ಮೂಡಿಗೆರೆ: ಮಸೀದಿಗಳ ಆಡಳಿತ ಸಮಿತಿ ಜಮಾತ್‌ನ ಸರ್ವ ಸದಸ್ಯರಿಂದ ವಂತಿಗೆ ಸಂಗ್ರಹಿಸಿ ಮಸೀದಿ ವ್ಯಾಪ್ತಿಯಲ್ಲಿ ಆಸ್ತಿ ಪಾಸ್ತಿ, ಧಾರ್ಮಿಕ ಹಾಗೂ ವಾಣಿಜ್ಯಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಆ ಆಸ್ತಿಯ ಮೇಲೆ ಹಕ್ಕು ಸಾಧಿಸಲು ಕೇಂದ್ರ ಸರ್ಕಾರ ವಕ್ಫ್ ಮಸೂದೆಗೆ ತಿದ್ದುಪಡಿ ತರಲು ಮುಂದಾಗಿರುವುದು ಸರಿಯಲ್ಲ ಎಂದು ಮಂಗಳೂರಿನ ಧಾರ್ಮಿಕ ವಿದ್ವಾಂಸ ಕೆ.ಐ.ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಹೇಳಿದರು.
ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1499ನೇ ಜನ್ಮದಿನದ ಅಂಗವಾಗಿ ನಡೆದ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮನ್ನಾಳುವ ಸರ್ಕಾರಗಳು ಮುಸ್ಲಿಂ ಸಂಸ್ಥೆಗಳ ಮಸೂದೆಗಳಿಗೆ ತಿದ್ದುಪಡಿ ಹಾಗೂ ಹೊಸ ಕಾಯ್ದೆಗಳನ್ನು ರಚಿಸಿ ಮುಸ್ಲಿಮರ ಹಕ್ಕುಗಳನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದೆ. ಯಾವುದೇ ಹೊಸ ಕಾಯ್ದೆ ಜಾರಿಯಾದರೂ ಪ್ರವಾದಿಯವರ ಮಾರ್ಗದರ್ಶನ ಹೊರತುಪಡಿಸಿ ಅನ್ಯಮಾರ್ಗದಲ್ಲಿ ನಡೆಯಲು ಮುಸ್ಲಿಮರು ತಯಾರಾಗಿಲ್ಲ ಎಂದು ತಿಳಿಸಿದರು.
ಪ್ರವಾದಿ ಮಹಮ್ಮದ್ ಪೈಗಂಬರ್‌ಅವರ ಸರಳವಾದ ಜೀವನ ಶೈಲಿಯನ್ನು ಮುಸ್ಲಿಮರು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಅನ್ಯರ ಸಂಪತ್ತು ಕಬಳಿಸುವುದನ್ನು ಕಟುವಾಗಿ ವಿರೋಧಿಸಿದ್ದರು. ಬಡತನವಿದ್ದರೂ ದುಡಿದು ಜೀವನ ನಡೆಸುವಂತೆ ಹಾಗೂ ತಂದೆ ತಾಯಿಯರು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿ ಅವರ ಜೀವನ ಸುಂದರವಾಗಿ ನಡೆಯಲು ಪ್ರತಿಯೊಬ್ಬ ಪಾಲಕರು ಕಾಳಜಿವಹಿಸಬೇಕು ಎಂದು ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದರು.
ಬದ್ರಿಯಾ ಮಸೀದಿ ಅಧ್ಯಕ್ಷ ಸಿ.ಕೆ.ಇಬ್ರಾಹಿಂ ಹಾಜಿ, ಖತೀಬ್ ಮುಸ್ತಫಾ ಯಮಾನಿ, ಧರ್ಮಗುರುಗಳಾದ ಶಂಸುದ್ದೀನ್ ಯಮಾನಿ, ಯಾಕೂಬ್ ಫೈಝಿ, ಎಂ.ಎಚ್.ಇಸ್ಮಾಯಿಲ್, ಇಬ್ರಾಹಿಂ ಯಾದ್ಗಾರ್, ಅಜೀಜ್ ಅರಬಿ, ನಾಸಿರ್, ಅಶ್ರಫ್, ಹನೀಫ್ ಅರಬಿ, ಬಸೀರ್, ಎಂ.ಎಸ್.ಇಬ್ರಾಹಿಂ ಇಸ್ಮಾಯಿಲ್ ಆಜಾದ್ ಇತರರಿದ್ದರು.
ವಕ್ಫ್ ಮಂಡಳಿ ಮಸೂದೆ ತಿದ್ದುಪಡಿ ಕೈ ಬಿಡಿ

ರುಚಿಕರ ಟೊಮೆಟೊ ಹಪ್ಪಳ ಮಾಡುವುದೇಗೆ?; ಇಲ್ಲಿದೆ ಸಿಂಪಲ್ ವಿಧಾನ | Recipe
ಭರ್ಜರಿ ಭೋಜನ ಹಪ್ಪಳ ಇಲ್ಲದಿದ್ದರೆ ಸಂಪೂರ್ಣ ಎಂದು ಎನ್ನಿಸುವುದಿಲ್ಲ. ಊಟದ ಎಲೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಈಗ…
ಸಿಹಿ ಮೊಸರು ಅಥವಾ ಉಪ್ಪುಸಹಿತ ಮೊಸರು; ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ | Health Tips
ಭಾರತದ ಪ್ರತಿಯೊಂದು ಮನೆಯಲ್ಲೂ ಮೊಸರನ್ನು ಸೇವಿಸಲಾಗುತ್ತದೆ. ಅದರ ಜೀರ್ಣಕಾರಿ ಪ್ರಯೋಜನಗಳು, ಆರೋಗ್ಯ ವರ್ಧಕ ಗುಣಗಳು ಮತ್ತು…
ಪಿರಿಯಡ್ಸ್ನಲ್ಲಿ ಮಹಿಳೆಯರು ಈ 3 ಆಹಾರವನ್ನು ತಪ್ಪದೆ ಸೇವಿಸಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಆಹಾರ ಪದ್ಧತಿಗೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ನಿವಾರಿಸುವಲ್ಲಿ ಮತ್ತು ಜನರಿಗೆ ಸರಿಯಾದ ಮಾಹಿತಿಯನ್ನು ನೀಡುವುದರಲ್ಲಿ ಅವರು…