ಹಲ್ಲೆ ಖಂಡಿಸಿ ನ್ಯಾಯಾಲಯ ಕಲಾಪ ಬಹಿಷ್ಕಾರ

ಮೊಳಕಾಲ್ಮೂರು: ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಸದಸ್ಯರೊಬ್ಬರ ಮೇಲೆ ಈಚೆಗೆ ನಡೆದ ಹಲ್ಲೆ ಖಂಡಿಸಿ ಸ್ಥಳೀಯ ವಕೀಲರು ಕಲಾಪ ಬಹಿಷ್ಕರಿಸಿ ತಹಸೀಲ್ದಾರ್‌ಗೆ ಸಲ್ಲಿಸಿದರು.

ವಕೀಲರ ಮೇಲೆ ಪದೇ ಪದೆ ಹಲ್ಲೆ ನಡೆಯುತ್ತಿವೆ. ಈ ಮೂಲಕ ವಕೀಲಿ ವೃತ್ತಿಗೆ ಧಕ್ಕೆ ತರುವ ಪ್ರವೃತ್ತಿ ನಿಲ್ಲಬೇಕು. ಹಲ್ಲೆ ನಡೆಸಿವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ವಕೀಲರಿಗೆ ರಕ್ಷಣೆ ಕಾಯ್ದೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ವಕೀಲರ ಸಂಘದ ಪ್ರಭಾರ ಅಧ್ಯಕ್ಷ ಪಿ. ಪಾಪಯ್ಯ, ಕಾರ್ಯದರ್ಶಿ ಮಂಜುನಾಥ, ಸಹ ಕಾರ್ಯದರ್ಶಿ ಕುಮಾರಪ್ಪ, ಖಜಾಂಜಿ ಜಿ.ವಿ. ಚಾಣುಕ್ಯ, ಪಿ.ಜಿ. ವಸಂತಕುಮಾರ್, ಆನಂದ್, ಶಮಿಉಲ್ಲಾ, ರಾಜಶೇಖರ ನಾಯಕ, ಬಾಬು, ಸುರೇಶ್, ರಾಮಾಂಜನೇಯ ಮತ್ತಿತರರಿದ್ದರು.