More

    ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಸಾಧನೆ ಮಾಡಿ

    ಕಡೂರು: ದೇವರು ಅಂಗಲವಿಕರಿಗೆ ಸವಾಲು ಎದುರಿಸುವ ವಿಶೇಷ ಶಕ್ತಿ ಹಾಗೂ ಸ್ಥೈರ್ಯ ನೀಡಿದ್ದು, ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಸಾಧನೆ ಮಾಡಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
    ಅಂಬೇಡ್ಕರ್ ಭವನದಲ್ಲಿ ಶನಿವಾರ ಅಲಿಂಕೋ ಸಂಸ್ಥೆ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ , ಎಸ್‌ಪಿಐಡಿ, ಎಚ್‌ಎಂಟಿ ಸಂಸ್ಥೆಗಳ ಸಹಯೋಗದಲ್ಲಿ ಕಡೂರು-ತರೀಕೆರೆ ತಾಲೂಕುಗಳ 200ಕ್ಕೂ ಅಧಿಕ ವಿಕಲಚೇತನ ಲಾನುಭವಿಗಳಿಗೆ ಸಾಧನ, ಸಲಕರಣೆಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
    ವಿಕಲಚೇತನರಲ್ಲಿ ಅದ್ಯಮ್ಯ ಚೇತನವಿರುತ್ತದೆ, ಅಂಗನ್ಯೂನತೆ ಎತ್ತಿಹಿಡಿಯುವ ಬದಲು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಿದೆ. ಅಂಗವೈಕಲ್ಯತೆಗೆ ವೈಜ್ಞಾನಿಕ ಕಾರಣ ಬೇರೆಯಾಗಿದೆ. ಸಮಾಜದಲ್ಲಿ ಸ್ವಾವಲಂಬಿಗಳಾಗಿ ಸಧೃಡವಾಗಿ ಜೀವನ ನಡೆಸುವಂತೆ ಸ್ಪೂರ್ತಿ ತುಂಬಬೇಕು. ಅವರಿಗೆ ಉತ್ತಮ ವೇದಿಕೆ, ಕೌಶಲ್ಯ ಹಾಗೂ ಪೂರಕ ವ್ಯವಸ್ಥೆ ಕಲ್ಪಿಸಬೇಕಿದೆ ಎಂದರು.
    ಕೃತಕ ಕೈಕಾಲು, ಕ್ಯಾಲಿಪರ್ಸ್‌, ಟ್ರೈ ಸೈಕಲ್, ಶ್ರವಣ ಸಾಧನ ಮತ್ತು ವೀಲ್‌ಚೇರ್‌ಗಳನ್ನು ವಿತರಿಸಲಾಯಿತು. ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಪೃಥ್ವಿರಾಜ್, ಮುಖ್ಯಾಧಿಕಾರಿ ಕೆ.ರುದ್ರೇಶ್, ಎಸ್‌ಪಿಐಡಿ ಸಂಸ್ಥೆ ಕಾರ್ಯದರ್ಶಿ ಕೆ.ಪ್ರಕಾಶ್, ಬಿಆರ್‌ಸಿ ಪ್ರೇಮ್‌ಕುಮಾರ್, ಕೆ.ಜಿ.ಶ್ರೀನಿವಾಸ್‌ಮೂರ್ತಿ, ಶಾನವಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts