ವೇಶ್ಯಾವಾಟಿಕೆ, ಜೂಜು ಕಾನೂನು ಬದ್ಧಗೊಳಿಸಿ

ಹೈದರಾಬಾದ್: ವೇಶ್ಯಾವಾಟಿಕೆಯನ್ನು ಕೂಡ ಕಾನೂನು ಬದ್ಧಗೊಳಿಸಿ ಎಂದು ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ. ಜೂಜು ಮತ್ತು ಕ್ರೀಡೆಗಳಲ್ಲಿ ಬೆಟ್ಟಿಂಗ್ ಆಡುವುದನ್ನು ಕಾನೂನಾತ್ಮಕಗೊಳಿಸಿ ಎಂದು ಕಾನೂನು ಆಯೋಗ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ದುರಾಚಾರಗಳನ್ನು ಕಾನೂನು ಮೂಲಕ ನಿಮೂಲನೆ ಮಾಡಬಹುದು ಎಂದು ಭಾವಿಸುವ ವ್ಯಕ್ತಿ ಮೂರ್ಖತನದಲ್ಲಿ ಜೀವಿಸುತ್ತಿದ್ದಾನೆ ಎಂದರ್ಥ. ಕಾನೂನು ಆಯೋಗದ ಶಿಫಾರಸು ಉತ್ತಮವಾಗಿದೆ. ಕೆಲವು ದುರಾಚಾರಗಳನ್ನು ಕಾನೂನು ಬಲ ಪ್ರಯೋಗಿಸಿ ನಿಯಂತ್ರಿಸಲು ಸಾಧ್ಯವಿಲ್ಲ. ಹಾಗೆ ಯತ್ನಿಸಿದರೆ ಅಂಥ ದುರಾಚಾರಗಳಿಂದ ಮತ್ತೊಂದು ಅಕ್ರಮ ವ್ಯವಸ್ಥೆ ಹುಟ್ಟಿಕೊಳ್ಳುತ್ತದೆ ಎಂದು ನ್ಯಾ. ಹೆಗ್ಡೆ ವಿವರಿಸಿದ್ದಾರೆ.

ಅಕ್ರಮ ಮದ್ಯ ತಯಾರಿಕೆಯಿಂದ ಸರ್ಕಾರಕ್ಕೆ ಈಗಾಗಲೇ ಅಬಕಾರಿ ಸುಂಕ ನಷ್ಟವಾಗುತ್ತಿದೆ. ಅದರಂತೆ ದೇಶದಲ್ಲಿ ಜೂಜಾಟವು ನಡೆಯುತ್ತಿದೆ. ಇದನ್ನು ಕಾನೂನುಬದ್ಧಗೊಳಿಸಿದರೆ ಇದರ ಸುತ್ತಲಿನ ಶೇ. 70-75 ಅಕ್ರಮ ಚಟುವಟಿಕೆಗಳು ನಿಲ್ಲುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ವೇಶ್ಯಾವಾಟಿಕೆ ನಡೆಯದ ರಾಜ್ಯ ಯಾವುದಿದೆ? ನಾವು ಕಣ್ಣುಮುಚ್ಚಿಕೊಂಡು, ಅದು ನಡೆಯುತ್ತಿಲ್ಲ ಎನ್ನುತ್ತಿದ್ದೇವೆ. ಧರ್ಮ ಮತ್ತು ಧಾರ್ವಿುಕ ಮುಖಂಡರು ಮಾತ್ರ ನೈತಿಕತೆ ನಿಯಂತ್ರಿಸಲು ಸಾಧ್ಯ ಎಂದಿದ್ದಾರೆ.

Leave a Reply

Your email address will not be published. Required fields are marked *