More

    ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು

    ದೈನಂದಿನ ಬಳಕೆಯ ವಾಕ್ಯಗಳು

    ನಾನು ಕನ್ನಡಕ ಧರಿಸಬೇಕು, ಇಲ್ಲವಾದರೆ ಸರಿಯಾಗಿ ಕಾಣುವುದಿಲ್ಲ / ಎಲ್ಲವೂ ಅಸ್ಪಷ್ಟವಾಗಿರುತ್ತದೆ.

    I need to wear my glasses otherwise, everything is a blur.

    ಆತ ಮೊಣಕಾಲೂರಿ ಕುಳಿತು ತಲೆ ಬಗ್ಗಿಸಿ ವಂದನೆ ಸಲ್ಲಿಸಿದ.

    He bobbed a curtsy (= bent down from the knees briefly as a sign of respect).

    ಅವಳು ಒಂದು ವಾರ ಊರಿಂದ ಹೊರಗಿರಬೇಕಾದ್ದರಿಂದ ತನ್ನ ಮುದ್ದಿನ ನಾಯಿಯನ್ನು ತನ್ನ ಗೆಳತಿಯ ಬಳಿ ನೋಡಿಕೊಳ್ಳಲು ಬಿಟ್ಟುಹೋದಳು.

    She boarded her pet dog with a friend as she was out of city for a week.

    ಅಕ್ಕಿ ಬೇಯಲು ಚರಿಗೆಯಲ್ಲಿ ಹಾಕಿದ ನೀರೆಲ್ಲ ಕುದಿದು ಆವಿಯಾಗುತ್ತಿದೆ.

    Rice is boiling dry.

    ಚರಿಗೆಯಲ್ಲಿ ಹಾಕಿದ ನೀರು ಕುದಿದು ಉಕ್ಕಿ ಮೇಲೆ ಬಂದು ಚೆಲ್ಲುತ್ತಿದೆ.

    The vessel is boiling over.

    ನನಗಾಗಿ ಸ್ವಲ್ಪ ನೀರು ಕುದಿಸು.

    Please boil up some water for me.

    ನೀರನ್ನು ಕುದಿಯುವಷ್ಟು ಬಿಸಿ ಮಾಡಿ ನಂತರ ಅದಕ್ಕೆ ಶ್ಯಾವಿಗೆ ಹಾಕು.

    Bring the water to the boil and then add the noodles. / Let the water come
    to the boil and then add the noodles.

    ಕುರ್ವದ ರಸ ಕುದಿದು ಕಡಿಮೆಯಾಗುತ್ತಿದೆ. ಅದಕ್ಕೆ ಸ್ವಲ್ಪ ನೀರು ಬೆರೆಸಬೇಕೆ?

    The broth in the Kurma is boiling down. Should I add some water?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts