More

    ಕಾನೂನು ಹೋರಾಟಕ್ಕೆ ನಿರ್ಧಾರ

    ಮೂಡಲಗಿ: ಐದು ವಾರ್ಷಿಕ ಸಭೆಗಳಿಗೆ ಹಾಜರಾಗದಿರುವ ಸದಸ್ಯರ ಹೆಸರು ಚುನಾವಣೆಯ ಮತದಾರ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಸಾರ್ವಜನಿಕರು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಂಘದ ಸದಸ್ಯರು ಆರಂಭಿಸಿರುವ ಪ್ರತಿಭಟನೆ ಶನಿವಾರವೂ ಮುಂದುವರಿಯಿತು.
    ಸಂಘದ ಕಾರ್ಯಾಲಯದ ಎದುರು ಎರಡು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ, ಸಂಘದ ವಾರ್ಷಿಕ ಸಭೆಗಳಿಗೆ ಸದಸ್ಯರು ಹಾಜರಾದರೂ ಚುನಾವಣೆಯ ಅಂತಿಮ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಕೈಬಿಟ್ಟು ಮತದಾನದಿಂದ ವಂಚಿತರಾಗುವಂತೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

    ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರು ಜಿಲ್ಲಾ ರಿಜಿಸ್ತ್ರಾರ್ ಅವರೊಂದಿಗೆ ಮುಖಂಡರ ನಿಯೋಗ ತೆರಳಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ತಿಳಿಸಿದ್ದಾರೆ. ಹಾಗಾಗಿ ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಡಲಾಗಿದೆ. ಅಲ್ಲಿಯೂ ಸಕಾರಾತ್ಮಕ ಸ್ಪಂದನೆ ದೊರೆಯದಿದ್ದಲ್ಲಿ ಸೋಮವಾರದಿಂದ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದರು.

    ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಎಲ್ಲ ಸದಸ್ಯರು ತಮಗೆ ಬರುವ ಲಾಭಾಂಶ ನೀಡಿದ್ದು, ಕಟ್ಟಡ ನಿರ್ಮಾಣದಲ್ಲಿ ಸಹ ಭಾರಿ ಅವ್ಯವಹಾರ ನಡೆದಿದೆ ಎಂದು ದೂರಿದರು. ಅವ್ಯವಹಾರದ ಬಗ್ಗೆಯೂ ಲೋಕಾಯುಕ್ತರಿಗೆ ತಿಳಿಸಲಾಗಿದೆ. ಆಡಳಿತ ಮಂಡಳಿಯ ವಿರುದ್ಧ ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟವಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವವರೆಗೂ ಹೋರಾಟ ಮುಂದುವರಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಬಿ.ಬಿ.ಹಂದಿಗುಂದ, ವೀರಣ್ಣ ಹೊಸೂರ, ಕೆ.ಟಿ.ಗಾಣಿಗೇರ, ಬಿ.ಜಿ.ಜಕಾತಿ,  ಎಸ್.ಎ.ಶೀಲವಂತ, ಸಿ.ಎಸ್.ಅಂಗಡಿ, ಬಸವರಾಜ ತೇಲಿ, ಚಂದ್ರಶೇಖರ ತೇಲಿ, ಗಿರೀಶ ಢವಳೇಶ್ವರ, ಸತ್ಯಪ್ಪ ವಾಲಿ, ರಾಜು ಅಂಗಡಿ, ಮಲ್ಲಪ್ಪ ಮದಗುಣಕಿ, ಚನ್ನಪ್ಪ ಅಥಣಿ,  ಮಲ್ಲಪ್ಪ ತೇರದಾಳ, ಶ್ರೀಕಾಂತ ಹಿರೇಮಠ, ಪ್ರದೀಪ ಲಂಕೆಪ್ಪನವರ, ಮೌನೇಶ ಪತ್ತಾರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts