ದೈನಂದಿನ ಬಳಕೆಯ ವಾಕ್ಯಗಳು
ವಿದ್ಯಾರ್ಥಿಗಳಲ್ಲಿ ಮನೆಗೆಲಸದ ಬಗ್ಗೆ ಇದ್ದ ವಿಶೇಷವಾದ ನಿರಾಸಕ್ತಿಯನ್ನು ಗಮನಿಸಿದೆ.
I noticed widespread apathy among the students towards homework.
ಅವಳು ಅವನ ಯೋಚನೆಯಲ್ಲಿ ಮುಳುಗಿರುವುದು ಎದ್ದು ಕಾಣುತ್ತಿತ್ತು.
It was apparent that she was missing him a lot.
ದೊಡ್ಡ ಸುಂದರ ಉದ್ಯಾನ ಮತ್ತು ಆಮದಾದ ಕಾರ್ಗಳು ಶ್ರೀಮಂತಿಕೆಯನ್ನು ಬಿಂಬಿಸುತ್ತವೆ.
Beautiful garden and imported cars outside the house give the appearance of wealth.
ಹೋಟೆಲಿನ ತೆರೆದ ಕಿಟಕಿಯಿಂದ ಬಿರಿಯಾನಿಯ ಘಮ ಎಲ್ಲೆಡೆ ಪಸರಿಸಿದೆ.
The appetizing smell of Biriyani wafted through the open window of the hotel.
ನಾನು 11 ಘಂಟೆಗೆ ಒಂದು ವಡಾ ತಿಂದೆ, ಅದೀಗ ಊಟ ಮಾಡಲು ಹಸಿವೆಯೇ ಆಗದಂತೆ ಮಾಡಿದೆ.
I had a Vada at 11 AM and it has spoiled my appetite for dinner.
ನೀವಿಬ್ಬರು ನನ್ನ ಕಣ್ಣುಗಳ ಕಾಂತಿ / ದೃಷ್ಟಿ ಇದ್ದಂತೆ.
You both are like the apples of my eyes.
ಈಗ ಕದ್ದ ಮಾಲನ್ನು ನಮ್ಮಲ್ಲಿ ಹಂಚಿಕೊಂಡು ಭೂಗತರಾಗೋಣ. ಸರಿಯೆ?
Let’s apportion the swag and go into exile. Shall we?
ಮಕ್ಕಳ ಕೋಣೆಗೆ ತಿಳಿ ಗುಲಾಬಿ ಬಣ್ಣ ಅತ್ಯಂತ ಸರಿಹೊಂದುವ ಬಣ್ಣ.
Light pink is the most apposite colour for the children’s room.