ಲಾ ಬಿಡುಗಡೆ ಪೋಸ್ಟ್​ಪೋನ್​ … ರಿಲೀಸ್​ ಯಾವಾಗ ಗೊತ್ತಾ?

blank

ಪುನೀತ್​ ರಾಜಕುಮಾರ್​ ನಿರ್ಮಾಣದ ಲಾ ಚಿತ್ರ ಜೂನ್​ 26ರಂದು ಅಮೇಜಾನ್​ ಪ್ರೈಮ್​ನಲ್ಲಿ ಪ್ರೀಮಿಯರ್​ ಆಗಲಿದೆ ಎಂಬ ಸುದ್ದಿಯೊಂದು ಕಳೆದ ತಿಂಗಳು ಕೇಳಿ ಬಂದಿತ್ತು. ಆದರೆ, ಚಿತ್ರ ಸ್ಟ್ರೀಮ್​ ಆಗುವುದಕ್ಕೆ ಒಂದು ದಿನ ಇರುವಾಗಲೇ, ಚಿತ್ರ ನಿಜಕ್ಕೂ ಬಿಡುಗಡೆಯಾಗುತ್ತಿದೆಯೋ ಇಲ್ಲವೋ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಏಕೆಂದರೆ, ಚಿತ್ರತಂಡದವರಾಗಲೀ ಅಥವಾ ಅಮೇಜಾನ್​ ಪ್ರೈಮ್​ನವರಾಗಲೀ ಚಿತ್ರದ ಪ್ರಚಾರದಿಂದ ದೂರ ಉಳಿದಿದ್ದರು. ಹಾಗಾಗಿ ಚಿತ್ರ ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ಗೊಂದಲ ಇತ್ತು.

ಇದನ್ನೂ ಓದಿ: 50ನೇ ವರ್ಷದಲ್ಲಿ ಕಂಗನಾ ಏನಾಗಿರಬೇಕಂತೆ?

ಈಗ ಕೊನೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಕುರಿತು ಅಮೇಜಾನ್​ ಪ್ರೈಮ್​ನವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದೆ.

ಚಿತ್ರದ ಬಿಡುಗಡೆಯೇನೋ ಮುಂದಕ್ಕೆ ಹೋಗಿದೆ. ಆದರೆ, ಚಿತ್ರ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೂ, ಅಮೇಜಾನ್​ ಪ್ರೈಮ್​ ಉತ್ತರಿಸಿದೆ. ಚಿತ್ರವನ್ನು ಜುಲೈ 17ರಂದು ವರ್ಲ್ಡ್​ ಪ್ರೀಮಿಯರ್​ ಮಾಡಲು ಉದ್ದೇಶಿಸಿದ್ದು, ಅಂದಿನಿಂದ ಸ್ಟ್ರೀಮ್​ ಆಗಲಿದೆ.

ಇದನ್ನೂ ಓದಿ: ಚೀನಾ ಆಪ್​ ವಿರುದ್ಧ ತಾರೆಯರ ಸಮರ; ಸ್ವದೇಶಿ ಪ್ರೇಮ

ಪ್ರಜ್ವಲ್​ ಪತ್ನಿ ರಾಗಿಣಿ ಚಂದ್ರನ್​ ಅಭಿನಯದ ಮೊದಲ ಚಿತ್ರ ಲಾ. ಹೆಸರೇ ಹೇಳುವಂತೆ ಇದೊಂದು ಕೋರ್ಟ್​ರೂಂ ಡ್ರಾಮಾ ಆಗಿದ್ದು, ರಾಗಿಣಿ ಜತೆಗೆ ಅಚ್ಯುತ್​ ಕುಮಾರ್​, ಸುಧಾರಾಣಿ, ಅವಿನಾಶ್​, ರಾಜೇಶ್​ ನಟರಂಗ, ಮಂಡ್ಯ ರಮೇಶ್​ ಮುಂತಾದವರು ನಟಿಸಿದ್ದಾರೆ. ಇನ್ನು ಪಿಆರ್​ಕೆ ಪ್ರೊಡಕ್ಷನ್ಸ್​ನಡಿ ಈ ಚಿತ್ರವನ್ನು ಅಶ್ವಿನಿ ಪುನೀತ್​ ರಾಜಕುಮಾರ್​ ಮತ್ತು ಎಂ. ಗೋವಿಂದ ನಿರ್ಮಿಸಿದ್ದು, ರಘು ಸಮರ್ಥ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಚಿರು ನೆನಪು ಮತ್ತಷ್ಟು ಗಟ್ಟಿಗೊಳ್ಳಲು ಮೇಘನಾ ಮಾಡಿದ ಬದಲಾವಣೆ ಮನಕಲಕುವಂತಿದೆ

Share This Article

ಒಣದ್ರಾಕ್ಷಿಯಿಂದಾಗುವ ಆರೋಗ್ಯ ಪ್ರಯೋಜನ ಗೊತ್ತಿದೆ; ಮನೆಯಲ್ಲೇ Dry Grapes ತಯಾರಿಸುವ ವಿಧಾನ ಇಲ್ಲಿದೆ | Recipe

ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಒಣದ್ರಾಕ್ಷಿಯಲ್ಲಿ ಯಾವುದೇ ಕಲಬೆರಕೆ ಇಲ್ಲಿದಿದ್ದಾಗ ಮಾತ್ರ ಈ ಪ್ರಯೋಜನ…

ಬಹಳ ಇಷ್ಟಪಟ್ಟು ಪನೀರ್​ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips

ನಾನ್​ವೆಜ್​​​​​​ ಇಷ್ಟಪಡದವರು ಪ್ರೋಟೀನ್​ಗಾಗಿ ಪನೀರ್​​​​ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…

ಅಂಗಾಲಿನಲ್ಲಿ ಪದೇ ಪದೆ ನೋವು ಕಾಣಿಸಿಕೊಳ್ಳುತ್ತಿದೆಯೇ; ಅಪಾಯ ತಪ್ಪಿದ್ದಲ್ಲ ಎಚ್ಚರದಿಂದಿರಿ | Health Tips

ಅನೇಕ ಜನರು ಪಾದದ ಕೆಳಭಾಗದಲ್ಲಿ ಅಂದರೆ ಅಂಗಾಲಿನಲ್ಲಿ ನೋವನ್ನು ಅನುಭವಿಸುತ್ತಿರುತ್ತಾರೆ. ಈ ನೋವು ಸಾಮಾನ್ಯ ನೋವಿನಂತೆ…