ಬಾವಿಗೆ ಬಿದ್ದು ಚಿರತೆ ಸಾವು

ಕಾರ್ಕಳ: ಆಹಾರ ಬೇಟೆಯಾಡಲು ಬಂದ ಚಿರತೆಯೊಂದು ಆಯತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಂದಳಿಕೆ ಗ್ರಾಮದ ಅಗೋಳಿಬೈಲು ಎಂಬಲ್ಲಿ ನಡೆದಿದೆ. ಅಗೋಳಿಬೈಲು ನಿವಾಸಿ ಪ್ರಕಾಶ್ ಡಿಸೋಜಾ ಎಂಬುವರ ಮನೆಯ ಬಾವಿಗೆ ಚಿರತೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದೆ. ಆಹಾರ ಬೇಟೆಗೆ ಬಂದ ಚಿರತೆ, ಬಾವಿಯ ದಂಡೆಯಲ್ಲಿದ್ದಾಗ ಆಕಸ್ಮಿಕವಾಗಿ ಆಯತಪ್ಪಿ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಬಾವಿಯಿಂದ ಚಿರತೆ ಕಳೇಬರ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ಮಣ್ ಉಪ ವಲಯ ಅರಣ್ಯಾಧಿಕಾರಿ ಹುಕ್ರಪ್ಪ … Continue reading ಬಾವಿಗೆ ಬಿದ್ದು ಚಿರತೆ ಸಾವು