ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ನಾಯಕ

ಹಿರೇಕೆರೂರ: ಬಿಜೆಪಿ ತಾಲೂಕು ಘಟಕದ ವತಿಯಿಂದ ಮಾಜಿ ಶಾಸಕ ಯು.ಬಿ. ಬಣಕಾರ ನೇತೃತ್ವದಲ್ಲಿ ಭಾನುವಾರ ಅವರ ನಿವಾಸದಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕ ದಿ. ಶ್ಯಾಮಪ್ರಕಾಶ ಮುಖರ್ಜಿ ಅವರ ಬಲಿದಾನ ದಿನ ಆಚರಿಸಲಾಯಿತು.

ಮಾಜಿ ಶಾಸಕ ಯು.ಬಿ. ಬಣಕಾರ ಮಾತನಾಡಿ, ‘ಭಾರತೀಯ ಜನಸಂಘದ ಸಂಸ್ಥಾಪಕರಾದ ದಿ. ಶ್ಯಾಮಪ್ರಕಾಶ ಮುಖರ್ಜಿ ಅವರು ದೇಶದ ಮೊದಲ ಮಹಾಚುನಾವಣೆಯಲ್ಲಿ ಸಂಘದಿಂದ ಗೆದ್ದ ಮೊದಲ ಸಂಸದರಾಗಿ, ನೆಹರು ಸಂಪುಟದಲ್ಲಿ ಮಂತ್ರಿಯಾಗಿದ್ದರು. ಅವರು ಆರ್ಟಿಕಲ್ಸ್ 370 ಸವಲತ್ತುಗಳನ್ನು ಕಾಶ್ಮೀರಕ್ಕೆ ಕೊಡಮಾಡುವ ವಿರುದ್ಧ ದಂಗೆ ಎದ್ದು, ಪ್ರತಿಭಟಿಸಿ ಮಂತ್ರಿಗಿರಿಗೆ ರಾಜೀನಾಮೆ ನೀಡಿದರು. ಕಾಶ್ಮೀರಕ್ಕೆ ಹೋಗಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಮಾದರಿ ನಾಯಕ ಎನಿಸಿಕೊಂಡರು. ಕಾಂಗ್ರೆಸ್ ಪಕ್ಷದ ಕುಂತತ್ರ ರಾಜಕಾರಣದ ವಿರುದ್ಧ ಹೋರಾಡಲು ತಮ್ಮ ಜೀವವನ್ನೇ ತೆತ್ತು ಹುತಾತ್ಮರಾದ ಅವರ ಆದರ್ಶವನ್ನು ನಾವೆಲ್ಲ ಅಳವಡಿಕೊಳ್ಳುವುದು ಅತ್ಯವಶ್ಯ ಎಂದು ಹೇಳಿದರು.

ಪ.ಪಂ. ಸದಸ್ಯರಾದ ಕಂಠಾಧರ ಅಂಗಡಿ, ರಮೇಶ ಕೋಡಿಹಳ್ಳಿ, ಶಶಿಕಲಾ ಕೋರಿಗೌಡ್ರ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಸ್.ಆರ್. ಅಂಗಡಿ, ಕಾರ್ಯದರ್ಶಿ ಷಣ್ಮುಖಯ್ಯ ಮಳಿಮಠ, ನಿಂಗಪ್ಪ ಚಳಗೇರಿ, ಶಿವಕುಮಾರ ತಿಪ್ಪಶೆಟ್ಟಿ, ಎಸ್.ಬಿ. ಪಾಟೀಲ, ಅರುಣ ಹಮ್ಮಿಗಿ, ಈರಣ್ಣ ಚಿಟ್ಟೂರು, ಸತೀಶ ಕೋರಿಗೌಡ್ರ, ಪ್ರಭು ಮಳವಳ್ಳಿ, ರವಿ ಸಿದ್ಧಪ್ಪಗೌಡ್ರ, ಸಿದ್ದು ನರೇಗೌಡ್ರ, ರವಿ ಚಿಂದಿ, ಇತರರು ಇದ್ದರು.

Leave a Reply

Your email address will not be published. Required fields are marked *