ಎತ್ತುಗಳ ಖರೀದಿಯತ್ತ ರೈತರ ಚಿತ್ತ

blank

ಲಕ್ಷೆ್ಮೕಶ್ವರ: ರೈತ ಸಮುದಾಯ ಹೊಸ ಭರವಸೆಯೊಂದಿಗೆ ಮುಂಗಾರು ಬಿತ್ತನೆಗೆ ಸಜ್ಜಾಗಿದೆ. ಬೀಜ, ಗೊಬ್ಬರ, ಕೃಷಿ ಪರಿಕರಗಳ ಸಿದ್ಧತೆಯ ಜತೆಗೆ ತಮ್ಮ ಜೀವನಾಡಿ ಎತ್ತುಗಳ ಖರೀದಿಯತ್ತಲೂ ಚಿತ್ತ ಹರಿಸಿದ್ದಾರೆ. ಹೀಗಾಗಿ ಎಲ್ಲೆಡೆ ಎತ್ತುಗಳ ಖರೀದಿ ಭರಾಟೆ ಜೋರಾಗಿದೆ. ಹೈನುಗಾರಿಕೆ ಮತ್ತು ವಾಣಿಜ್ಯ ಬೆಳೆಗಳತ್ತ ರೈತರು ಚಿತ್ತ ನೆಟ್ಟಿದ್ದರಿಂದ ತಮ್ಮ ಜೀವನಾಡಿಗಳನ್ನು ಕೃಷಿ ಕಾರ್ಯ ಮುಗಿದ ಕೂಡಲೇ ಮಾರಾಟ ಮಾಡುವ ಸಂಪ್ರದಾಯ ಸೃಷ್ಟಿಯಾಗಿದೆ. ಬೇಸಿಗೆಯಲ್ಲಿ ಟ್ರ್ಯಾಕ್ಟರ್ ಮೂಲಕ ರಂಟೆ, ಕುಂಟಿ ಹೊಡೆಸಿ ಬಿತ್ತನೆಗೆ ಭೂಮಿ ಸಿದ್ಧಪಡಿಸಿಕೊಂಡರೂ ಬಿತ್ತುವ ಮತ್ತು ಎಡೆ ಹೊಡೆಯುವ ಕೆಲಸಕ್ಕಾಗಿ ರೈತರು ಎತ್ತುಗಳ ಖರೀದಿಗೆ ಮುಂದಾಗುತ್ತಾರೆ. ಮುಂಗಾರು ಆರಂಭವಾದರೆ ಜೋಡೆತ್ತು ಗಳಿಗೆ ಈಗ ಭಾರಿ ಡಿಮ್ಯಾಂಡ್ ಬಂದಿದೆ. ಜಾನುವಾರು ಸಂತೆಯಲ್ಲಿ ಎತ್ತುಗಳ ಬೆಲೆ ಗಗನಕ್ಕೇರಿರುವುದೂ ಇದನ್ನೇ ಸಾರುತ್ತಿದೆ.
ಹೈನುಗಾರಿಕೆಯಿಂದ ಎತ್ತುಗಳ ಕೊರತೆ: ಮುಂಗಾರಿನಲ್ಲಿ ಹೆಸರು, ಉಳ್ಳಾಗಡ್ಡಿ, ಶೇಂಗಾವನ್ನು ಎತ್ತುಗಳ ಮೂಲಕವೇ ಬಿತ್ತುವುದರಿಂದ ಉತ್ತಮ ಬೆಳೆ ಬರುತ್ತದೆಂಬ ದೃಢ ನಂಬಿಕೆ ಮತ್ತು ಎಡೆಹೊಡೆಯಲು ಎತ್ತುಗಳು ಬೇಕೆ ಬೇಕು. ಕಪ್ಪು ಮಣ್ಣಿನ ಜಮೀನುಗಳಲ್ಲಿ ತೇವಾಂಶ ಹೆಚ್ಚಾದರೆ ಟ್ರ್ಯಾಕ್ಟರ್ ಮೂಲಕ ಸಕಾಲಿಕ ಬಿತ್ತನೆ ಮಾಡಲಾಗುವುದಿಲ್ಲ. ಬಾಡಿಗೆ ಎತ್ತುಗಳಿಗೆ ದಿನಕ್ಕೆ 2000 ರೂ.ದಿಂದ 2500 ರೂ. ಕೊಡಬೇಕಾಗುತ್ತದೆ. ಈ ಕಾರಣ ಮುಂಗಾರು- ಹಿಂಗಾರು ಹಂಗಾಮಿಗೆ ಕಾರ ಹುಣ್ಣಿಮೆ ಹಬ್ಬದೊಳಗೆ ಎತ್ತುಗಳನ್ನು ಖರೀದಿ ಸುವ ನಿರ್ಧಾರಕ್ಕೆ ರೈತರು ಬಂದಿದ್ದಾರೆ. ಕೃಷಿ ಚಟುವಟಿಕೆ ಮುಗಿದ ಕೂಡಲೇ ಎತ್ತುಗಳನ್ನು ಮಾರಾಟ ಮಾಡಿ ಮತ್ತೇ ಮುಂಗಾರು ಪೂರ್ವದಲ್ಲಿ ಖರೀದಿಸುವ ಸಂಪ್ರದಾಯ ಬೆಳೆಸಿಕೊಂಡಿರುವುದು ಅಲ್ಲದೇ ಹೈನುಗಾರಿಕೆ ಉದ್ದೇಶಕ್ಕಾಗಿ ಎಚ್.ಎಫ್, ಜರ್ಸಿ ಹಸುಗಳ ಸಾಕಾಣಿಕೆಯಿಂದ ಜವಾರಿ, ಕಿಲಾರಿ, ಸೀಮೆ ಎತ್ತುಗಳು ಸಿಗದಂತಾಗಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಪಳಗಿದ ಎತ್ತುಗಳಿಗೆ ಬೇಡಿಕೆ: ಖರೀದಿಗೂ ಮುನ್ನ ಅವುಗಳ ಸಾಮರ್ಥ್ಯ, ವಯಸ್ಸು, ಕಾಲು, ಸುಳಿ, ಹಲ್ಲುಗಳನ್ನು ಪರೀಕ್ಷಿಸುವುದು ಸಾಮಾನ್ಯ. ಇವುಗಳ ಆಧಾರದ ಮೇಲೆಯೇ ಬೆಲೆ ನಿಗದಿಯಾಗುತ್ತದೆ. ತಿಂಗಳ ಹಿಂದಷ್ಟೇ 60 ಸಾವಿರ ರೂ.ದಿಂದ 80 ಸಾವಿರ ರೂ.ವರೆಗೆ ಮಾರಾಟವಾಗುತ್ತಿದ್ದ ಎತ್ತುಗಳ ಬೇಲೆ ಈಗ 80 ಸಾವಿರದಿಂದ 1.50 ಲಕ್ಷ ರೂ.ವರೆಗೂ ಎತ್ತುಗಳು ಮಾರಾಟವಾಗುತ್ತಿವೆ. ಅದರಲ್ಲೂ 2 ಹಲ್ಲಿನ ಎತ್ತುಗಳ ಬೆಲೆ ಲಕ್ಷ ರೂ. ದಾಟಿದೆ. 4 ಹಲ್ಲಿನ ಎತ್ತು, ಸವ ಹಲ್ಲಿನ ಎತ್ತುಗಳ ಬೆಲೆ 80 ಸಾವಿರರಿಂದ 1 ಲಕ್ಷ ರೂ., ತೀರಾ ಕಡಿಮೆ ಅಂದರೆ 70 ಸಾವಿರದೊಳಗೆ ಎತ್ತುಗಳು ಸಿಗುವುದೇ ಇಲ್ಲ. ಹೀಗಾಗಿ ರೈತರು 1 ಲಕ್ಷ ರೂ. ಮೀರದಂತೆ ಸಾಧಾರಣ ಎತ್ತುಗಳ ಖರೀದಿಗಾಗಿ ತಡಕಾಡುತ್ತಿದ್ದಾರೆ.

blank

ಕಳೆದ ಮೂರ್ನಾಲ್ಕು ವಾರ ದಿಂದ ಎಪಿಎಂಸಿ ಪ್ರಾಂಗಣ ದಲ್ಲಿ ಪ್ರತಿ ಶುಕ್ರವಾರ ನಡೆಯುವ ಜಾನುವಾರು ಸಂತೆಗೆ ನೂರಾರು ಸಂಖ್ಯೆಯಲ್ಲಿ ಎತ್ತುಗಳು ಮಾರಾಟಕ್ಕೆ ಬರುತ್ತಿವೆ. ಮಾರಾಟ ಮಾಡುವ ಮತ್ತು ಖರೀದಿಸುವ ರೈತರು ರಸೀದಿ ಪಡೆಯುವುದರಿಂದ ರೈತರಿಗೆ ಅನಕೂಲವಾಗುತ್ತದೆ.
ಶಿವಾನಂದ ಜಿ. ಮಠ, ಎಪಿಎಂಸಿ ಕಾರ್ಯದರ್ಶಿ

ಟ್ರ್ಯಾಕ್ಟರ್ ಇದ್ದರೂ ಉಳ್ಳಾಗಡ್ಡಿ, ಮೆಣಸಿನಬೀಜ ಬಿತ್ತಲು ಮತ್ತು ಎಲ್ಲ ಬೆಳೆಗಳ ಎಡೆಹೊಡೆಯಲು ಎತ್ತುಗಳು ಬೇಕು. ಹೊಟ್ಟು-ಸೊಪ್ಪಿ, ಆಳಿನ ಸಮಸ್ಯೆಯಿಂದ ಇದ್ದ ಎತ್ತುಗಳನ್ನು ಕಡಿಮೆ ಬೆಲೆಗೆ ದೊಡ್ಡ ಎತ್ತುಗಳನ್ನು ಮಾರಾಟ ಮಾಡುತ್ತಾರೆ. ಈಗ ಸೊಣಕಲು, ಪಳಗಿಲ್ಲದ ಎತ್ತುಗಳಿಗೂ ಲಕ್ಷ ರೂ ಮೇಲ್ಪಟ್ಟು ದರವಿದೆ. ಈ ಪರಿಸ್ಥಿತಿಗೆ ನಾವು ರೈತರು ಯಾರನ್ನೂ ದೋಷಿಸುವಂತಿಲ್ಲ.
ಚನ್ನಪ್ಪ ಷಣ್ಮುಕಿ
ಲಕ್ಷೆ್ಮೕಶ್ವರ ರೈತ

Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank