ಕನ್ನಡದಲ್ಲಿ ಇಂಗ್ಲಿಷ್ ಕಲಿಕೆ: ಇಂದಿನ ಇಂಗ್ಲಿಷ್ ಪದಗಳು

Disown (ಡಿಸೋನ್) = ತನ್ನದಲ್ಲವೆನ್ನು

ತನ್ನ ಗೆಳೆಯನೊಡನೆ ಓಡಿ ಹೋಗಿದ್ದಕ್ಕೆ ರಾಣಿಯ ಹೆತ್ತವರು ತಮಗೂ ಆಕೆಗೂ ಸಂಬಂಧ ಕಡಿದುಹೋಯಿತೆಂದರು.

Rani’s parents disowned her when she eloped with her neighbour.

Disclaim (ಡಿಸ್​ಕ್ಲೇಮ್ = ತಾನು ಕಾರಣವಲ್ಲ ಎನ್ನು

ಪಾಕಿಸ್ತಾನವು ದಾಳಿಗೆ ಕಾರಣ ತಾನಲ್ಲ ಎಂದಿತು.

Pak disclaimed any responsibility for the attack.

Dissent (ಡಿಸ್ಸೆಂಟ್) = ಒಪ್ಪದಿರು

ಅವನು ಕ್ಲಬ್​ಗೆ ಸೇರಲು ಒಪ್ಪಲಿಲ್ಲ.

He dissented to join the club.

Gainsaid (ಗೇನ್ಸೆಡ್) = ಒಪ್ಪದಿರಲಾಗದಿರು

ಇಂಗ್ಲಿಷ್ ಭಾಷೆಯ ಬಗ್ಗೆ ಅವರ ಜ್ಞಾನವನ್ನು ಒಪ್ಪಿಕೊಳ್ಳದಿರಲು ಯಾರಿಗೂ ಆಗಲಿಲ್ಲ.

Nobody gainsaid his knowledgeon English language.

Grizzle (ಗ್ರಿಝå್) = ಶಬ್ದವಿಲ್ಲದೆ ಅಳು

ಹೊಸದಾಗಿ ನರ್ಸರಿಗೆ ಸೇರಿಸಲ್ಪಟ್ಟಿದ್ದ ಮಗುವೊಂದು ಅಮ್ಮ ಬೇಕೆಂದು ದಿನವಿಡೀ ಹೆಚ್ಚು ಶಬ್ದವಿಲ್ಲದೆ ಅತ್ತಿತು.

A newly admitted child into nursery class grizzled all day long for her mother.

Hail (ಹೇಲ್) = ಕರೆಯು

ನೀವು ತಯಾರಾಗಿದ್ದರೆ ನಾನು ಬಾಡಿಗೆ ಕಾರ್​ಗಾಗಿ ಕೂಗುತ್ತೇನೆ.

I’ll hail a taxi if you are ready.

Murmur (ಮರ್ಮರ್) = ಗುಸುಗುಟ್ಟು

ಮುಖ್ಯಸ್ಥರು ಸಹಾಯಕಿಗೆ ಮಾತ್ರ ವೇತನ ಹೆಚ್ಚಿಸಿದ್ದಕ್ಕೆ ಉದ್ಯೋಗಿಗಳು ತಮ್ಮೊಳಗೆ ಗುಟ್ಟಾಗಿ ಗುಸುಗುಸು ಎನ್ನುತ್ತಿದ್ದರು.

Officials were murmuring about the increment given only to the boss’s PA.

Leave a Reply

Your email address will not be published. Required fields are marked *