More

    ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು

    ದೈನಂದಿನ ಬಳಕೆಯ ವಾಕ್ಯಗಳು

    ಸಾಯುವ ಮೊದಲು ಹಲವಾರು ವರ್ಷ ಅವರು ಹಾಸಿಗೆಯಲ್ಲಿ ನರಳಿಕೊಂಡಿದ್ದರು.

    He had been ailing for years  in the bed before he died.

    ಅವಳನ್ನು ಭೇಟಿಯಾದ ದಿನದಿಂದ ಅವನು ಭೂಮಿಯ ಮೇಲಿಲ್ಲ / ಆಕಾಶದಲ್ಲೇ ತೇಲಿಕೊಂಡಿದ್ದಾನೆ.

    Ever since he met her, he has been walking on air.

    ನೀವು ಹೋಗುವಾಗ ಬಾಗಿಲಿಗೆ ಬೀಗ ಹಾಕಬೇಡಿ, ಸಂಪೂರ್ಣ ಮುಚ್ಚದಂತೆ ಸ್ವಲ್ಪ ತೆರೆದಿಡಿ.

    Don’t lock the door when you leave, just leave it ajar.

    ಹಾಸಿಗೆಗೆ ಹೊದೆಸುವ ಮುನ್ನ ಬೆಡ್​ಶೀಟ್​ಗಳು ಸರಿಯಾಗಿ ಒಣಗಿವೆಯೇ ಎಂದು ನೋಡಿಕೊ.

    Please see that the sheets are aired properly before making the bed.

    ಅಲಾರಾಂವ​ನ್ನು ಎಷ್ಟು ಘಂಟೆಗೆ ಇಟ್ಟಿದ್ದೀ?

    What time have you set the alarm for?

    ಕುಡಿದ ಕನಿಷ್ಠ 20 ನಿಮಿಷದವರೆಗೆ ಯಾರ ಉಸಿರಲ್ಲೂ ನಿನಗೆ ಅಲ್ಕೋಹಾಲಿನ ವಾಸನೆ ಬರುವುದಿಲ್ಲ.

    You can’t smell alcohol on anyone’s breath until at least for 20 minutes of drinking.

    ಅವರ ಮಗಳ ಕಣ್ಣುಗಳು ತುಂಟತನದಿಂದ ಬೆಳಗುತ್ತಿದ್ದವು.

    His daughter’s eyes were alight with mischief.

    ಒಂದು ಜೇನುನೊಣ ಹಾರಿ ಬಂದು ಹೂವಿನ ಮೇಲೆ ಮೆಲ್ಲಗೆ ಕುಳಿತುಕೊಂಡಿತು.

    A bee alighted gently on the flower.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts