ದೈನಂದಿನ ಬಳಕೆಯ ವಾಕ್ಯಗಳು
ಅವಳು ಕ್ಲಬ್ಗೆ ಬಂದೊಡನೆ ಒಂದಷ್ಟು ಚಾಡಿ ಹೇಳುವ ಮಾತುಕತೆ ನಡೆಯುತ್ತದೆ.
A lot of backbiting goes on as soon as she comes to the club.
ದಯವಿಟ್ಟು ಹಿಂದಿನ ಪರದೆಯ ಬಳಿ ನಿಂತು ನನ್ನ ಮಾತಿನ ಸಾಲುಗಳ ಭಾಗವನ್ನು ಸ್ವಲ್ಪ ಹೇಳಿ ನೆನಪು ಮಾಡುತ್ತಿರು.
Please stand by the backdrop and prompt me my lines.
ನಿಮ್ಮ ಬಳಿ 1-1-2017ನೆ ತಾರೀಖಿನ ವಿಜಯವಾಣಿ ಹಳೆಯ ಪತ್ರಿಕೆ ಇದೆಯೆ?
Do you have the back-copy of Vijayavani dated 1-1-2017?
ಅಲ್ಲಿ ನೋಡಿ. ಹಿಂಭಾಗದಲ್ಲಿ ಕಪ್ಪು ಅಂಗಿಯಲ್ಲಿರುವ ಹುಡುಗಿ ನಾನೇ !
See there. The little figure in black dress in the background is me!
ಮನೆಯಲ್ಲಿ ಒಬ್ಬನೇ ವ್ಯಾಯಾಮ ಮಾಡಿದರೆ ಒಂದು ವಾರ ಮಾತ್ರ ನಡೆಯುತ್ತದೆ. ನಂತರ ಖಂಡಿತಾ ಹಿಂದೆ ಸರಿಯುತ್ತೀ.
If you do exercise alone at home, it’ll be only for a week. After that,
you’ll backslide.
ಅವನು ಚಿಂತಾಕ್ರಾಂತನಾಗಿದ್ದ, ಹಾಗಾಗಿ ಆ ಕಡೆ ಈ ಕಡೆ ಶತಪಥ ಹಾಕುತ್ತಿದ್ದ.
He was worried and was pacing backwards and forwards.
ಜಾಗರೂಕನಾಗಿರು, ಹಿಂದೆ ಹೋಗುವ ನೀರು ನಿನ್ನನ್ನು ಸುಳಿಯೊಳಗೆ ಸೆಳೆದೀತು.
Be careful, the backwash may pull you into a whirl.