ಶೋಭಾ ಕರಂದ್ಲಾಜೆ ಸ್ಪರ್ಧೆಗೆ ಕೋರ್ ಕಮಿಟಿಯಲ್ಲೂ ವಿರೋಧ

ಚಿಕ್ಕಮಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸ್ವಪಕ್ಷೀಯರಿಂದಲೇ ಸಾಮಾಜಿಕ ಜಾಲತಾಣದಲ್ಲಿ ‘ಗೋ ಬ್ಯಾಕ್ ಶೋಭಾ’ ಅಭಿಯಾನ ಎದುರಿಸುತ್ತಿರುವ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ‘ಡೋಂಟ್ ಕಂಟೆಸ್ಟ್ ಶೋಭಾ’ ಎಂದು ಹೇಳಿದೆ.

ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಶೋಭಾ ಕರಂದ್ಲಾಜೆ ನಂತರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದರು. ಕೋರ್ ಕಮಿಟಿಯ ಪ್ರಮುಖ ಸದಸ್ಯರೇ ಶೋಭಾ ಸ್ಪರ್ಧೆಗೆ ನೇರವಾಗಿ ವಿರೋಧ ವ್ಯಕ್ತಪಡಿಸಿ ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ.

ನಿಮ್ಮ ಯಾವ ಸಾಧನೆ ಹೇಳಿಕೊಂಡು ನಿಮ್ಮ ಪರವಾಗಿ ಮತ ಕೇಳಬೇಕು? ನಿಮ್ಮ ಸಾಮರ್ಥ್ಯ ಏನೆಂದು ಜನರಿಗೆ ಹೇಗೆ ಹೇಳಿಕೊಳ್ಳಬೇಕು. ಲೋಕಸಭೆಗೆ ಈ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದರಿಂದ ಬೇರೆ ಮುಖಂಡರು ಸ್ಪರ್ಧೆಗೆ ತಯಾರಿ ಮಾಡಿಕೊಳ್ಳುತ್ತಿದ್ದರು. ಈಗ ನೀವು ಬಂದು ಗೊಂದಲ ಉಂಟಾಗಲು ಕಾರಣರಾಗಿದ್ದೀರಿ ಎಂದು ಹೇಳಿದಾಗ ಶೋಭಾಗೆ ಈ ಬಗ್ಗೆ ಉತ್ತರಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಕೇಂದ್ರೀಯ ವಿದ್ಯಾಲಯ, ರಸ್ತೆಗಳಿಗೆ ಅನುದಾನ ತಂದಿರುವುದರ ಹೊರತಾಗಿ ಶಾಶ್ವತ ಯೋಜನೆಗಳನ್ನು ತರುವ ಪ್ರಯತ್ನ ಮಾಡಿಲ್ಲ. ಪಕ್ಷದ ಸಂಘಟನೆ ವಿಚಾರದಲ್ಲೂ ಗಂಭೀರ ಪ್ರಯತ್ನ ನಡೆಸಿಲ್ಲ. ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಬಂದರೂ ಕಾರ್ಯಕರ್ತರನ್ನು ಭೇಟಿ ಮಾಡುತ್ತಿರಲಿಲ್ಲ. ಪ್ರವಾಸ ಕಾರ್ಯಕ್ರಮದ ಬಗ್ಗೆ ಮೊದಲೇ ಮುಖಂಡರಿಗೆ ಮಾಹಿತಿ ನೀಡುತ್ತಿರಲಿಲ್ಲ ಎಂದು ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

One Reply to “ಶೋಭಾ ಕರಂದ್ಲಾಜೆ ಸ್ಪರ್ಧೆಗೆ ಕೋರ್ ಕಮಿಟಿಯಲ್ಲೂ ವಿರೋಧ”

  1. ಒಂದು ಅವಕಾಶಕ್ಕೆ ನಿಮ್ಮ ಸಹವಾಸ ಸಾಕಾಗಿದೆ, ನಿಮ್ಮಿಂದ ಮೋದಿ ಹಿನ್ನಡೆ ಆಗುವ ಮೊದಲು ಅರ್ಥ ಮಾಡಿಕೊಂಡು, ಬೇರೆ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ ರಾಜ್ಯ ರಾಜಕೀಯದತ್ತ ಗಮನ ಹರಿಸಿದರೆ ನಿಮ್ಮ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದು,

Leave a Reply

Your email address will not be published. Required fields are marked *