ್, ಜೊನಾಥನ್ ಟ್ರಾಟ್, ರ‌್ಯಾನ್ ಸೈಡ್‌ಬಾಟಮ್, ಉಸ್ಮಾನ್ ಅ್ಜಲ್, ಮ್ಯಾಥ್ಯೂ ಹೋಗಾರ್ಡ್, ಜೇಮ್ಸ್ ಟಿಂಡಾಲ್.

ಬಾಂಗ್ಲಾದೇಶ ಲೆಜೆಂಡ್ಸ್: ಖಾಲಿದ್ ಮಹಮುದ್, ನಫೀಜ್ ಇಕ್ಬಾಲ್, ಮೊಹಮದ್ ರಫೀಕ್, ಅಬ್ದುಲ್ ರಜಾಕ್, ಖಾಲಿದ್ ಮಸೂದ್, ಹನನ್ ಸರ್ಕಾರ್, ಜಾವೆದ್ ಒಮರ್, ರಜಿನ್ ಸಲೇ, ಮೆಹ್ರಬ್ ಹುಸೇನ್, ಅಫ್ತಾಬ್ ಅಹ್ಮದ್, ಅಲಮ್‌ಗಿರ್ ಕಬೀರ್, ಶರೀಫ್​ ಮುಶ್ಫಿಕರ್ ರೆಹಮಾನ್, ಮಮೂನ್ ರಶೀದ್.

ಟೂರ್ನಿ ವೇಳಾಪಟ್ಟಿ
ಮಾರ್ಚ್ 5: ಭಾರತ-ಬಾಂಗ್ಲಾದೇಶ
ಮಾರ್ಚ್ 6: ಶ್ರೀಲಂಕಾ-ವೆಸ್ಟ್ ಇಂಡೀಸ್
ಮಾರ್ಚ್ 7: ಇಂಗ್ಲೆಂಡ್-ಬಾಂಗ್ಲಾದೇಶ
ಮಾರ್ಚ್ 8: ದಕ್ಷಿಣ ಆಫ್ರಿಕಾ-ಶ್ರೀಲಂಕಾ
ಮಾರ್ಚ್ 9: ಭಾರತ-ಇಂಗ್ಲೆಂಡ್
ಮಾರ್ಚ್ 10: ಬಾಂಗ್ಲಾದೇಶ-ಶ್ರೀಲಂಕಾ
ಮಾರ್ಚ್ 11: ಇಂಗ್ಲೆಂಡ್-ದಕ್ಷಿಣ ಆಫ್ರಿಕಾ
ಮಾರ್ಚ್ 12: ಬಾಂಗ್ಲಾದೇಶ-ವೆಸ್ಟ್ ಇಂಡೀಸ್
ಮಾರ್ಚ್ 13: ಭಾರತ-ದಕ್ಷಿಣ ಆಫ್ರಿಕಾ
ಮಾರ್ಚ್ 14: ಶ್ರೀಲಂಕಾ-ಇಂಗ್ಲೆಂಡ್
ಮಾರ್ಚ್ 15: ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶ
ಮಾರ್ಚ್ 16: ಇಂಗ್ಲೆಂಡ್-ವೆಸ್ಟ್ ಇಂಡೀಸ್
ಮಾರ್ಚ್: 17: ಸೆಮಿಫೈನಲ್-1
ಮಾರ್ಚ್ 19: ಸೆಮಿಫೈನಲ್-2
ಮಾರ್ಚ್ 21: ಫೈನಲ್
ಎಲ್ಲ ಪಂದ್ಯಗಳು ಆರಂಭ: ರಾತ್ರಿ 7.00
ನೇರಪ್ರಸಾರ: ಕಲರ್ಸ್‌ ಕನ್ನಡ ಸಿನಿಮಾ, ಕಲರ್ಸ್‌ ಸಿನಿಪ್ಲೆಕ್ಸ್, ಜಿಯೋ, ವೂಟ್.
ಸ್ಥಳ: ಶಹೀದ್ ವೀರನಾರಾಯಣ್ ಸಿಂಗ್ ಕ್ರಿಕೆಟ್ ಸ್ಟೇಡಿಯಂ, ರಾಯ್‌ಪುರ.

ಮದುವೆ ಸಿದ್ಧತೆಗಾಗಿ ಕ್ರಿಕೆಟ್‌ನಿಂದ ರಜೆ ಬಿಡುವು ಪಡೆದರೇ ಬುಮ್ರಾ?

ನೋಬಾಲ್ ಎಸೆದು ಸೆಹ್ವಾಗ್​ಗೆ ಶತಕ ತಪ್ಪಿಸಿದ್ದ ಲಂಕಾ ಸ್ಪಿನ್ನರ್ ಈಗ ಬಸ್ ಡ್ರೈವರ್!

ಕ್ರಿಕೆಟ್ ಟೂರ್ನಿಯಲ್ಲಿ ಪಂದ್ಯಶ್ರೇಷ್ಠ ಆಟಗಾರನಿಗೆ 5 ಲೀಟರ್ ಪೆಟ್ರೋಲ್ ಬಹುಮಾನ!

Share This Article

ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream

Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items

Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…