More

    ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು

    ದೈನಂದಿನ ಬಳಕೆಯ ವಾಕ್ಯಗಳು

    ಸುಳ್ಳು ಅಂಕಪಟ್ಟಿಗಳನ್ನು ಕೊಟ್ಟಿದ್ದಕ್ಕಾಗಿ ಅವನ ನೇಮಕಾತಿಯನ್ನು ರದ್ದುಪಡಿಸಲಾಯ್ತು.

    His appointment was annulled as he had submitted fake certificates.

    ಆ ಹುಡುಗ ಮಠದ ಮುಖ್ಯ ಸ್ವಾಮೀಜಿಗಳ ಪಟ್ಟದ ಶಿಷ್ಯನಾಗುವನೆಂದು ತಿಳಿಯಲಾಗಿದೆ.

    That boy is said to be the anointed successor to the chief abbot of the monastery.

    ಹೆಸರು ಹೇಳಲಿಚ್ಛಿಸದ ದಾನಿಯೊಬ್ಬರು ಅನಾಥಾಶ್ರಮಕ್ಕೆ ಒಂದು ಲಕ್ಷ ರೂ. ದಾನ ಕೊಟ್ಟಿದ್ದಾರೆ.

    An anonymous benefactor has donated one lac to the orphanage.

    ಅವಳು ನೆರೆಕೆರೆಯವರೊಡನೆ ಬದ್ಧ ವೈರಿಯಂತೆ / ತೀವ್ರ ಅಸಮಾಧಾನದಿಂದ ಇರುತ್ತಾಳೆ.

    She has been very antagonistic towards her neighbours.

    6 ಘಂಟೆಗಳ ಕಾಲ ಸತತ ಕಾರ್ ಚಲಾಯಿಸಿದ ಮೇಲೆ ಯಾವಾಗ ಮುಗಿಯುವುದೋ ಎಂದು ರೇಜಿಗೆ ಆಯ್ತು.

    I got antsy after driving alone for 6 hours.

    ನಮಗೆ ಇನ್ನೂ 3 ಕಿ.ಮೀ. ಹೋಗಲಿಕ್ಕಿದೆ. ಸ್ವಲ್ಪ ಬೇಗ ನಡೆಯಲಾಗದೆ?

    We have 3 more KM to go. Can’t you walk any faster?

    ನನ್ನ ಮಿತ್ರ ಮತ್ತು ಅವನ ಪತ್ನಿ ಸುಮಾರು 4 ತಿಂಗಳಿಂದ ಬೇರೆ ಇದ್ದಾರೆ.

    My friend and his wife have been apart for 4 months now.

    ನಾನು ನನ್ನ ಪತ್ನಿಯಿಂದ ದೂರ ಇದ್ದಾಗ ಪ್ರತಿ ರಾತ್ರಿ ಅವಳಿಗೆ ಕರೆ ಮಾಡುತ್ತಿದ್ದೆ.

    I was calling my wife every night when we were apart.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts