ಪ್ರಕೃತಿ ವಿಕೋಪ ಸಂತ್ರಸ್ತ ಲಾರೆನ್ಸ್ ನಿಧನ

ಸುಂಟಿಕೊಪ್ಪ: ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ನೆರೆಹಾವಳಿಯಿಂದ ಸಂತ್ರಸ್ತರಾಗಿದ್ದ ವ್ಯಕ್ತಿಯೊಬ್ಬರು ನಿಧನರಾಗಿರುವ ಕುರಿತು ವರದಿಯಾಗಿದೆ. ಸುಂಟಿಕೊಪ್ಪ ಸಮೀಪದ ಹಾಲೇರಿಯ ನಿವಾಸಿ ಲಾರೆನ್ಸ್ (73) ಎಂಬುವವರೇ ಮೃತರಾದವರಾಗಿದ್ದಾರೆ.

ನೆರೆಹಾವಳಿಯ ಸಂದರ್ಭದಲ್ಲಿ ಇವರ ವಾಸದ ಮನೆ ಕಣ್ಣೆದುರೇ ಧರಶಾಹಿಯಾಗಿತ್ತು. ನಂತರ ಮಡಿಕೇರಿಯಲ್ಲಿ ನೆಲೆಸಿದ್ದರು. ಇದ್ದ ಸೂರು ನೋಡ ನೋಡುತ್ತಿದ್ದಂತೆಯೇ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಕಂಗಾಲಾಗಿದ್ದ ಲಾರೆನ್ಸ್ ಅವರು ತುಂಬಾ ಕುಗ್ಗಿಹೋಗಿದ್ದರು ಎನ್ನಲಾಗಿದೆ.

ಇದರಿಂದ ಅನಾರೋಗ್ಯಪೀಡಿತರಾಗಿದ್ದ ಇವರನ್ನು ಮೈಸೂರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು (ತಾ. 23) ಇಂದು ನಿಧನರಾದರು. ಅಂತ್ಯಕ್ರಿಯೆಯ ವಿಧಿಗಳು ಇಂದು (ತಾ. 23)ರಂದು ಅಪರಾಹ್ನ 4.30ಕ್ಕೆ ಮಡಿಕೇರಿ ಚರ್ಚ್ ನಲ್ಲಿ ನಡೆಯಲಿದೆ. ಮೃತರು ಐವರು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *