More

    ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು

    ದೈನಂದಿನ ಬಳಕೆಯ ವಾಕ್ಯಗಳು

    ಅವಳು ಅವನ ಕೈ ಹಿಡಿದುಕೊಂಡು ನಿಧಾನವಾಗಿ ರಸ್ತೆ ಉದ್ದಕ್ಕೆ ಅಲ್ಲಲ್ಲಿ ನಿಂತು ಗಮನಿಸುತ್ತಾ ನಡೆದು ಹೋದಳು.

    She clasped his hand and ambled along the street pulling up at places.

    ಅವನು ಅಂಬುಲೆನ್ಸ್ ತರಿಸಿದ ಆದರೆ ಅದು ಬರುವಷ್ಟರಲ್ಲಿ ಅವಳು ತೀರಿಕೊಂಡಿದ್ದಳು.

    He called an ambulance but she was dead by the time it arrived.

    ಯಾರೋ ಒಬ್ಬ ಹೆಂಗಸನ್ನು ಒಮ್ಮಿಂದೊಮ್ಮೆಗೆ ಆಕ್ರಮಿಸಿ ಅವರ ಚಿನ್ನದ ಸರದೊಂದಿಗೆ ಓಡಿಹೋದ.

    Somebody ambushed a lady and made away with her gold chain.

    ನಮಗೊಂದು ದೊಡ್ಡ ಮೊತ್ತದ ಸಾಲ ಸಿಗದಿದ್ದರೆ ನಮ್ಮ ಪರಿಸ್ಥಿತಿ ಖಂಡಿತಾ ಉತ್ತಮಗೊಳ್ಳುವುದಿಲ್ಲ.

    If we don’t get a big loan, our position will not be ameliorated.

    ಅವರ ಮುಖಭಾವದಿಂದಲೇ ಎನೋ (ಕೆಟ್ಟದು / ತೊಂದರೆ) ಆಗಿದೆ ಎಂಬುದು ನನಗೆ ತಿಳಿದುಬಂದಿತ್ತು.

    I could say just by the look on their faces that something was amiss.

    ನಮ್ಮ ವ್ಯವಹಾರದಲ್ಲಿ ನಿಜವಾದ ಲಾಭ ಎಷ್ಟಿದೆ ಎಂಬ ನಿಜವನ್ನು ಬ್ಯಾಂಕಿನವರಿಗೆ ಮನಗಾಣಿಸಿದ್ದಿದ್ದರೆ ಅವರು ಸಾಲ ಮಂಜೂರು

    ಮಾಡಲು ಪ್ರಭಾವಿತ / ತಯಾರಾಗುತ್ತಿದ್ದರೇನೋ.

    I guess, the banker could have been amenable to sanction the loan if we had adduced the actual profit in our business.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts