More

    ವರ್ಚುವಲ್ ನ್ಯಾಯಾಂಗ ವ್ಯವಸ್ಥೆ ಅನಿವಾರ್ಯ: ಸಜ್ಜನ್ ಪೂವಯ್ಯ ಅವರ ಲಾ & ಆರ್ಡರ್ ಅಂಕಣ

    ‘ಸವಾಲುಗಳೇ ಅವಕಾಶಗಳ ಬಾಗಿಲು ತೆರೆಯುತ್ತವೆ’ ಎಂಬ ನಾಣ್ಣುಡಿಯಿದೆ. ಕರೊನಾ ಜಗತ್ತನ್ನು ಕಾಡತೊಡಗಿ ಅರ್ಧ ವರ್ಷ ಕಳೆದಿದ್ದು ಅದರೊಂದಿಗೇ ಜೀವನ ನಡೆಸುವುದು ಅನಿವಾರ್ಯ ಎಂಬ ಪರಿಸ್ಥಿತಿ ಬಂದೊದಗಿದೆ. ಅದು ಈ ನಾಣ್ಣುಡಿಗೆ ಪುಷ್ಟಿ ನೀಡುವಂತಿದೆ. ಈ ಅವಧಿಯುದ್ದಕ್ಕೂ ಕೆಲಸ, ಸಂವಹನ, ಮನರಂಜನೆ ಹೀಗೆ ಜೀವನದ ಪ್ರತಿಯೊಂದು ರಂಗದಲ್ಲಿ ಮಹತ್ವದ ವರ್ಚುವಲ್ ನ್ಯಾಯಾಂಗ ವ್ಯವಸ್ಥೆ ಅನಿವಾರ್ಯ: ಸಜ್ಜನ್ ಪೂವಯ್ಯ ಅವರ ಲಾ & ಆರ್ಡರ್ ಅಂಕಣಬದಲಾವಣೆ ಆಗಿರುವುದನ್ನು ಗಮನಿಸಿದ್ದೇವೆ. ಕೆಲವರು ಬದಲಾವಣೆಗೆ ಸುಲಭವಾಗಿ ಒಗ್ಗಿಕೊಂಡಿದ್ದಾರೆ. ಬಹಳ ಜನರು ಅದನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಕೋವಿಡ್-19 ಪರಿಸ್ಥಿತಿಯಿಂದಾಗಿ ಅನೇಕ ಸರ್ಕಾರಿ ಚಟುವಟಿಕೆಗಳಿಗೆ ಅಡ್ಡಿಯುಂಟಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಸ್ಥಳೀಯಾಡಳಿತಗಳಿಂದ ಸಮಸ್ಯೆಗೆ ಪರಿಹಾರ ಕಲ್ಪಿಸುವುದು, ಆರ್​ಟಿಒ ಕಚೇರಿಗಳ ಸೇವೆ ಹೀಗೆ ಅನೇಕಾನೇಕ ಸೇವೆಗಳು ಅಸ್ತವ್ಯಸ್ತಗೊಂಡಿವೆ. ವಿಶೇಷವಾಗಿ, ರಾಷ್ಟ್ರವ್ಯಾಪಿ ಲಾಕ್​ಡೌನ್ ಅವಧಿಯಲ್ಲಿ ದೊಡ್ಡ ಪ್ರಮಾಣದಲ್ಲಿ ತೊಂದರೆಗೀಡಾದ ಇನ್ನೊಂದು ಮುಖ್ಯ ಕ್ಷೇತ್ರ ನ್ಯಾಯಾಂಗ.

    ತನ್ನ ಚಟುವಟಿಕೆಗಳನ್ನು ಕಡಿತಗೊಳಿಸಲಾಗುತ್ತದೆ ಹಾಗೂ ‘ತೀರಾ ತುರ್ತ’ ಪ್ರಕರಣಗಳನ್ನು ಮಾತ್ರ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಲಾಕ್​ಡೌನ್ ವೇಳೆ ಸುಪ್ರೀಂ ಕೋರ್ಟ್ ಘೋಷಿಸಿತು. ತುರ್ತು ವಿಚಾರಗಳನ್ನು ಕೂಡ ‘ವಿಡಿಯೋ ಕಾನ್ಪರೆನ್ಸ್ ವಿಧಾನ’ ಮೂಲಕ ಮಾತ್ರವೇ ವಿಚಾರಣೆ ನಡೆಸಲಾಗುತ್ತದೆ ಎಂದೂ ಅದು ಸ್ಪಷ್ಟಪಡಿಸಿತು.

    ಇದನ್ನೂ ಓದಿ: ಸವದತ್ತಿ ಯಲ್ಲಮ್ಮ ದೇವಸ್ಥಾನದ ಬಳಿ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್ ತಡೆ

    ಹೊಸ ಯುಗಕ್ಕೆ ನಾಂದಿ: ಸುಪ್ರೀಂ ಕೋರ್ಟ್​ನ ಈ ನಿರ್ದೇಶನ ಭಾರತದಲ್ಲಿ ಆನ್​ಲೈನ್/ವರ್ಚುವಲ್ ಕೋರ್ಟ್ ವಿಚಾರಣೆಗಳ ಯುಗಕ್ಕೆ ನಾಂದಿ ಹಾಡಿದೆ. ಸಾಂಕ್ರಾಮಿಕತೆಗಿಂತ ಮುಂಚಿನ ಖುದ್ದು/ದೈಹಿಕ ಹಾಜರಿಯ (ಫಿಸಿಕಲ್) ಕೋರ್ಟ್ ವಿಚಾರಣೆ ಒಂದು ದುರಂತದಂತಿದ್ದವು. ಸಾಮಾನ್ಯ ದಿನದಂದೇ ಸಣ್ಣ ಕೋರ್ಟ್ ಹಾಲ್​ನಲ್ಲಿ ಹತ್ತಾರು ವಕೀಲರು, ನ್ಯಾಯಾಂಗ ಅಧಿಕಾರಿ-ಸಿಬ್ಬಂದಿ, ನ್ಯಾಯಾಧೀಶರು, ಕಕ್ಷಿದಾರರು ಆದಿಯಾಗಿ ಬಹಳಷ್ಟು ಜನರು ಕಿಕ್ಕಿರಿದು ಸೇರಿ ನ್ಯಾಯದ ನಿರೀಕ್ಷೆಯಲ್ಲಿ ಇರುತ್ತಿದ್ದರು. ಒಂದೇ ದಿನ ಹಲವು ಪ್ರಕರಣಗಳನ್ನು ಪಟ್ಟಿ ಮಾಡಲಾಗುತ್ತಿತ್ತು. ಆದರೆ ಸಮಯ ನಿಗದಿಪಡಿಸದಿರುವುದರಿಂದ ಎಲ್ಲರೂ ಬೆಳಗ್ಗೆಯೇ ಕೋರ್ಟ್ ಹಾಲ್​ಗೆ ಹಾಜರಾಗಿ ತಮ್ಮ ಸರದಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದರು. ಸಾಮಾಜಿಕ ಅಂತರ ನಿಯಮ ಕಾಯ್ದುಕೊಳ್ಳಲು ಬೇಕಾದಷ್ಟು ಜಾಗ ಬಿಡಿ, ಜನರು ನಿಂತು ಕೊಳ್ಳಲೂ ಸ್ಥಳಾವಕಾಶ ಇರದೆ ಪರದಾಡುವುದು ಸಾಮಾನ್ಯ ದೃಶ್ಯ.

    ಇದನ್ನೂ ಓದಿ: ಭತ್ತಕ್ಕೆ ದುಂಡಾಣು ರೋಗ: ಹೂವಿನಹಡಗಲಿ ತಾಲೂಕಿನ ಗದ್ದೆಗಳಿಗೆ ಕೃಷಿ ಅಧಿಕಾರಿಗಳು ಭೇಟಿ, ಪರಿಶೀಲನೆ

    ಕೋರ್ಟ್ ರೂಮ್ಳು ಮಾತ್ರವಲ್ಲದೆ ಎಲ್ಲರೂ ಬಳಸುವಂಥ ಕ್ಯಾಂಟೀನ್, ಲೈಬ್ರರಿ ಮತ್ತು ಸ್ಟೇಷನರಿ ಮಾರಾಟ ಪ್ರದೇಶ ಮುಂತಾದ ಎಲ್ಲ ಕಡೆಗಳಲ್ಲಿ ಪ್ರತಿ ದಿನ ಇದೇ ರೀತಿಯ ಸಮಸ್ಯೆ ಇರುವುದರಿಂದ ಯಾವುದೇ ನ್ಯಾಯಾಲಯ ಕೋವಿಡ್-19 ಹರಡುವ ಅಪಾಯವನ್ನು ನಿಭಾಯಿಸುವುದು ಕಷ್ಟದ ಕೆಲಸವೇ. ಕೋವಿಡ್-19 ಪಾಸಿಟಿವ್ ಇರುವಂಥ ಒಬ್ಬ ವ್ಯಕ್ತಿ ಇಂಥ ಜನನಿಬಿಡ ಸ್ಥಳಗಳಲ್ಲಿ ತಕ್ಷಣವೇ ದೊಡ್ಡ ಸಂಖ್ಯೆಯ ಜನರಲ್ಲಿ ವೈರಸ್ ಹರಡುವ ಸಾಧ್ಯತೆ ಹೆಚ್ಚೇ ಇರುತ್ತದೆ.

    ಹೀಗಾಗಿ, ಫಿಸಿಕಲ್ ವಿಚಾರಣೆ ನಿವಾರಿಸಿ ಪರ್ಯಾಯ ಕಂಡುಕೊಳ್ಳುವುದು ನ್ಯಾಯಾಂಗಕ್ಕೆ ಅನಿವಾರ್ಯ. ಎಲ್ಲ ಪ್ರಕರಣಗಳ ಆನ್​ಲೈನ್ ವಿಚಾರಣೆ ಅದರದ್ದೇ ಆದ ಸಮಸ್ಯೆ ಹೊಂದಿರುತ್ತಾದರೂ ಅದನ್ನು ಸಾಧ್ಯಗೊಳಿಸಿದ ಶ್ರೇಯಸ್ಸು ನ್ಯಾಯಾಂಗಕ್ಕೆ ಸಲ್ಲುತ್ತದೆ.

    ಇದನ್ನೂ ಓದಿ: ಸ್ವಾಮಿತ್ವ ಯೋಜನೆಗೆ ನಿಯೋಜಿಸದಿರಿ: ಪರವಾನಗಿ ಭೂ ಮಾಪಕರ ಸಂಘ ಒತ್ತಾಯ; ಕೂಡ್ಲಿಗಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಅರುಂಧತಿ ನಾಗಾವಿಗೆ ಮನವಿ

    ಬಲು ನಿಧಾನ: ನ್ಯಾಯಾಂಗ ಸಾಮಾನ್ಯವಾಗಿ ಹೊಸ ಬದಲಾವಣೆಗಳಿಗೆ ಹೊಂದಿಕೊಳ್ಳುವಲ್ಲಿ ನಿಧಾನಗತಿ ತೋರುತ್ತದೆ. ಕೋರ್ಟ್ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಇತರ ಸರ್ಕಾರಿ ದಾಖಲೆಗಳ ಸಲ್ಲಿಕೆ (ಫೈಲಿಂಗ್) ಮತ್ತು ಅರ್ಜಿಗಳನ್ನು ಸಂಪೂರ್ಣವಾಗಿ ಆನ್​ಲೈನ್ ಮಾಡಲಾಗಿದೆ. ಆದರೆ, ಕರೊನಾ ಸಾಂಕ್ರಾಮಿಕತೆಗೂ ಮುನ್ನ ಕೋರ್ಟ್ ಮುಂದೆ ಎಲ್ಲವನ್ನೂ ದೈಹಿಕವಾಗಿಯೇ ಮಾಡಲಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಕೋರ್ಟ್​ಗಳ ಕಂಪ್ಯೂಟರೀಕರಣ ಪ್ರಕ್ರಿಯೆ ಮತ್ತು ಆನ್​ಲೈನ್ ಫೈಲಿಂಗ್ ಹಾಗೂ ಅಂಗೀಕಾರ ವ್ಯವಸ್ಥೆ ಕರೊನಾ ಸಾಂಕ್ರಾಮಿಕತೆಯಿಂದಾಗಿ ಬಹಳ ವೇಗ ಪಡೆದುಕೊಂಡಿದೆ. ಉಳಿವಿಗಾಗಿ ತಾಂತ್ರಿಕ ಪರಿಹಾರವೇ ಮಾರ್ಗ ಎಂಬುದನ್ನು ಒಪ್ಪಿಕೊಳ್ಳುವುದು ಅನಿವಾರ್ಯವೆನಿಸಿದೆ.

    ಇದನ್ನೂ ಓದಿ: ‘ಆಸೆಯೇ ದುಃಖಕ್ಕೆ ಮೂಲ’ ಎನ್ನಲಿದ್ದಾರಾ ಬಿಗ್​-ಬಿ ಅಮಿತಾಭ್ ಬಚ್ಚನ್​?

    ಈ ಯಾವುದೇ ಆನ್​ಲೈನ್ ವೇದಿಕೆಗಳು ಸರ್ಕಾರ ರೂಪಿಸಿದ್ದಲ್ಲ. ಎಲ್ಲವೂ ಖಾಸಗಿ ಸಂಸ್ಥೆಗಳ ಉತ್ಪನ್ನಗಳು. ಉದಾಹರಣೆಗೆ, ಸುಪ್ರೀಂ ಕೋರ್ಟ್ ಆನ್​ಲೈನ್ ವಿಚಾರಣೆಗೆ ‘ವಿಡ್ಯೊ’ ಎಂಬ ವೇದಿಕೆ ಬಳಸುತ್ತದೆ. ಕರ್ನಾಟಕ ಹೈಕೋರ್ಟ್ ಜಿತ್ಸಿ ಅಥವಾ ಜೂಮ್ ಬಳಸುತ್ತದೆ. ದೆಹಲಿ ಹೈಕೋರ್ಟ್ ಅವಲಂಬಿಸಿರುವುದು ಸಿಸ್ಕೊ ವೆಬೆಕ್ಸ್ ಮೇಲೆ. ಆಂಧ್ರಪ್ರದೇಶ ಹೈಕೋರ್ಟ್ ‘ಬ್ಲೂ ಜೀನ್ಸ್’ ಬಳಸುತ್ತದೆ. ಪ್ರತಿಯೊಂದು ಹೈಕೋರ್ಟ್ ಭಿನ್ನ ಆನ್​ಲೈನ್ ವೇದಿಕೆ ಬಳಸುತ್ತಿರುವುದು ನಿಜವಾಗಿಯೂ ಸುರಕ್ಷಿತವೇ ಆಗಿದೆ. ಹಲವು ಬಹುರಾಷ್ಟ್ರೀಯ ಕಂಪನಿಗಳು ಅಭಿವೃದ್ಧಿಪಡಿಸಿರುವ ಈ ಸಾಫ್ಟ್​ವೇರ್​ಗಳು ಸ್ಥಿರವೂ ಹಲವು ದೋಷಗಳಿಂದ ಮುಕ್ತವೂ ಆಗಿವೆ. ಸುಧಾರಿತ ಮಾಹಿತಿ-ತಂತ್ರಜ್ಞಾನದ ಅಳವಡಿಕೆಯ ಪರಿಣಾಮವಾಗಿ ಈಗೀಗ ನ್ಯಾಯಾಧೀಶರು ಬಂದು ಕಲಾಪ ಆರಂಭಿಸುವ ಮುನ್ನವೇ ವಕೀಲರು ಲಾಗ್​ಇನ್ ಆಗಿ ತಮ್ಮ ಕೇಸ್ ನಿಭಾಯಿಸಲು ಸನ್ನದ್ಧರಾಗಿ ಕುಳಿತಿರುತ್ತಾರೆ.

    ಇದನ್ನೂ ಓದಿ: ತುಂಬಿ ಹರಿದ ಲಕ್ಷ್ಮೀದೇವಿ ಕೆರೆ, ಹಳ್ಳದ ನೀರಿಗೆ ಭತ್ತ ಬೆಳೆಯುವ ಆಲೋಚನೆ ಮೂಡಿಸಿದ ವರುಣ

    ಕಲಾಪ ಆರಂಭವಾದಾಗ ಯಾವುದೇ ತಾಂತ್ರಿಕ ತೊಂದರೆ ಆಗದಿರಲೆಂದು ಕೋರ್ಟ್ ಮಾಸ್ಟರ್​ರೊಂದಿಗೆ ವಕೀಲರು ತಮ್ಮ ವಿಡಿಯೋ ಮತ್ತು ಆಡಿಯೋ ತಪಾಸಣೆ ಮಾಡಬೇಕಾಗುತ್ತದೆ. ಈ ಪ್ರಮಾಣಿತ ಕಾರ್ಯಾಚರಣೆ ನಿಯಮ (ಎಸ್​ಒಪಿ) ಪ್ರತಿದಿನದ ಸುಗಮ ಕಾರ್ಯನಿರ್ವಹಣೆಗೆ ಮತ್ತು ನ್ಯಾಯಾಂಗದ ಅಮೂಲ್ಯ ಸಮಯ ಸುಮ್ಮನೆ ಹಾಳಾಗುವುದನ್ನು ತಪ್ಪಿಸಲು ನೆರವಾಗಿದೆ. ಯಾವ ವಕೀಲರಿಗೆ ಸಂಬಂಧಿಸಿದ ಕೇಸ್ ಕರೆಯಲಾಗುತ್ತದೋ ಆಗ ಆ ವಕೀಲರು ಪರದೆ ಮೇಲೆ ಹಾಜರಾಗುತ್ತಾರೆ.

    ಬಹುತೇಕ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು, ನ್ಯಾಯಮೂರ್ತಿಗಳ ಪರಿಶೀಲನೆಗಾಗಿ ನ್ಯಾಯಾಂಗ ಅಧಿಕಾರಿಗಳು ಪ್ರತಿ ಪ್ರಕರಣದ ಕಡತಗಳ ಫಿಸಿಕಲ್ ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ. ಅವುಗಳನ್ನು ಜಡ್ಜ್​ಗಳು ನೋಡುವಂತೆ ವಕೀಲರು ಅವಕಾಶ ಕಲ್ಪಿಸುತ್ತಾರೆ. ಅಂದರೆ ಫಿಸಿಕಲ್ ಕಲಾಪಗಳ ವೇಳೆ ನಡೆಯುವಂತೆಯೇ ಈ ಪ್ರಕ್ರಿಯೆ ಇರುತ್ತದೆ. ಕೆಲವು ಕೋರ್ಟ್​ಗಳಲ್ಲಿ ವಕೀಲರ ಕಡತಗಳ ಸಾಫ್ಟ್​ಕಾಪಿಗಳನ್ನು ಕೂಡ ಜಡ್ಜ್​ಗಳು ಪರಿಶೀಲಿಸಲು ಅವಕಾಶವಿದೆ. ಇದು ಆಯಾ ವಕೀಲರು ತಾವು ಹೇಳಬೇಕಾದ್ದನ್ನು ನಿರ್ದಿಷ್ಟವಾಗಿ ಪ್ರತಿಪಾದಿಸಬೇಕೆಂಬ ಹೊಣೆ ಎದುರಿಸುವಂತೆ ಮಾಡಿದೆ. ಫಿಸಿಕಲ್ ವಿಚಾರಣೆಯಂತೆ ಯಾವುದೇ ನೆಪ ಒಡ್ಡುವಂತಿಲ್ಲ.

    ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ಯಾಕೆ ಬೌಲಿಂಗ್ ಮಾಡುತ್ತಿಲ್ಲ ಗೊತ್ತೇ?

    ವೇಳೆ ಉಳಿತಾಯ: ಕೋರ್ಟ್​ನ ಸೀಮಿತ ವೇಳೆಯನ್ನು ಹಾಳು ಮಾಡಬಾರದೆಂಬ ಪ್ರಜ್ಞೆಯಿಂದಾಗಿ ವಕೀಲರ ಸಬ್​ವಿುಶನ್​ಗಳಲ್ಲಿ ಸ್ವಲ್ಪ ಮಟ್ಟಿನ ನಿಖರತೆ ಬಂದಿದೆ. ಆನ್​ಲೈನ್ ವ್ಯವಸ್ಥೆ ವಕೀಲರ ಸಮಯವನ್ನೂ ಉಳಿಸುತ್ತದೆ.

    ಟ್ರಿಬ್ಯುನಲ್​ಗಳು: ನ್ಯಾಯಮಂಡಳಿಗಳು (ಟ್ರಿಬ್ಯುನಲ್) ವರ್ಚುವಲ್ ನ್ಯಾಯ ವ್ಯವಸ್ಥೆ ಅಂಗೀಕರಿಸಿರುವ ನ್ಯಾಯಾಂಗದ ಒಂದು ಪ್ರಮುಖ ವಿಭಾಗವಾಗಿದೆ. ವಿದ್ಯುಚ್ಛಕ್ತಿ ಕುರಿತ ಮೇಲ್ಮನವಿ ಪ್ರಾಧಿಕಾರ (ಎಪಿಟಿಇಎಲ್) ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿದೆ. ಕರೊನಾ ಸಂಕಟದ ಸಮಯದಲ್ಲೂ ಅನೇಕ ಪ್ರಕರಣಗಳನ್ನು ವರ್ಚುವಲ್ ವ್ಯವಸ್ಥೆಯಲ್ಲಿ ವಿಚಾರಣೆ ನಡೆಸಿ ತೀರ್ಪುಗಳನ್ನು ನೀಡಿದೆ.

    ಸಮಸ್ಯೆಗಳು: ವರ್ಚುವಲ್ ನ್ಯಾಯಾಂಗ ಒಳ್ಳೆಯದೇನೋ ಹೌದು. ಆದರೆ ಅದರ ಸಂಪೂರ್ಣ ಸಾಕಾರದ ಹಾದಿಯಲ್ಲಿ ಹಲವು ಅಡ್ಡಿ ಆತಂಕಗಳಿವೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಈಗಲೂ ಇಂಟರ್​ನೆಟ್ ಲಭ್ಯತೆ ಇರುವವರು ಶೇಕಡ 50ರಷ್ಟು ಜನರು ಮಾತ್ರ. ಆನ್​ಲೈನ್ ವಿಚಾರಣೆ ವ್ಯವಸ್ಥೆಯ ವೆಚ್ಚ ಭರಿಸಲು ಎಲ್ಲ ವಕೀಲರಿಗೆ ಸಾಧ್ಯವಾಗದಿರಬಹುದು. ಹೀಗಾಗಿ ಆನ್​ಲೈನ್ ವ್ಯವಸ್ಥೆ ವಕೀಲರ ನಡುವೆಯೇ ಅಸಮಾನತೆ ಸೃಷ್ಟಿಸುವ ಸಾಧ್ಯತೆಯಿದೆ. ಆರ್ಥಿಕವಾಗಿ ಬಲಾಢ್ಯ ವಕೀಲರು ಎಲ್ಲ ಉತ್ತಮ ಸಾಧನ-ಸಲಕರಣೆ ಹೊಂದಬಹುದು. ಆದರೆ ಅದು ಎಲ್ಲರಿಗೂ ಕೈಗೆಟಕುವಂಥದ್ದಲ್ಲ.

    ಇದನ್ನೂ ಓದಿ: ಕಾರಟಗಿಯಿಂದ ನಿಜಾಮಬಾದ್‌ಗೆ ಭತ್ತ ಕಟಾವು ಯಂತ್ರ ಸಾಗಿಸುತ್ತಿದ್ದ ಲಾರಿ ಸ್ಟೇರಿಂಗ್ ತುಂಡಾಗಿ ಪಲ್ಟಿ, ಸ್ಥಳದಲ್ಲೇ ಇಬ್ಬರ ದುರ್ಮರಣ

    ಎಲ್ಲ ಕೋರ್ಟ್​ಗಳು ಕೂಡ ತಾಂತ್ರಿಕ ಮೂಲಸೌಲಭ್ಯಗಳನ್ನು ಹೊಂದಿಲ್ಲ. ಸ್ಥಿರವಾದ ಇಂಟರ್​ನೆಟ್ ಸಂಪರ್ಕ ಸೌಲಭ್ಯ ಕೊರತೆ, ಸಮಸ್ಯೆ ಬಂದಾಗ ಪರಿಹರಿಸಲು ಅಗತ್ಯವಾದ ತಾಂತ್ರಿಕ ಸಂಪನ್ಮೂಲ ವ್ಯಕ್ತಿಗಳ ಕೊರತೆ, ನ್ಯಾಯಾಧೀಶರ ಕೆಲಸ ಸುಗಮವಾಗಿ ಸಾಗವಂತೆ ಮಾಡಬಲ್ಲ ಅತ್ಯಾಧುನಿಕ ಕಂಪ್ಯೂಟರ್​ಗಳ ಕೊರತೆ ಮೊದಲಾದವು ಕಾಡುತ್ತಿರುವ ಸಮಸ್ಯೆಯಾಗಿವೆ. ಎಲ್ಲ ನ್ಯಾಯಾಲಯಗಳಿಗೆ ಇಂಥ ಸೌಕರ್ಯಗಳು ದೊರೆತಾಗಲಷ್ಟೆ ಹಾಗೂ ಎಲ್ಲ ವಕೀಲರೂ ಆರ್ಥಿಕ ಸದೃಢತೆ ಸಾಧಿಸಿದಾಗಲಷ್ಟೆ ವರ್ಚುವಲ್ ನ್ಯಾಯಾಲಯದ ಕನಸು ಸಂಪೂರ್ಣವಾಗಿ ನನಸಾಗಬಹುದು. ಆ ನಿಟ್ಟಿನಲ್ಲಿ ಸರ್ಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ.

    (ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್​)

    ಪತ್ರಕರ್ತ ಸಿದ್ಧಿಕ್ ಬಂಧನ ಅಕ್ರಮವೆಂದ ಕೆಯುಡಬ್ಲ್ಯುಜೆ; ಪಿಎಫ್​ಐ ನಂಟಿನ ಸಿದ್ಧಿಕ್ ಇರೋದು ಎಂದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts