ಕನ್ನಡದಲ್ಲೇ ಇಂಗ್ಲಿಷ್ ಕಲಿಕೆ: ಇಂದಿನ ಇಂಗ್ಲಿಷ್ ಪದಗಳು

Sip (ಸಿಪ್) = ಗುಟುಕರಿಸು

ಕಾಫಿ ತುಂಬಾ ಬಿಸಿ ಇದ್ದುದರಿಂದ ತುಂಬಾ ನಿಧಾನವಾಗಿ ಗುಟುಕರಿಸಿ ಕುಡಿಯಬೇಕಾಯ್ತು.

The coffee was very hot and I had to sip it very slowly.

Guzzle (ಗಝ್ಲ್ ) = ಗಬಗಬನೆ ತಿನ್ನು/ಮುಕ್ಕು

ಅವನು ದೊಡ್ಡ ತುತ್ತಿನಲ್ಲಿ ಗಬಗಬನೆ ಬಿರಿಯಾನಿ ತಿಂದು ನೀರು ಕುಡಿದು ಢರ್ರೆಂದು ತೇಗಿದ.

He guzzled the biriyani and drank water and belched heavily.

Quaff (ಕ್ವಾಫ್) = ಗಟಗಟನೆ ಕುಡಿಯು

ಆತ ಗಡಿಬಿಡಿಯಲ್ಲಿ ಒಂದು ಚೊಂಬು ನೀರು ಗಟಗಟನೆ ಕುಡಿದು ಹೊರಟ.

He quaffed a mug of water in hurry and left.

Rumble (ರಂಬ್ಲ್) = ಹೊಟ್ಟೆಯೊಳಗೆ ಸದ್ದಾಗು

ನನ್ನ ಹೊಟ್ಟೆಯಲ್ಲಿ ಟರ್.. ಸ್.. ಡುಂಯ್… ಎಂಬ ಸದ್ದು ಉಂಟಾದಾಗ ಸಂಡಾಸಿಗೆ ಹೋಗಬೇಕೆನಿಸಿತು.

My stomach rumbled and I felt like going to toilet.

Hiccup (ಹಿಕಪ್) = ಎಕ್ಕಡು/ಬಿಕ್ಕಳಿಕೆ

ಸಾಮಾನ್ಯವಾಗಿ ಅಡುಗೆಯಲ್ಲ ಉಪ್ಪು ಕಡಿಮೆ ಇದ್ದರೆ ನನಗೆ ಎಕ್ಕಡು ಬರುತ್ತದೆ.

I usually get hiccups if the salt is less in the food.

Gargle (ಗಾರ್ಗ್ಲ್) = ಗಳಗಳಿಸು

ಕೆಮ್ಮು ಕಡಿಮೆಯಾಗದಿದ್ದರೆ ಉಪ್ಪು ಬೆರೆಸಿದ ಬಿಸಿನೀರಿನಿಂದ ಗಂಟಲಲ್ಲಿ ಗಳಗಳಿಸಿ.

If the coughing doesn’t subside, have a gargle with hot salty water.

Leave a Reply

Your email address will not be published. Required fields are marked *