More

  ಕಾರ್ಯಾರಂಭ ಮಾಡಿದ ವಿವಿ

  ಮಡಿಕೇರಿ:

  ಕುಶಾಲನಗರ ತಾಲೂಕು ಚಿಕ್ಕ ಅಳುವಾರದಲ್ಲಿ ಕೊಡಗು ವಿಶ್ವ ವಿದ್ಯಾಲಯ ಆರಂಭವಾಗುವ ಮೂಲಕ ಸ್ಥಳೀಯವಾಗಿಯೇ ಸ್ವತಂತ್ರ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣ ಪಡೆಯುವ ಜಿಲ್ಲೆಯ ಜನತೆಯ ಕನಸು ನನಸಾಗಿದೆ. ಹಿಂದಿನ ಸರ್ಕಾರ ಬಜೆಟ್‌ನಲ್ಲಿ ಘೋಷಿದ್ದ ೮ ವಿಶ್ವ ವಿದ್ಯಾಲಯಗಳ ಪೈಕಿ ಒಂದಾದ ಕೊಡಗು ವಿಶ್ವವಿದ್ಯಾಲಯ ಈ ವರ್ಷ ಸ್ನಾತಕೋತ್ತರ ಪದವಿಗಳಿಗಾಗಿ ಪ್ರವೇಶಾತಿ ಪ್ರಕ್ರಿಯೆ ಶುರುಮಾಡಿದ್ದು, ತನ್ನ ಕಾರ್ಯಚಟುವಟಿಕೆ ಅಧಿಕೃತವಾಗಿ ಆರಂಭಿಸಿದೆ.

  ಈ ಬೆನ್ನಲ್ಲೇ ಆರ್ಥಿಕ ಸಂಪನ್ಮೂಲದ ಕೊರತೆ ನೆಪ ಹೇಳಿ ಈ ೮ ವಿಶ್ವವಿದ್ಯಾಲಯಗಳನ್ನು ಸರ್ಕಾರ ಮುಚ್ಚುತ್ತದೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದಕ್ಕೆ ಪೂರಕವಾಗಿ ಕೊಡಗು ವಿವಿ ಮತ್ತು ವಿವಿ ಆಡಳಿತಕ್ಕೆ ಒಳಪಡುವ ಕಾಲೇಜುಗಳಲ್ಲಿ ಉಪನ್ಯಾಸಕರಿಗೆ, ಸಿಬ್ಬಂದಿಗೆ ಸರಿಯಾಗಿ ವೇತನ ಪಾವತಿ ಆಗುತ್ತಿಲ್ಲ. ಇದರಿಂದಾಗಿ ಅಲ್ಲಿಯ ನೌಕರ ವರ್ಗ ತೀರ್ವ ಸಂಕಷ್ಟ ಎದುರಿಸುತ್ತಿದೆ. ಕಾಲೇಜುಗಳ ನಿರ್ವಹಣಾ ವೆಚ್ಚವೂ ಬರುತ್ತಿಲ್ಲ ಎನ್ನಲಾಗಿದೆ. ಇದರ ಜತೆಗೆ ಹೊಸ ವಿಶ್ವವಿದ್ಯಾಲಯ ಮುಚ್ಚಲಾಗುವುದು ಎನ್ನುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ.

  ಕೊಡಗು ವಿಶ್ವವಿದ್ಯಾಲಯ ಮುಚ್ಚಬಾರದು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ಇತ್ತೀಚೆಗೆ ಕುಶಾಲನಗರದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನೂ ನಡೆಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ವಿಶ್ವವಿದ್ಯಾಲಯ ಮುಚ್ಚಲು ಬಿಡುವುದಿಲ್ಲ ಎಂದು ಜಿಲ್ಲೆಯ ಇಬ್ಬರು ಶಾಸಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕೊಡಗು ವಿಶ್ವವಿದ್ಯಾಲಯ ಇನ್ನಷ್ಟು ಬೆಳೆದು ಸ್ಥಳೀಯ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕು ಎನ್ನುವುದು ಸ್ಥಳೀಯರ ಒತ್ತಾಸೆಯೂ ಆಗಿದೆ. ಈ ಬಗ್ಗೆ ವಿಜಯವಾಣಿ ಓದುಗರು ಹಂಚಿಕೊಂಡ ಅಭಿಪ್ರಾಯ ಇಲ್ಲಿದೆ.

  ವಿಶ್ವವಿದ್ಯಾಲಯ ಮುಚ್ಚುವುದರಿಂದ ಮಧ್ಯಮ ಹಾಗೂ ಬಡ ವರ್ಗದ ವಿದ್ಯಾರ್ಥಿಗಳು ತಮ್ಮ ಉನ್ನತ ವ್ಯಾಸಂಗಕ್ಕಾಗಿ ಪರ ಊರುಗಳಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಸಾಕ?್ಟು ಉದ್ಯೋಗಿಗಳು ಉದ್ಯೋಗ ವಂಚಿತರಾಗುತ್ತಾರೆ. ಇರುವ ವಿಶ್ವವಿದ್ಯಾಲಯವನ್ನು ಮುಚ್ಚುವ ಯೋಚನೆಯನ್ನು ಬಿಟ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಅವಶ್ಯವಿರುವ ಯೋಜನೆಗಳನ್ನು ಘನ ಸರ್ಕಾರ ರೂಪಿಸುವುದು ಒಳಿತು.
  ಬಿ.ಬಿ. ಸಾವಿತ್ರಿ, ಡಯಟ್ ನಿವೃತ್ತ ಉಪನ್ಯಾಸಕಿ, ಕೂಡಿಗೆ

  ಕೆಲವರ ಪಿತೂರಿಯಿಂದ ವಿಶ್ವವಿದ್ಯಾಲಯಗಳನ್ನು ಮುಚ್ಚುವ ವಿಚಾರ ಚರ್ಚೆಯಾಗುತ್ತಿದೆ. ಇಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎನ್ನುವುದು ಮಾತ್ರ ಸ್ಪ?್ಟ. ಕೊಡಗು ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಖಂಡಿತ ನಾವು ಯೋಜನೆ ರೂಪಿಸಿ ಅನು?್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
  ಡಾ. ಮಂತರ್ ಗೌಡ, ಶಾಸಕ, ಮಡಿಕೇರಿ ವಿಧಾನಸಭಾ ಕ್ಷೇತ್ರ

  ಕೊಡಗು ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಅಲೋಚನೆಯಿಲ್ಲ ಎಂದು ಉನ್ನತ ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕೂಡ ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಮ್ಮಲ್ಲಿ ಉನ್ನತ ಶಿಕ್ಷಣಕ್ಕಾಗಿ ಈಗಾಗಲೇ ನಿರೀಕ್ಷೆಗೂ ಮೀರಿದ ಅಡ್ಮಿ?ನ್ ಆಗಿದೆ. ಈಗ ಇಂತಹ ಅನಾವಶ್ಯಕ ವಿಚಾರ ಚರ್ಚೆ ಮಾಡುವುದೇ ವ್ಯರ್ಥ.
  ಡಾ. ಅಶೋಕ್ ಎಸ್. ಆಲೂರ, ಕುಲಪತಿ, ಕೊಡಗು ವಿಶ್ವವಿದ್ಯಾಲಯ

  ಕೊಡಗಿನಿಂದ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾಲಯಕ್ಕೆ ನಾಲ್ಕು ಗಂಟೆ ಪ್ರಯಾಣ ಮಾಡಿ ಹೋಗಬೇಕು. ಇತ್ತ ಮೈಸೂರು ವಿ.ವಿ. ಕೂಡ ದೂರವಾಗುತ್ತದೆ. ಭಾ?ಾ ಅಲ್ಪಸಂಖ್ಯಾತರು ವಿದ್ಯಾರ್ಜನೆ ಮಾಡಲು ಕೊಡಗು ವಿಶ್ವವಿದ್ಯಾಲಯ ಅತ್ಯಂತ ಅಗತ್ಯ. ಇದನ್ನು ಹಿಂತೆಗೆದುಕೊಳ್ಳುತ್ತೇವೆ ಎನ್ನುವುದು ಬಹಳ ವಿ?ಾದನೀಯ. ಅಕ್ಕಪಕ್ಕದ ಜಿಲ್ಲೆಗಳನ್ನು ಸೇರಿಸಿಕೊಂಡು ವಿ.ವಿ. ಮುನ್ನಡೆಸಬೇಕೆ ವಿನಃ ಮುಚ್ಚುವ ಯತ್ನಗಳು ಆಗಬಾರದು. ಶಿಕ್ಷಕರಿಗೆ ವೇತನ ನೀಡಲು ಬೇಕಾದ ಸವಲತ್ತು, ಸೌಲಭ್ಯಗಳನ್ನು ಸರ್ಕಾರ ಒದಗಿಸಿಕೊಡಬೇಕು
  ವನೀತ್ ಕುಮಾರ್ , ಉಪನ್ಯಾಸಕ, ವಿರಾಜಪೇಟೆ

  ಮೊದಲು ಕೊಡಗಿನ ಮಕ್ಕಳು ವಿಶ್ವವಿದ್ಯಾಲಯದ ಏನೇ ಕೆಲಸ ಕಾರ್ಯಗಳಿಗೆ, ಓದಿಗೆ ಮಂಗಳೂರು ತನಕ ಹೋಗಬೇಕಿತ್ತು. ಇಲ್ಲಿಯೇ ಒಂದು ವಿಶ್ವವಿದ್ಯಾಲಯ ಸ್ಥಾಪನೆಯಾದಾಗ ಎಲ್ಲರಲ್ಲೂ ಆಶಾಭಾವನೆ ಮೂಡಿತ್ತು. ಸ್ಥಳೀಯರಲ್ಲಿ ಕೆಲಸದ ನಿರೀಕ್ಷೆಯೂ ಇತ್ತು. ಆದರೆ ಈಗ ಇದು ಕುಂಟುತ್ತಾ ಸಾಗುತ್ತಿರುವುದು ನಿರಾಸೆ ಮೂಡಿಸಿದೆ. ಸರ್ಕಾರದ ಮಟ್ಟದಲ್ಲಿ ಸೂಕ್ತ ಅನುದಾನ ಬಿಡುಗಡೆ ಮಾಡಿ ಮತ್ತೆ ಉತ್ತೇಜನ ನೀಡಬೇಕು. ಇಲ್ಲಿನ ಮಕ್ಕಳಿಗೆ ಇಲ್ಲಿಯೇ ಉತ್ತಮ ಮೌಲ್ಯಯುತ ಶಿಕ್ಷಣ ಸಿಗುವಂತಾಗಬೇಕು.
  – ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಪ್ರಾಧ್ಯಾಪಕಿ, ಕಾವೇರಿ ಕಾಲೇಜು, ಗೋಣಿಕೊಪ್ಪ

  ನಾಡಿನ ಆಶೋತ್ತರಗಳಿಗೆ ಅನುಗುಣವಾಗಿ ಕೂಡಗು ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಅರೆಕಾಲಿಕ ಉಪನ್ಯಾಸಕರ ಕಾಯಂಗೊಳಿಸುವ ಅಗತ್ಯವಿದೆ. ಇನ್ನು ಕೂಡ ಉಪನ್ಯಾಸಕರಿಗೆ ವೇತನ ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಬೇಕಾಗಿದೆ
  ಅಬ್ದುಲ್ ರಜಾಕ್ ಕೆ.ಯು., ಪ್ರಾಂಶುಪಾಲ, ಇಕ್ರಾ ಪಿ.ಯು. ಕಾಲೇಜು, ಸಿದ್ದಾಪುರ

  ಅಪರೂಪಕ್ಕೆ ಕೊಡಗಿಗೆ ಒಂದು ವಿಶ್ವವಿದ್ಯಾಲಯ ಸಿಕ್ಕಿದೆ. ಕೊಡಗಿನ ವಿದ್ಯಾರ್ಥಿಗಳ ಉನ್ನತ ವ್ಯಾಸಂಗ ಕ್ಕೆ ಉಪಯೋಗವಾಗಿದೆ. ಇಲ್ಲಿನ ಶಾಸಕರು, ಸಂಸದರು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಹೆಚ್ಚಿನ ಅನುದಾನ ತಂದು ವಿಶ್ವವಿದ್ಯಾಲಯವನ್ನು ಅಭಿವೃದ್ಧಿಪಡಿಸಬೇಕಾಗಿದೆ. ಜಿಲ್ಲೆಯಿಂದ ಎತ್ತಂಗಡಿಗೆ ಅವಕಾಶ ಕೊಡಬಾರದು.
  ಎಂ.ಎಂ. ಪು?್ಪಕ್, ಎಂಜಿನಿಯರ್, ಸೋಮವಾರಪೇಟೆ

  ಹಲವು ವರ್ಷಗಳ ನಿರೀಕ್ಷೆ ನಂತರ ಕೊಡಗು ವಿಶ್ವವಿದ್ಯಾಲಯ ಆರಂಭವಾಗಿರುವುದು ಸ್ವಾಗತಾರ್ಹ. ಇದು ಕೊಡಗಿನ ವಿದ್ಯಾರ್ಥಿಗಳಿಗೆ ಸಿಕ್ಕಿರುವ ಸೌಲಭ್ಯವೂ ಹೌದು. ಇದನ್ನು ಉಳಿಸಿಕೊಂಡು ಯಶಸ್ವಿಯಾಗಿ ಬೆಳೆಸುವುದು ಮುಖ್ಯವಾಗಿ ಕೊಡಗಿನ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ವಿದ್ಯಾಭಿಮಾನಿಗಳ ಕರ್ತವ್ಯವಾಗಿದೆ. ಕೊಡಗಿನ ವಿಶಿಷ್ಟ, ಸಂಸ್ಕೃತಿ, ಆಚಾರ, ವಿಚಾರ, ಇತಿಹಾಸ, ಭಾಷೆ, ಜನಾಂಗ, ಪರಿಸರ, ಕೃಷಿ ಹಾಗೂ ವಿವಿಧ ವಿಷಯಗಳ ಮೇಲೆ ಕೇಂದ್ರೀಕೃತ ಅಧ್ಯಯನ ನಡೆಸಲು ಕೊಡಗು ವಿ.ವಿ.ಯಿಂದ ಅನುಕೂಲ ಆಗಲಿದೆ.
  ಅಚ್ಚುಡ ಅನಂತಕುಮಾರ್, ನಿವೃತ್ತ ಜಂಟಿ ನಿರ್ದೇಶಕ, ಕಾಫಿ ಮಂಡಳಿ

  ನಮ್ಮ ಸರ್ಕಾರದ ಆಡಳಿತದ ಸಮಯದಲ್ಲಿ ೮ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡಲಾಗಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಈ ಹೊಸ ವಿಶ್ವವಿದ್ಯಾಲಯಗಳನ್ನು ರದ್ದುಗೊಳಿಸುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ ಅಳುವಾರದಲ್ಲಿರುವ ಕಾವೇರಿ ವಿಶ್ವವಿದ್ಯಾಲಯವನ್ನು ರದ್ದುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ. ಒಂದು ವೇಳೆ ವಿಶ್ವವಿದ್ಯಾಲಯ ಮುಚ್ಚಿದರೆ ಜಿಲ್ಲೆಯ ಸಾಕ?್ಟು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ.
  ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಸಚಿವ

  ಒಂದು ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು ಸುಲಭದ ಮಾತಲ್ಲ. ಇದೀಗ ಆಗಿರೋದು ನಾಮ್‌ಕೆ ಅವಸ್ಥೆಗೆ ಎಂಬಂತೆ ಕಾಣುತ್ತಿದೆ. ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಮೊದಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿರಬೇಕಿತ್ತು. ಸಿಬ್ಬಂದಿ ಸೇರಿ ಎಲ್ಲರ ನೇಮಕ ಮೊದಲು ಆಗಬೇಕಿತ್ತು. ವಿಶ್ವವಿದ್ಯಾನಿಲಯ ನಾಮಫಲಕ ಹಾಕಿ ಅಲ್ಲಿ ಸಿಬ್ಬಂದಿ ಇಲ್ಲದಿದ್ದರೆ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.
  ಉಮಾಶಂಕರ್ ಎಸ್.ಎಂ., ನಿಕಟಪೂರ್ವ ಪ್ರಾಂಶುಪಾಲ, ಭಾರತಿ ಪ್ರಥಮ ದರ್ಜೆ ಕಾಲೇಜು, ಶನಿವಾರಸಂತೆ

  ಒಂದು ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು ಸುಲಭದ ಮಾತಲ್ಲ. ಇದೀಗ ಆಗಿರೋದು ನಾಮ್‌ಕೆ ಅವಸ್ಥೆಗೆ ಎಂಬಂತೆ ಕಾಣುತ್ತಿದೆ. ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಮೊದಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿರಬೇಕಿತ್ತು. ಸಿಬ್ಬಂದಿ ಸೇರಿ ಎಲ್ಲರ ನೇಮಕ ಮೊದಲು ಆಗಬೇಕಿತ್ತು. ವಿಶ್ವವಿದ್ಯಾನಿಲಯ ನಾಮಫಲಕ ಹಾಕಿ ಅಲ್ಲಿ ಸಿಬ್ಬಂದಿ ಇಲ್ಲದಿದ್ದರೆ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.
  ಉಮಾಶಂಕರ್ ಎಸ್.ಎಂ., ನಿಕಟಪೂರ್ವ ಪ್ರಾಂಶುಪಾಲ, ಭಾರತಿ ಪ್ರಥಮ ದರ್ಜೆ ಕಾಲೇಜು, ಶನಿವಾರಸಂತೆ

  ವಿಶ್ವವಿದ್ಯಾಲಯ ಮುಚ್ಚಬೇಕು ಅಥವಾ ಮುಚ್ಚಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ಇದರ ಬಗ್ಗೆ ಒಂದು ಅಧ್ಯಯನ ನಡೆಸುವುದರಲ್ಲಿ ತಪ್ಪೇನಿಲ್ಲ. ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಸಂಪನ್ಮೂಲ ಬರುತ್ತದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲ ಆಗುತ್ತದೆ. ಕೊಡಗು ವಿವಿ ಮುಚ್ಚಬೇಕು ಎನ್ನುವುದು ಎಲ್ಲೂ ಪ್ರಸ್ತಾಪ ಆಗಿಲ್ಲ. ಆದರೆ ಆರ್ಥಿಕವಾಗಿ ಹೊರೆ ಆಗಿರುವ ಕೆಲವು ವಿವಿಗಳ ಬಗ್ಗೆ ಚಿಂತನೆ ಮಾಡುತ್ತಿರುವುದು ಸರಿ.
  ಎ.ಎಸ್. ಪೊನ್ನಣ್ಣ, ಶಾಸಕ, ವಿರಾಜಪೇಟೆ ಕ್ಷೇತ್ರ

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts