More

    ಹಳ್ಳಿ ಮೇಷ್ಟ್ರು 233| ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ

    ಹಳ್ಳಿ ಮೇಷ್ಟ್ರು 233| ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ ದೈನಂದಿನ ಬಳಕೆಯ ವಾಕ್ಯಗಳು

    # ಅವನು ತನ್ನನ್ನು ಅಗಲಿದ ಪತ್ನಿಗಾಗಿ ನಿಶ್ಶಬ್ದದಲ್ಲಿ ದುಃಖಿಸಿದ / ಶೋಕ ವ್ಯಕ್ತಪಡಿಸಿದ.

    He mourned for his bereaved wife in silence.

    # ಮಾವಿನ ಹಣ್ಣು ತಿಂದಾದಾಗ ಹುಡುಗಿಯ ಮುಖ ಮತ್ತು ಕೈಯಲ್ಲಿ ಹಣ್ಣಿನ ರಸ ಅಂಟಿಕೊಂಡಿತ್ತು.

    The child’s hands and face were besmeared with mango juice as she ate the mango.

    # ನನ್ನ ಕೈಗಳನ್ನು ಹಿಡಿದುಕೊಂಡು ಆತ ಹೇಳಿದ, ‘ನಿನ್ನ ದಮ್ಮಯ್ಯ ಅನ್ನುತ್ತೇನೆ, ದಯವಿಟ್ಟು ಸಹಾಯ ಮಾಡು. ನಾನು ಹಿಡಿದುಕೊಂಡಿರುವುದು ನಿನ್ನ ಕೈಯಲ್ಲ, ಕಾಲು ಎಂದುಕೊ!’

    He said, “I beseech you; Please assume that I am holding your legs, not hands!”

    # ಅವನು ಅವಳ ಯೋಚನೆಯಲ್ಲಿ ಎಷ್ಟು ಮುಳುಗಿದ್ದನೆಂದರೆ ನಾಯಿ ಅವನ ಕೆನ್ನೆ ನೆಕ್ಕಿದಾಗ ಅವಳೇ ಮುತ್ತಿಟ್ಟಂತನಿಸಿತು!

    He was so besotted with her that when his dog licked his cheek, he felt it was her!

    # ಅವಳ ಸಂದೇಶ ಅವಳು ಅವನನ್ನು ಭೇಟಿಯಾಗಲು ಉತ್ಸುಕಳಾಗಿರುವುದನ್ನು ಸೂಚಿಸಿತು.

    Her SMS bespoke her eagerness to meet him personally.

    # ಬಸ್ ನಿಲ್ದಾಣ ಬೇಗನೆ ತಲುಪಲು / ಬಸ್ ನಿಲ್ದಾಣಕ್ಕೆ ಹತ್ತಿರದ ದಾರಿ ಯಾವುದು?

    What is the best way/ quickest way to get to the bus-stand?

    # ಉದ್ಯೋಗಿಯ ಮಿಥ್ಯಾರೋಪಗಳಿಂದ ಮರ್ಯಾದೆಗೆ ಕುಂದಾದುದಕ್ಕೆ ಆತ ವ್ಯಗ್ರಗೊಂಡಿದ್ದ.

    He was indignant as the accusations of his employee besmirched his reputation.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts