ಲಾರ್ವಾ ತಪಾಸಣೆ, ನಿರ್ಮೂಲನೆ ಜಾಗೃತಿ

ಹೊಳೆನರಸೀಪುರ: ತಾಲೂಕಿನ ಹಳೇಕೋಟೆ ಹೋಬಳಿ ಕಾಮಸಮುದ್ರ ಗ್ರಾಮದಲ್ಲಿ ಹಿರಿಯ ಆರೋಗ್ಯ ಸಹಾಯಕರ ನೇತೃತ್ವದಲ್ಲಿ ಲಾರ್ವಾ ತಪಾಸಣೆ ಮತ್ತು ನಿರ್ಮೂಲನೆ ಕುರಿತು ಜಾಗೃತಿ ಮೂಡಿಸಲಾಯಿತು.
ಗ್ರಾಮದ ಮನೆ ಮನೆಗೆ ಭೇಟಿ ನೀಡಿದ ಆರೋಗ್ಯ ಸಹಾಯಕಿ ಮತ್ತು ಆಶಾ ಕಾರ್ಯಕರ್ತೆ, ಸಾಂಕ್ರಾಮಿಕ ರೋಗಗಳು ಹರಡುವ ಕುರಿತು ಮಾಹಿತಿ ನೀಡಿದರು.

ನೀರು ಶೇಖರಣೆ ಆಗುವಂತಹ ವಾಹನಗಳ ನಿರುಪಯುಕ್ತ ಟಯರ್‌ಗಳು ಮತ್ತು ಗುಜರಿ ಪದಾರ್ಥಗಳನ್ನು ಮನೆ ಪರಿಸರದಲ್ಲಿ ಇಟ್ಟುಕೊಳ್ಳಬಾರದು. ಇವುಗಳನ್ನು ಶೀಘ್ರ ವಿಲೇವಾರಿ ಮಾಡುವ ಮೂಲಕ ಸಾಂಕ್ರಮಿಕ ರೋಗಗಳು ಹರಡದಂತೆ ತಡೆಯಬೇಕು ಎಂದು ಹಿರಿಯ ಆರೋಗ್ಯ ಸಹಾಯಕ ಆರ್.ಬಿ.ಪುಟ್ಟೇಗೌಡ ಸಲಹೆ ನೀಡಿದರು.

ಹಳೇಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ಎಂ.ಎನ್.ಆಶಾ, ಆಶಾ ಕಾರ್ಯಕರ್ತೆ ವಸಂತಮ್ಮ, ಗ್ರಾಮಸ್ಥೆ ಸರೋಜಮ್ಮ ಇದ್ದರು.

Leave a Reply

Your email address will not be published. Required fields are marked *