ನ್ಯಾಮತಿ: ಪಟ್ಟಣದಲ್ಲಿ ಕಳೆದ ತಿಂಗಳು ನಡೆದ ಸರಣಿ ಕಳವು ಪ್ರಕರಣ ಮಾಸುವ ಮುನ್ನವೇ ತಾಲೂಕಿನ ಗಂಜೀನಹಳ್ಳಿಯಲ್ಲಿ ಗುರುವಾರ ತಡರಾತ್ರಿ ಮನೆಯೊಂದರ ಬಾಗಿಲು ಮುರಿದು ನಗ, ನಗದು ದೋಚಲಾಗಿದ್ದು, ಶುಕ್ರವಾರ ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ಚಟ್ನಹಳ್ಳಿ – ಗಂಜೀನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಗಂಜೀನಹಳ್ಳಿ ಗ್ರಾಮದ ಪರಸಪ್ಪ ಎಂಬುವರು ಬಾಡಿಗೆಯಿದ್ದ ಮನೆಯಲ್ಲಿ ಕಳ್ಳತನವಾಗಿದೆ.
ಮಳೆಯಿಂದ ಮನೆ ಸೋರುತ್ತಿದ್ದರಿಂದ ಗುರುವಾರ ರಾತ್ರಿ ನಿವಾಸಿಗಳು ಬೀಗ ಹಾಕಿಕೊಂಡು ಹೊಸದಾಗಿ ಕಟ್ಟಿಸಿದ್ದ ಮನೆಯಲ್ಲಿ ಕುಟುಂಬ ಸಮೇತ ಮಲಗಿದ್ದರು. ಶುಕ್ರವಾರ ಬೆಳಗ್ಗೆ ವಾಪಸಾದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮನೆ ಬೀರುವಿನಲ್ಲಿಟ್ಟಿದ 1 ಚಿನ್ನದ ಕಿವಿಸುತ್ತು, ಹ್ಯಾಂಗಿಗ್ಸ್, ಉಂಗುರ, ಬಟನ್ಸ್, ಬೆಂಡೋಲೆ, ಬೆಳ್ಳಿ ಆಭರಣಗಳಾದ ಕಾಲುಚೈನ್, ಸಣ್ಣ ಕಾಲು ಚೈನ್, ಬೆಳ್ಳಿ ಉಡುದಾರ, ಲಿಂಗದಕಾಯಿ ಹಾಗೂ 40 ಸಾವಿರ ರೂ. ನಗದು ಕಳ್ಳತನವಾಗಿದೆ. ಅವುಗಳ ಒಟ್ಟು ಮೌಲ್ಯ ಸುವಾರು 1.45 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮನೆ ವಾಲೀಕ ಪರಸಪ್ಪ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪಿಎಸ್‌ಐ ಬಿ.ಎಲ್. ಜಯಪ್ಪನಾಯ್ಕ ತನಿಖೆ ಕೈಗೊಂಡಿದ್ದಾರೆ.