ಲೋಕಸಭಾ ಚುನಾವಣೆ ರದ್ದುಗೊಳಿಸಿ ಮತ್ತೆ ಚುನಾವಣೆಗಾಗಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ವಕೀಲನ ವಾದವೇನು?

ನವದೆಹಲಿ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯನ್ನು ರದ್ದುಗೊಳಿಸಿ, ಬ್ಯಾಲೆಟ್​ ಪೇಪರ್​ ಮೂಲಕ ಮತ್ತೊಮ್ಮೆ ಚುನಾವಣೆಯನ್ನು ನಡೆಸುವಂತೆ ಒತ್ತಾಯಿಸಿ ಹೊಸದಾದ ಅರ್ಜಿಯೊಂದು ಗುರುವಾರ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ.

ವಕೀಲ ಎಂ.ಎಲ್​ ಶರ್ಮಾ ಎಂಬುವವರು ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದು, ತಕ್ಷಣವೇ ವಿಚಾರಣೆಯನ್ನು ಕೈಗೆತ್ತಿಕೊಂಡು ಬ್ಯಾಲೆಟ್​ ಪೇಪರ್​ ಮೂಲಕ ಹೊಸದಾಗಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದ್ದಾರೆ.

ಜನ ಪ್ರತಿನಿಧಿ (Representation Of Peoples) ಕಾಯಿದೆಯಂತೆ ಚುನಾವಣೆಗಳು ಬ್ಯಾಲೆಟ್​ ಪೇಪರ್​ ಮೂಲಕವೇ ನಡೆಯಬೇಕೆಂದು ತನ್ನ ಹಕ್ಕು ಮಂಡಿಸಿರುವ ವಕೀಲ ಎಂ.ಎಲ್​.ಶರ್ಮಾ, ಇತ್ತೀಚೆಗೆ ನಡೆದ ಚುನಾವಣೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಆದರೆ, ಕೋರ್ಟ್​ ಈ ಅರ್ಜಿಯನ್ನು ಯಾವ ರೀತಿ ಪರಿಗಣಿಸಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದ್ದು, ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. (ಏಜೆನ್ಸೀಸ್​)

One Reply to “ಲೋಕಸಭಾ ಚುನಾವಣೆ ರದ್ದುಗೊಳಿಸಿ ಮತ್ತೆ ಚುನಾವಣೆಗಾಗಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ವಕೀಲನ ವಾದವೇನು?”

  1. Eegiro vehicle yalla bittu kudure gadinalli hogu.phone computer bittu tale gari use madu amele ballet paperge arji haku

Leave a Reply

Your email address will not be published. Required fields are marked *