2 ಟಿಂಬರ್ ಲಾರಿಗಳ ವಶ

ಕೊಪ್ಪ: ಮಿತಿಗಿಂತ ಜಾಸ್ತಿ ತೂಕದ ಟಿಂಬರ್ ಸಾಗಣೆ ಮಾಡುತ್ತಿದ್ದ ಎರಡು ಲಾರಿಗಳನ್ನು ಕೊಪ್ಪ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪಿಎಸ್​ಐ ಪುಟ್ಟೇಗೌಡ ನೇತೃತ್ವದ ತಂಡ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿ ಎರಡು ಟಿಂಬರ್ ಲಾರಿಗಳನ್ನು ವಶಪಡಿಸಿಕೊಂಡರು. ಮಲೆನಾಡು ಭಾಗದಲ್ಲಿ ಜೂನ್1ರಿಂದ ಸೆ.30ರವರೆಗೆ 15 ಟನ್​ಗಿಂತ ಹೆಚ್ಚು ತೂಕದ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುವುದರಿಂದ ಅತಿ ಭಾರದ ವಾಹನಗಳ ಓಡಾಟದಿಂದ ರಸ್ತೆಗಳಿಗೆ ಹಾನಿಯಾಗಿ ವಾಹನ ಸಂಚಾರಕ್ಕ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ.