More

    ಭ್ರಷ್ಟಚಾರ ಬಯಲಿಗೆಳೆಯುವ ಶಕ್ತಿ ವಕೀಲರಿಗಿದೆ

    ಚಿಕ್ಕಮಗಳೂರು: ವಕೀಲರ ವೃತ್ತಿ ಅತ್ಯಂತ ಪವಿತ್ರವಾದುದು. ಕಕ್ಷಿಗಾರರ ಬದುಕು ಅನ್ಯಾಯಕ್ಕೆ ಒಳಗಾದ ವೇಳೆಯಲ್ಲಿ ಸೂಕ್ತವಾಗಿ ವಾದ ಮಂಡಿಸಿ ನ್ಯಾಯ ಒದಗಿಸುವ ಮೂಲಕ ವಕೀಲರು ಸಮಾಜಕ್ಕೆ ಮಾದರಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಹೇಳಿದರು.

    ನಗರದ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರ ಸಂಘದಿAದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಎರಡನೇ ಬಾರಿಗೆ ಆಯ್ಕೆಗೊಂಡ ನೈಋತ್ಯ ಶಿಕ್ಷಕರ ಕ್ಷೇತ್ರದ ಸದಸ್ಯ ಎಸ್.ಎಲ್.ಬೋಜೇಗೌಡ ಅಭಿನಂದನೆ ಸ್ವೀಕರಿಸಿ ಮಾತನಾಡಿ, ವಕೀಲರ ಸಂಘ ಹಾಗೂ ತಮಗೂ ಅವಿಭಾವ ಸಂಬAಧವಿದೆ. ಇಂದು ರಾಜಕಾರಣ ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಲು ಮೂಲ ಕರ್ತೃವೇ ವಕೀಲರ ಜೊತೆಗಿನ ಒಡನಾಟ ಹಾಗೂ ಸಂಘದಲ್ಲಿ ಹಲವಾರು ವರ್ಷಗಳ ಕಾಲ ಸಲ್ಲಿಸಿದ ಸೇವೆ ಎಂದರು.
    ರಾಜಕಾರಣಿಗಳ ಹಾಗೂ ಸರ್ಕಾರದ ಭ್ರಷ್ಟಚಾರವನ್ನು ಬಯಲಿಗೆಳೆಯುವ ಶಕ್ತಿ ವಕೀಲರ ವೃತ್ತಿಗಿದೆ. ಸಮಾಜದಲ್ಲಿ ಭ್ರಷ್ಟಮುಕ್ತ ಹಾಗೂ ಸಾಮಾಜಿಕ ನ್ಯಾಯವನ್ನು ಸಮಪರ್ಕವಾಗಿ ನಿಭಾಯಿಸಿದರೆ ಉತ್ತಮ ವಕೀಲರಾಗಲು ಸಾಧ್ಯ. ಆಸೆ, ಆಮಿಷಗಳಿಗೆ ಒಳಗಾಗದೇ ನ್ಯಾಯಸಮ್ಮತ ವಾದಗಳನ್ನು ಮಂಡಿಸಲು ಮುಂದಾಗಬೇಕು ಎಂದರು.
    ವಕೀಲರಿಗೆ ಸಮಾಜದಲ್ಲಿ ಬಹಳಷ್ಟು ಬೆಲೆಯಿದೆ. ಕಪ್ಪು ಕೋಟ್ ಧರಿಸಿದರೆ ಘನತೆ, ಗೌರವ ಹೆಚ್ಚು ತ್ತದೆ. ಇಂದಿನ ಯುವ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ವಕೀಲ ವೃತ್ತಿಗೆ ಧಾವಿಸುತ್ತಿರುವುದು ಹೆಮ್ಮೆಯ ಸಂಗತಿ. ಅದೇ ರೀತಿ ಹಿರಿಯ ವಕೀಲರ ಸಲಹೆ, ಸಹಕಾರ ಹಾಗೂ ಮಾರ್ಗದರ್ಶನ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
    ಮನುಷ್ಯನ ನಾಲ್ಕು ದಿನದ ಬಾಳಿನಲ್ಲಿ ವಕೀಲರು ಒಟ್ಟಾಗಿ ಒಂದೇ ನೆಲೆಗಟ್ಟಿನಲ್ಲಿ ಕೆಲಸ ಮಾಡಿದರೆ ಸಂಬAಧಗಳು ಶಾಶ್ವತವಾಗಿ ಉಳಿಯಲು ಸಾಧ್ಯ. ಸಮಾಜದ ಮುಖ್ಯವಾಹಿನಿಯಲ್ಲಿ ಸ್ವಾಸ್ಥö್ಯ ಕಾಪಾಡಲು ವಕೀಲರು ಸದ್ಗುಣಗಳನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಎಂದು ತಿಳಿಸಿದರು.
    ವಕೀಲರು ಭಾವೈಕ್ಯತೆ ದೃಷ್ಟಿಯಲ್ಲಿ ನಾಡನ್ನು ಕಟ್ಟುವ ಕೆಲಸ ಮಾಡಬೇಕು. ಮುಂದಿನ ಪೀಳಿಗೆಗೆ ವಕೀಲ ವೃತ್ತಿಗೆ ಆಗಮಿಸುವ ಯುವಜನಾಂಗ ಹೆಮ್ಮೆಪಡಬೇಕು. ಸಣ್ಣಪುಟ್ಟ ಸಮಸ್ಯೆಗಳು ವೃತ್ತಿಯಲ್ಲಿ ಎದುರಾಗುವ ಸಾಧ್ಯತೆಯಿರುವ ಕಾರಣ ದೃತಿಗೆಡಬಾರದು. ವಕೀಲರ ಸಂಘದ ಬೆಳವಣಿಗೆ ನಿಟ್ಟಿನಲ್ಲಿ ೫ ಲಕ್ಷ ರೂ. ದೇಣಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.
    ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ವಕೀಲರ ಶ್ರೇಯೋಭಿವೃದ್ಧಿಗೆ ಬೋಜೇಗೌಡರ ಕೊಡುಗೆ ಅಪಾರವಿದೆ. ಬೇಡಿಕೆಗಳನ್ನು ಈಡೇರಿಸುವ ಸಜ್ಜನ ವ್ಯಕ್ತಿತ್ವವಿದೆ. ಅಲ್ಲದೇ ಸಂಕಷ್ಟದ ಸಮಯದಲ್ಲೂ ಬೆನ್ನುಲುಬಾಗಿ ಜೊತೆಗಿದ್ದು ಸೂಕ್ತ ಮಾರ್ಗದರ್ಶ ನೀಡುತ್ತಾ ನೆರವಾಗಿದ್ದಾರೆ ಎಂದು ತಿಳಿಸಿದರು.
    ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಎಸ್.ಶರತ್‌ಚಂದ್ರ, ಕಾರ್ಯದರ್ಶಿ ಆರ್.ಅನಿಲ್‌ಕುಮಾರ್, ಖಜಾಂಚಿ ದೀಪಕ್, ಸಹ ಕಾರ್ಯದರ್ಶಿ ಎನ್.ವಿ.ಪ್ರಿಯದರ್ಶಿನಿ ಮತ್ತಿತರರಿದ್ದರು.

    See also  ಅಟಲ್‌ಜೀಗೆ ರಂಭಾಪುರಿ ಶ್ರೀ ನೆತ್ತರ ಪತ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts