ಕನ್ನಡದಲ್ಲೇ ಇಂಗ್ಲಿಷ್ ಕಲಿಕೆ: ಇಂದಿನ ಇಂಗ್ಲಿಷ್ ಪದಗಳು

# Swag (ಸ್ವ್ಯಾಗ್​) = ಕಳ್ಳಮಾಲು

ಅವನು ಅಂಗಿಗಳನ್ನು ರೂ.50ರಂತೆ ಮಾರುತ್ತಿದ್ದಾನೆ. ಅದು ಕದ್ದ ಮಾಲೇ ಇರಬೇಕು.

He is selling the shirts at Rs.50 a piece. It must be swag.

# Fly post (ಫ್ಲೆ ೖ ಪೋಸ್ಟ್) = ಕೆಟ್ಟದಾಗಿ ಬರೆಯು

ಯಾರೋ ಮಾರುಕಟ್ಟೆಯ ಗೋಡೆಯ ಮೇಲೆ ಸ್ಥಳೀಯ ಶಾಸಕರ ಬಗ್ಗೆ ಕೆಟ್ಟದಾಗಿ ಬರೆದ ಭಿತ್ತಿಪತ್ರಗಳನ್ನು ಹಚ್ಚಿದ್ದಾರೆ.

Somebody has fly-posted about the local MLA on the walls of market yard.

ಅನುಮತಿಯಿಲ್ಲದೆ ಭಿತ್ತಿಪತ್ರ ಅಂಟಿಸುವವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

Fly posters will be prosecuted.

# Bamboozle (ಬ್ಯಾಂಬೂಝå್) = ಮರುಳುಗೊಳಿಸು

ಕೇವಲ ರೂ.10 ಗೆ ಆಭರಣಗಳು ಹೊಳೆಯುವಂತೆ ಮಾಡುವೆನೆಂದ ಕಪಟಿಯ ಮಾತಿಗೆ ಮರುಳಾಗಿ ಅವಳು ತನ್ನೆಲ್ಲಾ ಆಭರಣಗಳನ್ನು ಕೊಟ್ಟಳು!

A trickster bamboozled her into giving him all her jewels so that he could shine them like new just for Rs.10 !

# Con (ಕಾನ್) = ಮರುಳು ಮಾಡಿ ದೋಚು

ರಾತ್ರಿ ಬೆಳಗಾಗುವುದರಲ್ಲಿ ಹಣ ಇಮ್ಮಡಿಯಾಗುವುದೆಂದು ಅವನನ್ನು ಮರುಳು ಮಾಡಿ ಅವರು ಎಲ್ಲಾ ಹಣ ದೋಚಿದರು.

They conned him out of all his money by telling him that it would double overnight.

# Trespass (ಟ್ರೆಸ್​ಪಾಸ್) = ಅತಿಕ್ರಮ ಪ್ರವೇಶ

ಇನ್ನೊಬ್ಬರ ಜಾಗದಲ್ಲಿ ಅವರ ಅನುಮತಿಯಿಲ್ಲದೆ ಅತಿಕ್ರಮ ಪ್ರವೇಶ ಮಾಡಿದರೆ ಅದಕ್ಕೆ ಶಿಕ್ಷೆ ಏನು?

What is the punishment for the crime of trespassing?

Leave a Reply

Your email address will not be published. Required fields are marked *