17.5 C
Bengaluru
Monday, January 20, 2020

ಕಡೆಗೂ ಬರಲಿಲ್ಲ ಆ ಮಧುರ ಮಿಲನ ಸುದಿನ

Latest News

ಯೋಗಕ್ಷೇಮ| ಯೋಗಾಸನಗಳನ್ನು ಯಾರು ಅಭ್ಯಾಸ ಮಾಡಬಹುದು?

ಹೌದು, ಈ ಪ್ರಶ್ನೆ ಸಹಜವೇ. ಯೋಗ ಬರಿ ಋಷಿ ಮುನಿಗಳಿಗೆ, ನಿವೃತ್ತರಿಗೆ, ಸಾಧಕರಿಗೆ ಕಡೆಗೆ ರೋಗಿಗಳಿಗೆ ಎಂಬ ಕಲ್ಪನೆ ಹಬ್ಬಿ ಬಿಟ್ಟಿದೆ. ಯೋಗ...

ಪರೀಕ್ಷಾ ಪೆ ಚರ್ಚಾ 3ನೇ ಆವೃತ್ತಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿದ್ಯಾರ್ಥಿಗಳ ಜತೆ ಸಂವಹನ ನಡೆಸುವ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದ ಮೂರನೇ ಆವೃತ್ತಿ ಕಾರ್ಯಕ್ರಮ ದೆಹಲಿಯ ತಲ್ಕತೋರಾ...

ರಾಜ್ಯದ 5 ನಗರಕ್ಕೆ ವಿಮಾನ ಸೇವೆ

ಬೆಂಗಳೂರು: ದೇಶದ ವಿಮಾನಯಾನ ಸೇವಾ ಕ್ಷೇತ್ರದಲ್ಲಿ ಪ್ರಥಮ ಸ್ಥಾನಪಡೆಯುವತ್ತ ರಾಜ್ಯ ಮುನ್ನುಗುತ್ತಿದ್ದು, ಕಲಬುರಗಿ ನಂತರ ಇದೀಗ ರಾಜ್ಯದ ಐದು ನಗರಗಳಲ್ಲಿ ಮುಂದಿನ 2...

ಮಾಸಾಂತ್ಯಕ್ಕೆ ವಿಸ್ತರಣೆ?: ವಿದೇಶದಿಂದ ವಾಪಸ್ಸಾದ ಬಳಿಕ ಮತ್ತೊಂದು ಸುತ್ತಿನ ಚರ್ಚೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸದ್ಯಕ್ಕೆ ಡೋಲಾಯಮಾನ. ಈ ವಿಷಯವಾಗಿ ವರಿಷ್ಠರ ಮಟ್ಟದಲ್ಲಿ ನಡೆದ ಚರ್ಚೆಯ ಸ್ವರೂಪ ಗಮನಿಸಿದರೆ,...

ಭಾರತ ಶುಭಾರಂಭ: 19 ವಯೋಮಿತಿ ವಿಶ್ವಕಪ್ ಟೂರ್ನಿ

ಬ್ಲೂಮ್ಾಂಟೆನ್ (ದಕ್ಷಿಣ ಆಫ್ರಿಕಾ): ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಬಲಿಷ್ಠ ನಿರ್ವಹಣೆ ತೋರಿದ ಹಾಲಿ ಚಾಂಪಿಯನ್ ಭಾರತ ತಂಡ 19 ವಯೋಮಿತಿ...

ಜಗತ್ತು ಕಂಡ ಅದ್ಭುತ ಗಾಯಕಿ ಲತಾ ಮಂಗೇಶ್ಕರ್. 1929, ಸೆಪ್ಟೆಂಬರ್ 28ರಂದು ಜನಿಸಿದ ಈ ಮಹಾನ್ ಸಾಧಕಿಗೆ ಈಗ 89ರ ಹರೆಯ. ಅಂದಾಜು ಒಂದು ಸಾವಿರಕ್ಕೂ ಅಧಿಕ ಹಿಂದಿ ಸಿನಿಮಾಗಳ ಹಾಡಿಗೆ ಧ್ವನಿ ಆಗಿರುವ ಲತಾ, 36 ಪ್ರಾದೇಶಿಕ ಭಾಷೆಗಳಲ್ಲೂ ತಮ್ಮ ಕಂಠಸಿರಿಯಿಂದ ಮನೆ ಮಾತಾಗಿದ್ದಾರೆ. ಕನ್ನಡದಲ್ಲೂ ಅವರು ಹಾಡಿದ್ದಾರೆ. 1967ರಲ್ಲಿ ತೆರೆಕಂಡ ‘ಸಂಗೊಳ್ಳಿ ರಾಯಣ್ಣ’ ಸಿನಿಮಾದ ‘ಬೆಳ್ಳನೆ ಬೆಳಗಾಯಿತು..’ ಹಾಡಿಗೆ ಅವರು ಧ್ವನಿಯಾಗಿದ್ದರು. ಅದು ಅವರ ಕನ್ನಡದ ಮೊದಲ ಹಾಡು. ಆದರೆ 1954ರಲ್ಲೇ ಕನ್ನಡ ಸಿನಿಮಾವೊಂದರ ಮೂರು ಹಾಡುಗಳಿಗೆ ಲತಾ ಧ್ವನಿ ನೀಡಿದ್ದರು. ಹಾಗಾದರೆ, ಆ ಗೀತೆಗಳು ಏನಾದವು?

| ಗಣೇಶ್​ ಕಾಸಗೋಡು

‘ಭಾರತೀಯ ಚಿತ್ರರಂಗದ ಕೋಗಿಲೆ’ ಎಂದೇ ಖ್ಯಾತರಾಗಿರುವ ಲತಾ ಮಂಗೇಶ್ಕರ್ ಹಾಡಿರುವ ಮೊಟ್ಟ ಮೊದಲ ಕನ್ನಡ ಚಿತ್ರ ಯಾವುದು? ಈ ಪ್ರಶ್ನೆಗೆ ಈವರೆಗೆ 1967ರಲ್ಲಿ ತೆರೆಕಂಡ ‘ಕ್ರಾಂತಿಯೋಗಿ ಸಂಗೊಳ್ಳಿ ರಾಯಣ್ಣ’ ಎಂಬ ಹೆಸರೇ ಉತ್ತರವಾಗಿತ್ತು. ಈ ಚಿತ್ರಕ್ಕಾಗಿ ಲತಾ ಹಾಡಿರುವ ‘ಬೆಳ್ಳನೆ ಬೆಳಗಾಯಿತು..’ ಇಂದಿಗೂ ಜನಪ್ರಿಯ. ಆದರೆ ಈಗ ಲಭ್ಯವಾಗಿರುವ ಅಚ್ಚರಿ ಹುಟ್ಟಿಸುವ ದಾಖಲೆಯೊಂದರ ಪ್ರಕಾರ ಲತಾ ಮಂಗೇಶ್ಕರ್ ಹಾಡಿರುವ ಮೊಟ್ಟ ಮೊದಲ ಕನ್ನಡ ಚಿತ್ರ ‘ಆಶಾ ನಿರಾಶಾ’. 1954ರಲ್ಲಿ ಅಂದರೆ, ಡಾ. ರಾಜ್​ಕುಮಾರ್ ನಟಿಸಿರುವ ‘ಬೇಡರ ಕಣ್ಣಪ್ಪ’ ಚಿತ್ರ ತೆರೆಕಂಡ ವರ್ಷವೇ ತಯಾರಾಗಿದ್ದ ‘ಆಶಾ ನಿರಾಶಾ’ (ತೆರೆಕಂಡಿಲ್ಲ) ಚಿತ್ರಕ್ಕಾಗಿ ಲತಾ ಅವರು ‘ಇಂದೆಮಗೆ ಬಂದಿಹುದು ಮಧುರ ಮಿಲನ ಸುದಿನ..’ ಎಂಬ ಹಾಡನ್ನು ಹಾಡಿದ್ದರು.

ಈ ಹಾಡಿನ ಬೆನ್ನು ಹತ್ತಿ ಹೋದಾಗ ಸಿಕ್ಕ ಕೆಲವೊಂದು ಮಾಹಿತಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಕಟಿಸಿರುವ ಎರಡು ಸಂಪುಟಗಳ ‘ಕನ್ನಡ ಚಲನಚಿತ್ರ ಇತಿಹಾಸ’ ಗ್ರಂಥದಲ್ಲೂ ಲಭ್ಯವಿಲ್ಲ! ‘ಆಶಾ ನಿರಾಶಾ’ ಚಿತ್ರದ ಇತರೆ ವಿವರಕ್ಕೆ ಬರುವ ಮೊದಲು 1954ರ ಜೂನ್ 20ನೇ ತಾರೀಕಿನ ‘ಕರ್ಮವೀರ’ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಹೀಗಿತ್ತು: ‘ಸುಪ್ರಸಿದ್ಧ ಹಿನ್ನೆಲೆ ಗಾಯಕರಾದ ಲತಾ ಮಂಗೇಶ್ಕರ್ ಮತ್ತು ಮಹಮ್ಮದ್ ರಫಿ ಅವರು ಕರ್ನಾಟಕ ಆರ್ಟ್ ಪೊ›ಡಕ್ಷನ್​ರವರ ‘ಆಶಾ ನಿರಾಶಾ’ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಮತ್ತು ಮೀನಾಕ್ಷಿ ಅವರಿಗೆ ಹಾಡುಗಳನ್ನು ಹಾಡಿದ್ದಾರೆ. ಯಾವ ಭಾಷೆಯ ಹಾಡುಗಳನ್ನು ಅನುಸರಿಸದೆ ಹೊಸ ರಾಗಗಳಲ್ಲಿ ಹಾಡಿರುವ ಈ ಹಾಡುಗಳು ಕರ್ನಾಟಕದಲ್ಲಿ ಜನಪ್ರಿಯವಾಗುವುದರಲ್ಲಿ ಸಂಶಯವಿಲ್ಲ. ಅವರು ಕನ್ನಡದಲ್ಲಿ ಹಾಡಿರುವುದು ಇದೇ ಮೊದಲು. ಈ ಚಿತ್ರದ ನಿರ್ವಪಕರು ಜಿ.ವಿ. ವೆಂಕಟರಾಮ…’

ಈ ನಿರ್ವಪಕರ ಬದುಕಿನ ಬಗೆಗಿನ ಮಾಹಿತಿಯೂ ಅಷ್ಟೇ ಇಂಟರೆಸ್ಟಿಂಗ್. ಮೂಲತಃ ಮೈಸೂರಿನವರಾದ ಜಿ.ವಿ. ವೆಂಕಟರಾಮ ಉದ್ಯೋಗ ನಿಮಿತ್ತ ಮುಂಬೈಗೆ ಹೋದವರು. ಅಲ್ಲಿನ ಮಾತುಂಗಾ ಕಿಂಗ್ಸ್ ಸರ್ಕಲ್​ನಲ್ಲಿದ್ದ ‘ಮೈಸೂರು ಕನ್ಸರ್ನ್ಸ್’ ಮಾಲೀಕರಾದ ಅವರು ಕಾಫಿಪುಡಿ ವ್ಯಾಪಾರಿಯಾಗಿದ್ದವರು! ವ್ಯಾಪಾರದಲ್ಲಿ ಯಶಸ್ವಿಯಾದ ವೆಂಕಟರಾಮ ಒಂದಷ್ಟು ಹಣ ಸಂಪಾದಿಸಿದರು. ಹಣದ ಜತೆ ಹಿಂದಿ ಚಿತ್ರರಂಗದ ಅತಿರಥ ಮಹಾರಥರ ಸ್ನೇಹವನ್ನೂ ಸಂಪಾದಿಸಿಕೊಂಡರು. ಕಾಫಿಪುಡಿ ವ್ಯಾಪಾರದಿಂದ ಬಂದ ಲಾಭದ ಹಣವನ್ನಿಟ್ಟುಕೊಂಡು ಒಂದು ಕನ್ನಡ ಸಿನಿಮಾ ಮಾಡಿದರೆ ಹೇಗೆ ಎನ್ನುವ ಯೋಚನೆ ಬಂದದ್ದೇ ತಡ, ಸೋದರರೊಂದಿಗೆ ರ್ಚಚಿಸಿ ‘ಆಶಾ ನಿರಾಶಾ’ ಚಿತ್ರದ ನಿರ್ವಣಕ್ಕೆ ಹೊರಟು ಬಿಟ್ಟರು. ಹಾಗೆ ಆರಂಭವಾದದ್ದೇ ‘ಕರ್ನಾಟಕ ಆರ್ಟ್ ಪೊ›ಡಕ್ಷನ್ಸ್’ ಸಂಸ್ಥೆ. ಮುಂಬೈನ ‘ರಣಜಿತ್’ ಸ್ಟುಡಿಯೋದಲ್ಲಿ ಚಿತ್ರೀಕರಣ ಆರಂಭವಾಯಿತು. ಮುಹೂರ್ತ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದವರು ಅಂದಿನ ಸೂಪರ್ ಸ್ಟಾರ್ ನಟಿ ವೈಜಯಂತಿಮಾಲಾ!

ಅಂದಹಾಗೆ, ಈ ಚಿತ್ರದಲ್ಲಿ ನಾಯಕ ಕಲ್ಯಾಣ್ ಕುಮಾರ್ ಮತ್ತು ನಾಯಕಿ ಮೀನಾಕ್ಷಿ ಜತೆ ಜಯಲಲಿತಾ ತಾಯಿ ಸಂಧ್ಯಾ, ವಿದ್ಯಾ, ಜಯಶ್ರೀ, ರಾಮಕೃಷ್ಣ ಭಟ್, ಎಂ.ಎಸ್. ಮಾಧವರಾವ್ ಮೊದಲಾದವರೂ ನಟಿಸಿದ್ದಾರೆ. ‘ಆಶಾ ನಿರಾಶಾ’ ಚಿತ್ರದ ಕಥೆ ಬರೆದವರು ಜಿ.ವಿ. ಹೊಯ್ಸಳ. ಅವರ ಸೋದರ ಎಸ್.ಪಿ. ಹೊಯ್ಸಳ ಛಾಯಾಗ್ರಾಹಕರಾಗಿ ದುಡಿದಿದ್ದಾರೆ. ಎನ್.ಕೆ. ಇಂದ್ರ್ರ ನಿರ್ದೇಶಿಸಿದ ಈ ಚಿತ್ರಕ್ಕೆ ಸಂಗೀತ ನೀಡಿರುವವರು ಬುಲೋನಿ ರಾಣಿ. ಅವರಿಗೂ ಲತಾ ಮಂಗೇಶ್ಕರ್​ಗೂ ಗಳಸ್ಯ ಕಂಠಸ್ಯ! ಹೀಗಾಗಿಯೇ ಬುಲೋನಿ ರಾಣಿಯವರ ಮೂಲಕ ಲತಾ ಅವರನ್ನು ಸಂರ್ಪಸಿ ತಮ್ಮ ಚಿತ್ರದಲ್ಲಿ ಹಾಡಲು ನಿರ್ವಪಕರು ವಿನಂತಿಸಿಕೊಂಡದ್ದು. ಈ ವಿನಂತಿಯನ್ನು ಒಪ್ಪಿಕೊಂಡ ಲತಾ ಹಾಡಿರುವ ಹಾಡಿನ ಸಾಲುಗಳು ಇಂತಿವೆ: ‘ಇಂದೆಮಗೆ ಬಂದಿಹುದು ಮಧುರ ಮಿಲನ ಸುದಿನ.. ಜೀವನವು ಪ್ರೇಮಮಯ, ಸವಿಯೇ ಸುಧೆಯ ಪಾನ.. ಈ ವನದ ತರುಲತೆಗಳಂತೆ ನಗುನಗುತಲಿ ನಲಿನಲಿದಾಡೆ

ಭಾವಲಹರಿ ಸೆಳೆಯುತಿಹುದು ಪ್ರೇಮ ಲೋಕಕೆ ಎನ್ನ…’ -ಈ ಗೀತೆಯನ್ನು ಬರೆದಿದದ್ದು ‘ಬಾನಾಡಿ’ (?) ಮತ್ತು ‘ಹರಿತಸ್’ (?) ಎನ್ನುವುದು ದಾಖಲೆಯಲ್ಲಿದೆ.

ಈ ಚಿತ್ರಕ್ಕಾಗಿ ಲತಾ ಮಂಗೇಶ್ಕರ್ ಹಾಡಿರುವ ಒಂದು ನೃತ್ಯಗೀತೆ ಮತ್ತು ಶೋಕಗೀತೆ ಕೂಡ ರೆಕಾರ್ಡ್ ಆಗಿರುವ ದಾಖಲೆ ಇದೆ. ಕೇಳುತ್ತಿದ್ದರೆ ಯಾವುದೋ ಲೋಕಕ್ಕೆ ಕೊಂಡೊಯ್ಯುವ ಗುಣ ಹೊಂದಿರುವ ಈ ಹಾಡುಗಳು ಅಂದಿನ ಜಮಾನಾದ ಪಳೆಯುಳಿಕೆಯಾಗಿ ಉಳಿದು ಬಿಟ್ಟಿವೆ! ಯಾವ ತಾಪತ್ರಯವೋ ಗೊತ್ತಿಲ್ಲ, ‘ಆಶಾ ನಿರಾಶಾ’ ಚಿತ್ರೀಕರಣ ಅರ್ಧದಲ್ಲೇ ನಿಂತು ಹೋಯಿತು. ನಂತರ ಉಳಿದ ಭಾಗದ ಚಿತ್ರೀಕರಣವನ್ನು ಮದರಾಸಿನಲ್ಲಿ ಚಿತ್ರೀಕರಿಸುವುದೆಂದು ನಿರ್ಧಾರವಾಯಿತು. ಆದರೆ ನಿರ್ದೇಶನದ ಜವಾಬ್ದಾರಿಯಿಂದ ಎನ್.ಕೆ. ಇಂದ್ರ ಹೊರ ಬಂದರು. ಅವರ ಬದಲು ಎಚ್.ಎಲ್.ಎನ್. ಸಿಂಹ ಗೊತ್ತಾದರು. ಆದರೆ ತಮ್ಮದೇ ಕಥೆ, ಚಿತ್ರಕಥೆ, ಸಂಭಾಷಣೆ ಇರಲೇಬೇಕೆಂದು ಪಟ್ಟು ಹಿಡಿದು ಕುಳಿತರು. ಇದನ್ನು ನಿರ್ವಪಕರಾದ ಜಿ.ವಿ. ವೆಂಕಟರಾಮ ಒಪ್ಪಲಿಲ್ಲ. ಪ್ರಾಜೆಕ್ಟ್ ಅಲ್ಲಿಗೇ ನಿಂತು ಹೋಯಿತು. ಹಾಗಾಗಿ, ‘ಆಶಾ ನಿರಾಶಾ’ ಚಿತ್ರಕ್ಕಾಗಿ ಲತಾ ಮಂಗೇಶ್ಕರ್ ಹಾಡಿರುವ ಮೂರು ಹಾಡುಗಳು ವ್ಯರ್ಥವಾದವು. ಈ ವಿಷಯ ಲತಾ ಅವರ ಗಮನಕ್ಕೆ ಬಂದುದರಿಂದಾಗಿಯೇ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರಕ್ಕೆ ಹಾಡಲು ಕರೆದಾಗ ಮೊದಲು ನಿರಾಕರಿಸಿದ್ದರು! ಆಮೇಲೆ ಆ ಚಿತ್ರದ ಸಂಗೀತ ನಿರ್ದೇಶಕರಾದ ಲಕ್ಷ್ಮಣ್ ಬರಲೇಕರ್ ಅವರ ಪ್ರೀತಿಯ ಒತ್ತಡ ಮತ್ತು ಒತ್ತಾಯದ ಮೇರೆಗೆ ಲತಾ ಹಾಡಲು ಒಪ್ಪಿಕೊಂಡರು. ಹಾಗೆ ರೆಕಾರ್ಡ್ ಆದದ್ದೇ ‘ಬೆಳ್ಳನೆ ಬೆಳಗಾಯಿತು..’ ಎಂಬ ಎವರ್​ಗ್ರೀನ್ ಹಾಡು. ಈ ಬಗೆಗಿನ ಹೆಚ್ಚಿನ ಮಾಹಿತಿಯನ್ನು ವಿಚಾರಿಸೋಣವೆಂದರೆ ನಿರ್ದೇಶಕ ಎನ್.ಕೆ. ಇಂದ್ರ ಈಗ ಬದುಕಿ ಉಳಿದಿಲ್ಲ. ನಿರ್ವಪಕ ಜಿ.ವಿ. ವೆಂಕಟರಾಮ 1975ರ ನವಂಬರ್ 11ರಂದು ಹೃದಯಾಘಾತದಿಂದ ನಿಧನರಾದರು. ಈ ಚಿತ್ರದ ಸಂಗೀತ ನಿರ್ದೇಶಕರು, ಛಾಯಾಗ್ರಾಹಕರು, ಗೀತೆರಚನಾಕಾರರು, ಸಂಭಾಷಣಕಾರರು ಯಾರೂ ಬದುಕಿ ಉಳಿದಿಲ್ಲ. ಕಲ್ಯಾಣ್ ಕುಮಾರ್, ಮೀನಾಕ್ಷಿ, ಪೋಷಕ ನಟಿ ಜಯಶ್ರೀ ಮೊದಲಾದವರೂ ಕಾಲವಾಗಿದ್ದಾರೆ. ಲತಾ ಮಂಗೇಶ್ಕರ್ ಜತೆ ಒಂದು ಯುಗಳ ಗೀತೆಗೆ ಹಾಡಿದ ಮಹಮ್ಮದ್ ರಫಿ ಕೂಡ ಬದುಕಿ ಉಳಿದಿಲ್ಲ. ಮುಹೂರ್ತ ಸಮಾರಂಭದ ಮುಖ್ಯ ಅತಿಥಿ ವೈಜಯಂತಿಮಾಲಾ ಅವರಿಗೆ ಈ ಬಗ್ಗೆ ನೆನಪಿದೆಯೋ ಗೊತ್ತಿಲ್ಲ. ‘ಇಂದೆಮಗೆ ಬಂದಿಹುದು ಮಧುರ ಮಿಲನ ಸುದಿನ’ ಎಂದು ಹಾಡಿರುವ ಲತಾ ಮಂಗೇಶ್ಕರ್ ಅವರ ಮಧುರ ಕಂಠದ ಸುಮಧುರ ಗೀತೆಯನ್ನು ಕೇಳುವ ಸುದಿನ ಬಂದೇ ಇಲ್ಲ…

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...