ಮಹಾಲಿಂಗಪುರ: ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಮುಖಂಡರ ಮೇಲೆ ಲಾಠಿ ಚಾರ್ಜ್ ಮಾಡಿದ ಘಟನೆ ಖಂಡಿಸಿ ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ಪಂಚಮಸಾಲಿ ಸಮಾಜದವರು ರಸ್ತೆತಡೆ ನಡೆಸಿ ಗುರುವಾರ ಪ್ರತಿಭಟನೆ ನಡೆಸಿದರು.
ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗಲೀಕರ ಮಾತನಾಡಿ, ಹೋರಾಟ ಹತ್ತಿಕ್ಕಲು ಸರ್ಕಾರ ಪ್ರಯತ್ನಿಸುತ್ತಿದೆ. ಎಷ್ಟೇ ಕುತಂತ್ರ ಮಾಡಿದರೂ ನಾವು ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು. ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಘೋಷಣೆ ಕೂಗಿದರು.
ಪಂಚಮಸಾಲಿ ಸಮಾಜದ ನಗರ ಘಟಕದ ಅಧ್ಯಕ್ಷ ಬಸವರಾಜ ಕೊಪ್ಪದ, ಮುಖಂಡರಾದ ಶ್ರೀಶೈಲಪ್ಪ ಉಳ್ಳಾಗಡ್ಡಿ, ಶ್ರೀಶೈಲ ವಜ್ರಮಟ್ಟಿ, ಹನುಮಂತ ಶಿರೋಳ, ಸಿದ್ದುಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಪರಪ್ಪ ಹುದ್ದಾರ, ಬಸವರಾಜ ನಾಗನೂರ, ಚನಬಸು ಯರಗಟ್ಟಿ, ಬಸಪ್ಪ ಬ್ಯಾಳಿ, ಶಿವಲಿಂಗ ಕೌಜಲಗಿ, ಬಸವರಾಜ ದಲಾಲ, ಮಹಾಲಿಂಗಪ್ಪ ಕಂಠಿ, ಮಹಾದೇವ ಮೇಟಿ, ಆನಂದ ಖೇತಗೌಡ, ಚನಬಸು ಹುರಕಡ್ಲಿ, ಮಂಜು ಮುತ್ತಪ್ಪಗೋಳ, ವಿನೋದ ಉಳ್ಳಾಗಡ್ಡಿ, ಪಂಡೀತ್ ಪೂಜೇರಿ, ಪಂಡೀತ್ ಖೋತ, ಮಲ್ಲಪ್ಪ ಉರಬಿನವರ, ಮಲ್ಲಪ್ಪ ಹುದ್ದಾರ, ಚನ್ನಪ್ಪ ಶಿವಾಪೂರ, ಸಂಗಮೇಶ ನಾಡಗೌಡ, ಲಕ್ಷ್ಮಣ ಪಟ್ಟಣಶೆಟ್ಟಿ, ಮಹಾಂತೇಶ ಮೇಟಿ, ಬಸವಲಿಂಗಪ್ಪ ಯಡಹಳ್ಳಿ ಪಾಲ್ಗೊಂಡಿದ್ದರು.
ರಬಕವಿ-ಬನಹಟ್ಟಿ ಸಿಪಿಐ ಸಂಜೀವ ಬಳೇಗಾರ, ಪಿಎಸ್‌ಐಗಳಾದ ಕಿರಣ ಸತ್ತಿಗೇರಿ, ಮಧು ಬೀಳಗಿ ಹಾಗೂ ಪೊಲೀಸ್ ಸಿಬ್ಬಂದಿ ಪ್ರತಿಭಟನೆ ವೇಳೆ ಸೂಕ್ತ ಬಂದೋಬಸ್ತ್ ಮಾಡಿದ್ದರು.