21 C
Bengaluru
Thursday, January 23, 2020

ಹಕ್ಕುಪತ್ರ ನೋಂದಣಿ ಆಗದಿದ್ದರೆ ತೊಂದರೆಯೆ?

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

  • ನಮ್ಮ ಅಜ್ಜಿಗೆ ಅವರ ತಂದೆಯಿಂದ ಜಮೀನು ಬಂದಿತ್ತು. ನಮ್ಮ ಅಜ್ಜಿ 2010ರಲ್ಲಿ ತೀರಿಕೊಂಡರು. ಅವರಿಗೆ ನಮ್ಮ ತಾಯಿ ಒಬ್ಬಳೇ ಹೆಣ್ಣು ಮಗಳು ಮತ್ತು ಇಬ್ಬರು ಗಂಡು ಮಕ್ಕಳು. ನಂತರ ನಮ್ಮ ತಾಯಿಯ ಅಣ್ಣಂದಿರು ಆ ಜಮೀನನ್ನು ನಮ್ಮ ತಾಯಿಯ ಹೆಸರಿಗೇ ಖಾತೆ ಮಾಡಿಸಿದ್ದಾರೆ. ಇದಕ್ಕೆ ಒಂದು ಸಾವಿರ ರೂಗಳ ಮುದ್ರಾಂಕದ ಹಕ್ಕು ಬಿಟ್ಟ ಪತ್ರ ಮಾಡಿಕೊಟ್ಟಿದ್ದಾರೆ. ಆದರೆ ಈ ಹಕ್ಕು ಬಿಟ್ಟ ಪತ್ರ ನೋಂದಣಿ ಆಗಿಲ್ಲ. ಇದರಿಂದ ಮುಂದೆ ಆಸ್ತಿ ಪರಭಾರೆ ಮಾಡಲು ಬ್ಯಾಂಕಿನಲ್ಲಿ ಸಾಲ ಇತ್ಯಾದಿ ಮಾಡಲು ತೊಂದರೆ ಇದೆಯೇ? ಇದಕ್ಕೆ ಇರುವ ಸೂಕ್ತ ಮಾರ್ಗವೇನು?

| ಹೆಸರು ಊರು ಬೇಡ

ನೂರು ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಸ್ಥಿರಾಸ್ತಿಯಲ್ಲಿ ಹಕ್ಕು ಬಿಡುಗಡೆ ಮಾಡುವುದಾದರೆ, ಅದಕ್ಕೆ ಸಂಬಂಧಿಸಿದ ಪತ್ರ ನೋಂದಣಿಯಾಗಲೇಬೇಕು. ಇಲ್ಲವಾದಲ್ಲಿ ಆ ಪತ್ರ ಸಿಂಧುವಾಗುವುದಿಲ್ಲ. ನಿಮ್ಮ ಸೋದರ ಮಾವಂದಿರ ತಲಾ ಮೂರನೇ ಒಂದು ಭಾಗದ ಹಕ್ಕು ಹಾಗೇ ಉಳಿದಿರುತ್ತದೆ. ಅವರಾಗಲೀ, ಅವರ ಮಕ್ಕಳಾಗಲೀ ಯಾವಾಗಲಾದರೂ ತಮ್ಮ ಹಕ್ಕನ್ನು ಕೇಳಬಹುದು. ಮೇಲಾಗಿ ನಿಮ್ಮ ತಾಯಿಗೇ ಸಂಪೂರ್ಣ ಹಕ್ಕು ಬಂದಿರುವುದಿಲ್ಲ. ಹೀಗಾಗಿ ಕೂಡಲೇ ನಿಮ್ಮ ತಾಯಿ ಅವರ ಅಣ್ಣಂದಿರನ್ನು ಕರೆಯಿಸಿ ನೋಂದಾಯಿತ ಹಕ್ಕು ಬಿಡುಗಡೆ ಪತ್ರ ಮಾಡಿಸಿಕೊಳ್ಳುವುದು ಒಳ್ಳೆಯದು. ಖಾತೆ ಪಹಣಿ ನಿಮ್ಮ ತಾಯಿಯ ಹೆಸರಿನಲ್ಲಿ ಆಗಿರುವ ಮಾತ್ರಕ್ಕೆ ನಿಮ್ಮ ತಾಯಿಯೇ ಸಂಪೂರ್ಣ ಆಸ್ತಿಯ ಮಾಲೀಕಳು ಆಗುವುದಿಲ್ಲ.

  • ನಮ್ಮ ತಂದೆಯ ದೊಡ್ಡಪ್ಪ ಅವಿವಾಹಿತರು. ಅವರ ಹೆಸರಿನಲ್ಲಿ 23 ಗುಂಟೆ ಜಮೀನು ಇತ್ತು. ಅದರಲ್ಲಿ ಹನ್ನೆರಡು ಗುಂಟೆ ಜಮೀನನ್ನು 1969ರಲ್ಲಿಯೇ ಮುನ್ನೂರ ಐವತ್ತು ರೂಪಾಯಿಗಳಿಗೆ ತಮಗೆ ಕ್ರಯ ಮಾಡಿದ್ದಾರೆಂದು ಹೇಳಿ ಬೇರೆಯವರು 2011ರಲ್ಲಿ ತಮ್ಮ ಹೆಸರಿಗೆ ಖಾತೆ ಬದಲಾಯಿಸಿಕೊಂಡಿದ್ದಾರೆ. ಉಳಿದ ಹನ್ನೊಂದು ಗುಂಟೆ ಜಮೀನು ನಮ್ಮ ತಂದೆ ಮತ್ತು ಅವರ ಚಿಕ್ಕಪ್ಪನ ಹೆಸರಿಗೆ ಜಂಟಿ ಖಾತೆ ಆಗಿದೆ. ಈಗ ಬೇರೆಯವರ ಹೆಸರಿಗೆ ಖಾತೆ ಆಗಿರುವ ಜಮೀನಿಗೆ ನಮ್ಮ ತಂದೆ ಮತ್ತು ಚಿಕ್ಕಪ್ಪ ನ್ಯಾಯಾಲಯದಲ್ಲಿ ದಾವೆ ಹಾಕಬಹುದೇ?

| ಹೆಸರು ಊರು ಬೇಡ

ನಿಮ್ಮ ತಂದೆಯ ದೊಡ್ಡಪ್ಪ ಬೇರೆಯವರಿಗೆ 1969ರಲ್ಲಿ ನೋಂದಾಯಿತ ಕ್ರಯ ಪತ್ರ ಮಾಡಿದ್ದರೆ ಈಗ ನಿಮ್ಮ ತಂದೆ ಮತ್ತು ಚಿಕ್ಕಪ್ಪ ಕೇಸು ಹಾಕಿದರೆ ಪ್ರಯೋಜನ ಆಗುವುದಿಲ್ಲ. ಒಂದು ವೇಳೆ ನೋಂದಾಯಿತ ಪತ್ರ ಅಲ್ಲದಿದ್ದರೆ ಕೇಸು ಹಾಕಬಹುದು. ನೀವು ಮೊದಲಿಗೆ ಸಬ್ ರಿಜಿಸ್ಟ್ರಾರ ಕಚೇರಿಯಿಂದ ಎನ್​ಕಂಬರೆನ್ಸ್ (ಋಣಭಾರ) ವಿವರ ಪಡೆಯಿರಿ. ಆಗ ನಿಮಗೆ ಸರಿಯಾದ ಮಾಹಿತಿ ತಿಳಿಯುತ್ತದೆ. ಆ ನಂತರ ವಕೀಲರನ್ನು ಸಂರ್ಪಸಿ ಹಕ್ಕು ಘೊಷಣೆಯ ದಾವೆ ಸಲ್ಲಿಸ ಬಹುದು. ದಾವೆ ಹಾಕುವ ಮೊದಲಿಗೆ ಕಾಲಮಿತಿಯ ಕಾನೂನಿನ ಕಡೆ ಗಮನ ಕೊಡಬೇಕಾಗುತ್ತದೆ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...