More

    ರೋಚಕ ಸ್ಪರ್ಧೆಗಳೊಂದಿಗೆ ಶುರುವಾದ ಕೃಷಿ ಮೇಳದ ಅಂತಿಮ ದಿನ

    ಮೈಸೂರು: ರಾಜ್ಯಮಟ್ಟದ ಕೃಷಿ ಮೇಳ ಮೂರನೇ, ಅಂತಿಮ ದಿನವು ರೋಚಕ ಸ್ಪರ್ಧೆಗಳೊಂದಿಗೆ ಭಾನುವಾರ ಚಾಲನೆ ಪಡೆದುಕೊಂಡಿತು.

    ಹಗ್ಗ ಜಿಗಿದಾಟದ ಪೈಪೋಟಿಯಲ್ಲಿ 50ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಮತ್ತಷ್ಟು ಬಾಲಕರು‌ ಸ್ಪರ್ಧೆಗೆ ಉತ್ಸುಕರಾಗಿದ್ದರೂ ಸಮಯಾಭಾವ ಹಾಗೂ ಬಿಸಿಲು ಏರತೊಡಗಿದ್ದರಿಂದ ಅವಕಾಶ ಸಿಗಲಿಲ್ಲ. ತುರುಸಿನ ಸ್ಕಿಪ್ಪಿಂಗ್ ಸ್ಪರ್ಧೆಗೆ ನೆರೆದವರು ದೊಡ್ಡ ದನಿಯ ಕೇಕೆ, ಚಪ್ಪಾಳೆಯು ಉತ್ಸಾಹ ತುಂಬಿತು. ಕೊನೆಯದಾಗಿ ಮೂವರು ವಿಜೇತರಾಗಿ ಮೊದಲ, ಎರಡನೇ ಹಾಗೂ ತೃತೀಯ ಬಹುಮಾನ ಗಿಟ್ಟಿಸಿಕೊಂಡರು.

    ಗೋವು, ಪರಿಸರ ಸಂರಕ್ಷಣೆ ಹಾಗೂ ಸಂಸ್ಕೃತಿಯ ಹೆಚ್ಚುಗಾರಿಕೆ ವಿಚಾರವುಳ್ಳ ರಂಗೋಲಿಗಳು ನೋಡುಗರ ಗಮನಸೆಳೆದವು ಬಣ್ಣ ಬಣ್ಣದ ಚಿತ್ತಾರದಲ್ಲಿ ಮೂಡಿಬಂದ ರಂಗವಲ್ಲಿ ಸ್ಪರ್ಧೆಯಲ್ಲಿ 15ಕ್ಜೂ ಹೆಚ್ಚು ಜನ ಪಾಲ್ಗೊಂಡಿದ್ದರು.

    ಗಂಭೀರ ಅವಲೋಕನ, ಮೌನ ವೀಕ್ಷಣೆಗೆ‌ ಸಾಕ್ಷಿಯಾದದ್ದು ಶ್ವಾನಗಳ ಪ್ರದರ್ಶನ. ಪ್ರೀತಿಯಿಂದ ಆರೈಕೆ ಮಾಡಿ ಬೆಳೆಸಿದವರು ಪ್ರದರ್ಶನಕ್ಕೆ ಶ್ವಾನಗಳನ್ನು ಕರೆ ತಂದಿದ್ದರು. ಜರ್ಮನ್ ಷೆಫರ್ಡ್, ಡಾಬರ್ ಮನ್, ಬೀಗಲ್, ಪಗ್ಗ್ ಮುಂತಾದ 10ಕ್ಕೂ ಹೆಚ್ಚು ಶ್ವಾನಗಳು ಪ್ರದರ್ಶನದಲ್ಲಿದ್ದವು. ಬೌ ಬೌ, ಕುಂಯ್ ಕುಂಯ್ ಎಂಬ ಸದ್ದು, ಮಾಲೀಕನ ಆಜ್ಞಾಧಾರಕ ನಾಯಿಗಳು ನೋಡುಗರಲ್ಲಿ ಕುತೂಹಲ ಹುಟ್ಟಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts