More

    ದೈನಂದಿನ ಬಳಕೆಯ ವಾಕ್ಯಗಳು

     

    ನಿನ್ನೆ ಆನೆ ಒಂದು ಮೊಟ್ಟೆ ಇಟ್ಟಿತೆಂದು ಅವನು ಹೇಳಿದ. ಅದನ್ನು ನೀನು ನಂಬುವೆಯಾದರೆ ನೀನು ಏನು ಹೇಳಿದರೂ ನಂಬುತ್ತೀ ಎಂದರ್ಥ!

    He said that the elephant laid an egg yesterday. If you believe that, you will believe anything!

    ಮೀನು ಮಾರುವ ಈ ಹೆಂಗಸರು ಜಗಳ / ವಾದ ಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆ.

    These fisherwomen are very belligerent.

    ಎಳೆಯುವ ಹಗ್ಗ ಇಲ್ಲದಿದ್ದುದರಿಂದ ಹುಡುಗನಿಗೆ ಗಂಟೆ ಬಾರಿಸಲಾಗಲಿಲ್ಲ.

    The boy could not ring the bell as it didn’t have a bell-pull.

    ದೈನಂದಿನ ಬಳಕೆಯ ವಾಕ್ಯಗಳುಮಂಗಳೂರಿನ ಹೆಚ್ಚಿನ ರಸ್ತೆಗಳು ಉಬ್ಬು ದಿಣ್ಣೆಗಳು, ತಗ್ಗುಗಳು ಹಾಗೂ ತಿರುವುಗಳಿಂದ ಕೂಡಿವೆ.

    Most of the roads in Mangalore have ascents, descents and bends.

    ತೆಂಗಿನ ಮರವನ್ನು ಅರ್ಧದಷ್ಟು ಹತ್ತಿದ ನಂತರ ನನ್ನ ಕಾಲುಗಳು ನಮ್ಮಿಂದಾಗದೆಂಬಂತೆ ನಡುಗಲಾರಂಭಿಸಿದವು.

    After climbing half the coconut tree, my legs began to give away.

    ಅವನು ಕೆಳಗಡೆ ಆಟವಾಡುತ್ತಿದ್ದ ಮಕ್ಕಳನ್ನು ನೋಡುತ್ತಾ ನಿಂತುಕೊಂಡ.

    He stood looking at the children playing beneath.

    ಬಗ್ಗಿ ಮಂಚದ ಕೆಳಗೆ ನೋಡು.

    Bend down and look under the cot.

    ನನ್ನ ತಂದೆಯ ಉಯಿಲಿನಿಂದ ಒಂದು ಮನೆ ಇರುವ ಜಾಗ ನನ್ನ ಪಾಲಿಗೆ ಬಂತು.

    My father’s will got me a land with a house as bequest.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts