ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಭವಾನಿ ರೇವಣ್ಣ ಭೇಟಿ

ತುಬಚಿ: ಸಮೀಪದ ಶೂರ್ಪಾಲಿ ಗ್ರಾಮದ ಲಕ್ಷಿ್ಮೕ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿದ ಭವಾನಿ ರೇವಣ್ಣ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಲಕ್ಷಿ್ಮೕ ನರಸಿಂಹ ದೇವಸ್ಥಾನವನ್ನು ಆಲಮಟ್ಟಿ ಹಿನ್ನೀರಿನಿಂದ ಕೂಡಲಸಂಗಮ ಮಾದರಿ ಯಲ್ಲಿ ಸಂರಕ್ಷಿಸಿರು ವುದು ಶ್ಲಾಘನೀಯ ಎಂದರು. ಗ್ರಾಮಸ್ಥರ ಸಮಸ್ಯೆ ಆಲಿಸಿದ ಅವರು, ರಸ್ತೆ ಡಾಂಬರೀಕರಣ ಮಾಡಿ ದೇವಸ್ಥಾನ ಅಭಿವೃದ್ಧಿ ಪಡಿಸಲು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು. ಪಿಡಬ್ಲ್ಯೂಡಿ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಿ, ರಸ್ತೆ ಕಾಮಗಾರಿಗಳ ಯೋಜನಾ ವರದಿ ಸಿದ್ಧಪಡಿಸುವಂತೆ ಹೇಳಿದರು. ಕಮಲಾ ನಿರಾಣಿ, ಗುರುರಾಜ ಕುಲಕರ್ಣಿ,ಅಪ್ಪು ಮೋಕಾಶಿ, ಶೇಖರ ಪಾಟೀಲ, ನರಸಿಂಹ ಪಾಟೀಲ, ಗುರಪ್ಪ ಕಣಬೂರ, ಗಿರಮಲ್ಲ ಜಮಖಂಡಿ, ಗುರನಿಂಗ ಕುಂಚನೂರ, ರಮೇಶ ಪಾಟೀಲ, ಜಾನವಿ ಮೋಕಾಶಿ ಇದ್ದರು.