25.9 C
Bengaluru
Wednesday, January 22, 2020

ಸುಖ ಸಂಸಾರದ ಕೊನೆಯ ದಿನಗಳು…

Latest News

ಆರೋಪಿ ಆದಿತ್ಯರಾವ್​ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಲ್ಲ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿದ್ದ ಆರೋಪಿ ಆದಿತ್ಯರಾವ್​ನನ್ನು ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ...

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಇದ ಪ್ರಹಸನ ಅಲ್ಲಾ, ಪ್ರವಚನಾ ಅಂತ ನೀವು ತಿಳ್ಕೊಂಡರು ತಪ್ಪಿಲ್ಲಾ. ಆದರ ಈ ಪ್ರವಚನದಿಂದ ನಾಲ್ಕ ಮಂದಿ ಹುಡುಗರು ಉದ್ಧಾರ ಆದರ ಆಗಲಿ ಅಂತ ಬರದಿದ್ದ. ಹೆಂಗ ಜೀವನದಾಗ ಬಾಲ್ಯ, ಪ್ರೌಢ, ಯೌವ್ವನ ಮತ್ತ ವೃದ್ಧಾಪ್ಯ ಅಂತ ನಾಲ್ಕ ಘಟ್ಟ ಇರ್ತಾವ ಹಂಗ ಸಂಸಾರದಾಗನೂ ನನ್ನ ಪ್ರಕಾರ ನಾಲ್ಕ ಘಟ್ಟ ಇರ್ತಾವ. ಒಂದನೇದ ಕನ್ಯಾ ಫಿಕ್ಸ್ ಆಗಿ ಮದ್ವಿ ಆಗೋ ತನಕ ಇರೋದ. ಒಂಥರಾ ಸಂಸಾರದ ಬಾಲ್ಯ, ಮಂಗ್ಯಾನಾಟ ಮಾಡೋ ಘಟ್ಟ. ಇನ್ನ ಎರಡನೇದ ಹನಿಮೂನ ಮುಗಿಸಿಕೊಂಡ ಬಂದ ಒಂದನೇದ ಹಡೆಯೋತನಕ ಇರೋದ. ಸಂಸಾರದ ಪ್ರೌಢಾವಸ್ಥೆ.

ಮೂರನೇದ ಎರಡನೇದ ಹಡದ ಮ್ಯಾಲಿಂದ ಘಟ್ಟ….

ಇನ್ನ ಉಳದಿದ್ದ ನಾಲ್ಕನೇದ, ಎದಿ ಉದ್ದ ಮಕ್ಕಳಾಗಿ, ಮನ್ಯಾಗ ಏನೂ ಕಿಮ್ಮತ್ತ ಇಲ್ಲದ ಹೆಂಡ್ತಿ ಮಕ್ಕಳ ಕಡೆ ಮಾತ ಮಾತಿಗೆ ಛೀ..ಥೂ..ಅನಿಸಿಗೋತ ನಾಮ ಕೇ ವಾಸ್ತೆ ರೇಶನ್ ಕಾರ್ಡನಾಗ ಇನ್ನೂ ಇದ್ದೇವಿ ಅಂತ ಜೀವನಾ ದುಗಿಸಿಕೊಂಡ ಹೋಗೊ ಘಟ್ಟ. ಅದ ಸಂಸಾರದ ವೃದ್ಧಾಪ್ಯ.

ಹಂಗ ನಾ ಈಗ ಮೂರನೇ ಘಟ್ಟ ಮುಟ್ಟೇನಿ. ಇನ್ನೇನ ಇವತ್ತಿಲ್ಲಾ ನಾಳೆ ನಾಲ್ಕನೇ ಘಟ್ಟಕ್ಕ ಹೋಗ್ತೇನಿ. ಸಂಸಾರದ ಒಂದನೇ ಘಟ್ಟ, ನಾವ ಯಾವಾಗ ನಾಲ್ಕ ಕನ್ಯಾ ನೋಡಿ ಚೀಟಿ ಎತ್ತಿ ಒಂದ ಫೈನಲ್ ಮಾಡ್ತೇವಿ ಆವಾಗಿಂದ ಶುರು ಆಗ್ತದ. ಯಾರರ ಲವ್ ಮಾಡಿ ಲಗ್ನಾ ಮಾಡ್ಕೊಂಡರ ಅವರಿಗೆ ಲಗೂನ ಶುರು ಆಗ್ತದ ಆ ಮಾತ ಬ್ಯಾರೆ. ಇನ್ನ ನನ್ನ ಬಗ್ಗೆ ಹೇಳಬೇಕಂದರ ನಂದಂತೂ ಲವ್ ಮ್ಯಾರೇಜ್ ಅಲ್ಲಾ, ನಂಗ ಲವ್ ಮಾಡೋ ಕ್ಯಾಪ್ಯಾಸಿಟಿನೂ ಇರಲಿಲ್ಲಾ ಪರ್ಸನಾಲಿಟಿನೂ ಇರಲಿಲ್ಲಾ. ಮ್ಯಾಲೆ ನಾ ರೊಕ್ಕ, ಗಾಡಿ ಇದ್ದ ಮನಷ್ಯಾನೂ ಆಗಿರಲಿಲ್ಲಾ. ಹಿಂಗಾಗಿ ಯಾ ಹುಡಿಗ್ಯಾರು ನಂಗ ಬೀಳ್ತಿದ್ದಿಲ್ಲಾ. ಹಂಗ ಕಾಲೇಜನಾಗ ಶಾಣ್ಯಾ ಇದ್ದೆ ಅಂತ ಹುಡಗ್ಯಾರ ದೋಸ್ತಿ ಇತ್ತ ಖರೆ ಆದರ ಅವರ ನನ್ನ ನೋಟ್ಸಗೆ ಫೀದಾ ಆಗ್ತಿದ್ದರ ಹೊರತು ನನ್ನ ನೋಟಕ್ಕ ಅಂತೂ ಅಲ್ಲಾ.

ಅಲ್ಲಾ ಹಂಗ ಯಾ ಹುಡಗಿನೂ ಮುಂದ ಆಗೋ ಗಂಡಾ ಭಾಳ ಶಾಣ್ಯಾ ಇರಬೇಕು ಅಂತ ಬಯಸಂಗಿಲ್ಲ ಬಿಡ್ರಿ. ಹಂಗ ಅಪ್ಪಿ ತಪ್ಪಿ ನನ್ನ ಹೆಂಡ್ತಿಗೆ ಸಿಕ್ಕಂಗ ಭಾಳ ಶಾಣ್ಯಾ ಇದ್ದ ಗಂಡ ಸಿಕ್ಕರು ಅವಂಗ ಅಕಿ ಮುಂದ ಮೂರ್ಖ ಮಾಡಿ ಮಾಡ್ತಾಳ ಆ ಮಾತ ಬ್ಯಾರೆ. ಇನ್ನ ಆ ಫಿಕ್ಸ್ ಆಗಿದ್ದ ಕನ್ಯಾದ ಜೊಡಿ ಲಗ್ನಕಿಂತ ಮೊದ್ಲ ಸಣ್ಣ ಹುಡಗರಗತೆ ಕೈ ಕೈ ಹಿಡ್ಕೊಂಡ ಓಡ್ಯಾಡ್ಕೋತ ಏನ ಮಂಗ್ಯಾನಾಟ ಮಾಡಲಿಕ್ಕೆ ಶುರು ಮಾಡ್ತೇವಿ ಅಲಾ ಅದ ಒಂಥರಾ ಸಂಸಾರದ ಬಾಲ್ಯಾವಸ್ಥೆ. ಆವಾಗೇನ ಜೀವನದಾಗ ಹುಡಗ್ಯಾರನ ಕಂಡಿದ್ವೋ ಇಲ್ಲೊ ಅನ್ನೋರಗತೆ ಮಾಡಿ, ಅಕಿನ್ನ ಭೆಟ್ಟಿ ಆಗಲಿಕ್ಕೆ ಸಾಯೋದೇನ, ತಾಸ ಗಟ್ಟಲೇ ಫೋನನಾಗ ಮಾತಾಡೋದೇನ, ಇದ್ದದ್ದು ಇಲ್ಲದ್ದೂ ಅಕಿಗೆ ಹೇಳೋದೇನ? ಅಯ್ಯಯ್ಯ..ಅದನ್ನೇಲ್ಲಾ ಈಗ ನೆನಸಿಗೊಂಡ ಬಿಟ್ಟರ ‘ಹಿಂತಾಕಿ ಸಂಬಂಧ ಆವಾಗ ಏನ ಹುಚ್ಚರಂಗ ಮಾಡ್ತಿದ್ವಿಪಾ’ ಅಂತ ಈಗ ಅನಸ್ತದ.

ಇನ್ನ ಇದರ ಬಗ್ಗೆ ನನ್ನ ಅನುಭವ ಹೇಳಬೇಕಂದರ ಆವಾಗ ನನ್ನ ಕಡೆ ಮೊಬೈಲ್ ಇರಲಿಲ್ಲಾ ಆದರ ಕನ್ಯಾ ಲೋಕಲ್ ಇತ್ತ. ಹಿಂಗಾಗಿ ರೋಮಿಂಗ್ ಚಾರ್ಜಸ್ ಇರಲಿಲ್ಲಾ. ವಾರಕ್ಕ ನಾಲ್ಕ ಸರತೆ ಸಿ.ಬಿ.ಟಿ ಒಳಗ ನೇಕಾರ ನಗರ ಬಸ್ ಸ್ಟಾಪ್ ಮುಂದ ಅಕಿ ಸಂಬಂಧ ಕಾದ, ಅಕಿ ಬಸ್ಸಿಗೆ ಹೋಗ್ತೇನಿ ಅಂದರ ಡಬಲ್ ರೈಡಿಂಗ ಬರದಿದ್ದರು ನಾ ಬಿಡ್ತೇನಿ ಬಾ ಅಂತ ಬೈಕ್ ಮ್ಯಾಲೆ ಕೂಡಿಸಿಕೊಂಡ ಹೋಗೊದು, ಅದರಾಗ ನನಗ ಬೈಕ್ ಸರಿ ಹೊಡಿಲಿಕ್ಕೆ ಬ್ಯಾರೆ ಬರ್ತಿದ್ದಿಲ್ಲಾ, ಹಗಲಗಲಾ ಬ್ರೇಕ್ ಹಾಕೋಂವಾ, ಅಕಿ ಡಗ್ಗ ಡಗ್ಗ ಅಂತ ನಾ ಬ್ರೇಕ್ ಹಾಕಿದಾಗೊಮ್ಮೆ ನನ್ನ ಬೆನ್ನಿಗೆ ಡಿಕ್ಕಿ ಹೊಡಿಯೋಕಿ, ಕಡಿಕೆ ಅಕಿ ತಲಿ ಕೆಟ್ಟ ಇಳದ ಬ್ಯಾಡಾ ಆಟೋದಾಗ ಹೋಗೊಣ ನೀವು ಗಾಡಿ ಹೊಡಿಯೋದ ಕಡಮಿ ಬ್ರೇಕ್ ಹಾಕೋದ ಜಾಸ್ತಿ ಎಲ್ಲೇರ ನಿಮ್ಮ ಬೆನ್ನ ನೆಗ್ಗಿ ನುಗ್ಗಿಕಾಯಿ ಆಗಿ-ಗಿಗಿತ್ತ ಅಂತ ಇಳದ ಬಿಡ್ತಿದ್ದಳು. ಅದಕ್ಕ ನಾ ಹೇಳಿದ್ದ ಇದ ಮಂಗ್ಯಾನಾಟ ಮಾಡೋ ಘಟ್ಟ ಅಂತ.

ಹಂಗ ಈ ಮದ್ವಿಕಿಂತ ಮೊದ್ಲ ಏನ ನಾವು ಹುಡಗಿ ಕಟಗೊಂಡ ಅಡ್ಡಾಡ್ತೇವಿ ಅಲಾ, ಇದ ಮುಂದಿನ ಸಂಸಾರಕ್ಕ ಫೌಂಡೇಶೇನ್ ಇದ್ದಂಗ, ಇಲ್ಲೆ ನಾವ ಹಾದಿ ತಪ್ಪಿದ್ವಿ ಅಂದರ ಮುಂದ ಸಂಸಾರ ಹಳ್ಳಾ ಹಿಡಿತಂದಂಗ. ಏನರ ಪ್ರಿವೆಂಟಿವ್ ಮೇಜರ್ಸ್ ತೊಗೊಬೇಕು ಅಂದರ ಅದನ್ನ ಇದ ಪಿರಿಡ್ ಒಳಗ ತೊಗೊಬೇಕ. ಅಲ್ಲಾ ಟ್ಟಛಿಡಛ್ಞಿಠಿಜಿಟ್ಞ ಜಿಠ ಚಿಛಿಠಿಠಿಛ್ಟಿ ಠಿಜಚ್ಞ ಚಚಿಟ್ಟಠಿಜಿಟ್ಞ ಅಂತಾರಲಾ ಅದನ್ನ ಈ ಪಿರಿಡ್ ಒಳಗ ತೊಗೊಬೇಕ. ನಾ ಹೇಳಿದ್ದನ್ನ ನೀವು ಔಜಿಠಿಛ್ಟಿಚ್ಝ ಠಛ್ಞಿಠಛಿ ಒಳಗ ತೊಗೊಬ್ಯಾಡ್ರಿ. ನಾ ಹೇಳೋದೇನ ಅಂದರ ನಾವು ಈ ಪಿರಿಡ್ ಒಳಗ ನಮ್ಮ ಜುಟ್ಲಾ ಹೆಂಡ್ತಿ ಆಗೋಕಿ ಕೈಯಾಗ ಕೊಟ್ಟವಿ ಅಂದರ ಸತ್ತಂಗ. ಮುಂದ ಸಂಸಾರ ಶುರು ಆಗಿ 20 ವರ್ಷ ಆದಮ್ಯಾಲೆ ತಲ್ಯಾಗ ಕೂದ್ಲ ಹೋದರೂ ಜುಟ್ಲ ಮಾತ್ರ ಹೆಂಡ್ತಿ ಕೈಯಾಗ ಇರ್ತದ. ನನ್ನ ನೋಡ್ರಿ ಈಗ ತಲ್ಯಾಗ ಕೂದ್ಲಿಲ್ಲಾ ಆದರೂ ಜುಟ್ಲ ಅಕಿ ಕೈಯಾಗ ಅದ ಇಲ್ಲ? ಇದ ಹಿಂಗ್ಯಾಕ ಆಗಿದ್ದಂದರ ಆವಾಗ ಏನ ಎಂಗೇಜಮೆಂಟ್ ಆದ ಹೊಸ್ತಾಗಿ ‘ಕನ್ಯಾ ಕಂಡೇನೋ ಇಲ್ಲೊ’ ಅನ್ನೊರಂಗ ತಲಿ ಮ್ಯಾಲೆ ಕೂಡಿಸ್ಗೊಂಡ ಅಡ್ಡಾಡಿದ್ದರ ತಪ್ಪ. ಇನ್ನ ಯಾವಾಗ ಮದ್ವಿ ಆಗಿ ಹನಿಮೂನಗೇ ಹೋಗಿ ಬಂದ ಸಂಸಾರದ ನೆಟ್ ಪ್ರಾ್ಯಕ್ಟೀಸ್ ಶುರು ಮಾಡ್ತೇವಿ ಅಲಾ ಅದ ಸಂಸಾರದ ಎರಡನೇ ಘಟ್ಟದ ಪ್ರಾರಂಭ. ಇದ ಒಂಥರಾ ಸಂಸಾರದ ಪ್ರೌಢಾವಸ್ಥೆ. ಇದ ಒಂದನೇದ ಹಡಿಯೋ ತನಕ ಇಷ್ಟ ಪೀಕನಾಗ ಇರ್ತದ. ಒಂದ ಹಡದ ಕೂಡಲೇ ಕಡಮಿ ಆಕ್ಕೋತ ಹೋಗಿ ಮುಂದ ಎರಡನೇದ ಹಡದ ಮ್ಯಾಲೆ ಮುಗದ ಹೋಗ್ತದ. ಅದಕ್ಕ ಒಂದಿಷ್ಟ ಮಂದಿ ಶಾಣ್ಯಾರ ಒಂದನೇದ ಹಡಿಬೇಕಾರ ಲೇಟ್ ಮಾಡ್ತಾರ, ಇನ್ನ ಎರಡನೇದ ಅಂತೂ ಹತ್ತ ಸರತೆ ವಿಚಾರ ಮಾಡಿ ಮಾಡಿ ಹಡಿತಾರ. ಅಲ್ಲಾ ಎಲ್ಲಾರೂ ಯಾಕ ನನ್ನಂಗ ಎಂಟ ವರ್ಷದಾಗ ಅತ್ತಿ-ಮಾವಾ ಗಟ್ಟಿ ಇದ್ದಾರ ತಡಿ ಅವರ ಖರ್ಚಿನಾಗ ಎರಡು ಬಾಣಂತನ ಮುಗದ ಬಿಡ್ಲಿ ಅಂತ ಗಡಿಬಿಡಿ ಮಾಡ್ತಾರ ಬಿಡ್ರಿ.

ಇನ್ನ ಎರಡ ಹಡದ ಮ್ಯಾಲೆ ಏನ ಸಂಸಾರ ಸ್ಟಾರ್ಟ್ ಆಗ್ತದಲಾ ಅದ ನಿಜವಾದ ಸಂಸಾರ ಮತ್ತ ಅದ ಮೂರನೇ ಘಟ್ಟ. ಇದ ಒಂಥರಾ ಸಿರಿಯಸ್ ಪಿರಿಡ್. ಇಲ್ಲೇ ಗಂಡಗ ಏನೂ ಸ್ಕೋಪ್ ಇರಂಗಿಲ್ಲಾ. ಬರೇ ಹೆಂಡ್ತಿ ಮಕ್ಕಳದ ಆಟ, ಗಂಡಗ ಬರೇ ಡೋಂಬರಾಟ. ಇದ ಏನಿಲ್ಲಾಂದರೂ ಒಂದ ಹದಿನೈದ-ಇಪ್ಪತ್ತ ವರ್ಷ ಇರ್ತದ. ಮಕ್ಕಳ ನಮ್ಮ ಎತ್ತರಕ್ಕ ಬೆಳೆಯೋ ತನಕ ಇಷ್ಟ. ಮುಂದ ಗಂಡನ ಹಣೇಬರಹ ಮುಗಿತ, ಅಲ್ಲಿಗೆ ನಾಲ್ಕನೇ ಮತ್ತು ಕೊನೇಯ ಘಟ್ಟ ಶುರು. ಮುಂದ ಸಂಸಾರ ಅಂದ್ರ ಹೆಂಡ್ತಿ ಮಕ್ಕಳು ಇಷ್ಟ. ಅಲ್ಲಿಗೆ ಸುಖ ಸಂಸಾರದ ಕೊನೆಯ ದಿನಗಳು ಶುರು ಆದಂಗ. ಅಂದರ ಸಂಸಾರ ಮುಗಿತು ಸನ್ಯಾಸ ತೊಗೊಳಿಕ್ಕೆ ಅಡ್ಡಿಯಿಲ್ಲಾ ಅಂತಲ್ಲಾ…ಸಂಸಾರದಾಗಿನ ಸುಖಾ ಮುಗಿತು ಅಂತ ಅರ್ಥ ಇಷ್ಟ. ಮುಂದ ಗಂಡಾ ಅನ್ನೋ ಪ್ರಾಣಿ ಮನ್ಯಾಗ ಯಾವದರ ಒಂದ ಪ್ರಾಣಿ ಸಾಕಿ ಅದನ್ನ ಹೆಂಡ್ತಿ ಮಕ್ಕಳಗಿಂತಾ ಜಾಸ್ತಿ ಹಚಗೊಂಡ ಬದಕಬೇಕು.

ಹಿಂಗ ಸಂಸಾರದ ನಾಲ್ಕ ಘಟ್ಟದೊಳಗ ಈಗ ನಾ ಲಗಭಗ ಮೂರನೇ ಘಟ್ಟ ಮುಗಸಲಿಕ್ಕೆ ಬಂದೇನಿ. ನನ್ನ ಸುಖ ಸಂಸಾರದ ಕೊನೇಯ ದಿನಗಳು ಶುರು ಆಗ್ಯಾವ. ನನ್ನ ಅನುಭವದಿಂದ ಯಾರರ ನಾಲ್ಕ ಮಂದಿಗೆ ಹೆಲ್ಪ್ ಆಗತಿದ್ದರ ಆಗಲಿ, ಅವರ ಒಂದ ಸಲಾ ಬಿಟ್ಟ ಹತ್ತ ಸಲಾ ವಿಚಾರ ಮಾಡಿ ಟ್ಟಛ್ಚಿಚ್ಠಠಿಜಿಟ್ಞ ತೊಗೊಂಡ ಲಗ್ನಾ ಮಾಡ್ಕೊಳ್ಳಿ ಅಂತ ಇಷ್ಟ ಬರಿಬೇಕಾತ.

ಅಲ್ಲಾ, ಎಲ್ಲಾ ಬಿಟ್ಟ ಇವತ್ಯಾಕ ಬರದೇ ಅಂದರ ಮೊನ್ನೆ ಅಂದರ ನವೆಂಬರ 28ಕ್ಕ ನನ್ನ ಮದ್ವಿ ಆಗಿ ಹತ್ತೊಂಬತ್ತ ವರ್ಷ ಆತ. ಹಂಗ ಎಂಗೇಜಮೆಂಟ್ ಆಗಿದ್ದ ಫೆಬ್ರುವರಿ ಒಳಗ ವ್ಯಾಲೇಂಟೇನ್ಸ್ ಡೇಕ್ಕ, ಮುಂದ ಮದ್ವಿ ಆಗಿದ್ದ ನವೆಂಬರ್ 28ಕ್ಕ, ಒಂಬತ್ತೂವರಿ ತಿಂಗಳ ಗ್ಯಾಪ್ ಕೊಟ್ಟಿದ್ದರ ಬಿಡ್ರಿ. ಹಂಗ ವ್ಯಾಲೇಂಟೇನ್ಸ ಡೇ ಕ್ಕ ಮದ್ವಿ ಆದರ ಚಿಲ್ಡ›ನ್ಸ್ ಡೇ (ನವೆಂಬರ್ 14) ಕ್ಕ ಮಕ್ಕಳಾಗಬೇಕಂತ ಆದರ ನಂದ ಬರೇ ಎಂಗೇಜಮೆಂಟ್ ಆಗಿತ್ತ ಹಿಂಗಾಗಿ ಮಕ್ಕಳಾಗಲಿಲ್ಲಾ.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...